ಅಂಗನವಾಡಿ ನೌಕರರ ಬೇಡಿಕೆ : ಕೇಂದ್ರ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ಅಂಗನವಾಡಿ ನೌಕರರ ಬೇಡಿಕೆ : ಕೇಂದ್ರ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ಅಂಗನವಾಡಿ ನೌಕರರ ಬೇಡಿಕೆ : ಕೇಂದ್ರ ಬಜೆಟ್ ಪ್ರತಿ ಸುಟ್ಟು ಪ್ರತಿಭಟನೆ

ನಾಗರಾಜ್ ದಂಡಾವತಿ ವರದಿ ಶಹಾಬಾದ : - 2026-27ರ ಕೇಂದ್ರ ಬಜೆಟ್‌ನಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರು ಸೇರಿದಂತೆ ಒಂದು ಕೋಟಿ ಯೋಜನಾ ಕಾರ್ಯಕರ್ತೆಯರ ಸಂಕಷ್ಟ ಮತ್ತು ಹಕ್ಕುಗಳ ಮಾರಣಾಂತಿಕ ಮೌನವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕ ಕಾರ್ಯದರ್ಶಿ ಶೇಖಮ್ಮ ಕುರಿ ರವರು ಹೇಳಿದರು. 

ಅವರು ನೆಹರು ವೃತ್ತದಲ್ಲಿ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ವತಿಯಿಂದ ಹಮ್ಮಿಕೊಂಡ ಕೇಂದ್ರದ ಬಜೆಟ್ ವಿರುದ್ಧ ಖಂಡಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು. 

ಐಸಿಡಿಎಸ್, ಶಾಲಾ ಮಧ್ಯಾಹ್ನದ ಊಟ ಯೋಜನೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‌ನಂತಹ ಮೂಲಭೂತ ಸೇವಾ ಯೋಜನೆಗಳಲ್ಲಿನ ಮೂಲಸೌಕರ್ಯ ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಬಜೆಟ್ ನಲ್ಲಿ ಮೌನವಾಗಿಸಲಾಗಿದೆ, ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತೇವೆ ಎಂದು ಹೇಳುವ ಭಾರತ ಸರ್ಕಾರ, ತಳಮಟ್ಟದ ಕಾರ್ಯಕರ್ತರ ಸಂಭಾವನೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ, ಯೋಜನಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ಇಲ್ಲ, ಗ್ರಾಚ್ಯುಟಿ ನೀಡುವ 2022 ರ ಸುಪ್ರೀಂ ಕೋರ್ಟ್ ಆದೇಶವನ್ನು ಸಹ ಸರ್ಕಾರವು ಇನ್ನೂ ಜಾರಿಗೆ ತಂದಿಲ್ಲ, ಅಂಗನವಾಡಿ ಯೋಜನೆಯು 2025ಕ್ಕೆ 50 ವರ್ಷಗಳನ್ನು ಪೂರೈಸಿದೆ, 3.38 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, 4.61 ಲಕ್ಷ ಕೇಂದ್ರಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಲ್ಲೂಕ ಅಂಗನವಾಡಿ ನೌಕರರ ಸಂಘದ ವತಿಯಿಂದ ಕೇಂದ್ರದ ವಿರುದ್ದ ಘೋಷಣೆ ಕೂಗಿ ಸರಕಾರ ಮಂಡಿಸಿದ ಬಜೆಟ್ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. 

ನಗರ ಪೊಲೀಸ ಠಾಣೆಯ ಸಿಬ್ಬಂದಿ ಪುತ್ರಪ್ಪ ಮತ್ತು ಸಚಿನ ಚಹ್ವಾಣ ಬಂದೋಬಸ್ತ್ ಮಾಡಿದ್ದರು.

ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಮೈತ್ರಾಬಾಯಿ ತಳವಾರ, ಅಂಬುಜಾ, ರುದ್ರಮ್ಮ, ಸುವರ್ಣ, ರಂಜೀತಾ, ಗುಜ್ಜಮ್ಮ ಹಾಗೂ ನಾಗಪ್ಪ ರಾಯಚೂರಕರ ಸೇರಿದಂತೆ ಅನೇಕ ಅಂಗನವಾಡಿ ನೌಕರರು ಭಾಗವಹಿಸಿದ್ದರು.