ಪುಟ್‌ಪಾತ್ ಅಂಗಡಿಗಳ ತೆರವಿಗೆ ಆಕ್ರೋಶ

ಪುಟ್‌ಪಾತ್ ಅಂಗಡಿಗಳ ತೆರವಿಗೆ ಆಕ್ರೋಶ
ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ನಲ್ಲಿರುವ ಪುಟ್ ಪಾತ್ ಗಳನ್ನು ತೆರವುಗೊಳಿಸಿ ವ್ಯಾಪ್ಯಾರಸ್ಥರಿಗೆ ಕಿರುಕುಳ ನೀಡುತ್ತಿರುವ ಮಹಾನಗರ ಪಾಲಿಕೆ ನಡೆಯನ್ನು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂದೀಪ ಭರಣಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಈಗಾಗಲೇ ನಗರದ ಬಹುತೇಕ ಮುಖ್ಯರಸ್ತೆಯಲ್ಲಿಯೇ ಪುಟ್ ಪಾತ್ ನಿರ್ಮಾಣವಾಗಿದ್ದು ,ಆದರೆ ಮಹಾನಗರ ಪಾಲಿಕೆಯ ಆಯುಕ್ತರು ಪುಟ್ ಪಾತ್ ನಲ್ಲಿ ವ್ಯಾಪಾರ ನಡೆಸುತ್ತಿರುವ ಮಾಲೀಕರಿಗೆ ನೋಟಿಸ ನೀಡದೆ ಏಕಾಏಕಿ ದಿಡೀರನೆ ದಾಳಿ ನಡೆಸಿ ಪುಟ್ ಪಾತ್ ಮೇಲೆ ಇರುವ ಡಬ್ಬಾಗಳನ್ನು ತೆರವುಗೊಳಿಸಿದ್ದು ಖಂಡನೀಯವಾಗಿದೆ ಎಂದರು.
ನಗರದ ಮಹಾನಗರ ಪಾಲಿಕೆ ಎದುರುಗಡೆ, ಸಿದ್ದಿಬಾಷಾ ದರ್ಗಾ,ಏಷಿಯನ್ ಮಾಲ,ಖ್ವಾಜಾ ಬಂದೇನವಾಜ ದರ್ಗಾ ಬಡಾವಣೆ,ಶರಣಬಸವೇಶ್ವರ ದೇವಸ್ಥಾನ ಎದುರುಗಡೆ, ಸುಪರ ಮಾರ್ಕೆಟ ಹಾಗೂ ನಗರದ ಸುತ್ತಮುತ್ತಲಿನ ಪ್ರದೇಶ ಬಿಟ್ಟು ಪಾಲಿಕೆಯ ಪರಿಸರ ಅಭಿಯಂತರರು ಮೇಲೆ ತಿಳಿಸಿದ ಎಲ್ಲಾ ಸ್ಥಳಗಳನ್ನು ಬಿಟ್ಟಿ ಅನ್ನಪೂರ್ಣ ಕ್ರಾಸ್ ನಲ್ಲಿರುವ ಡಬ್ಬಾಗಳನ್ನು ತೆರವುಗೊಳಿಸಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು ?
ವ್ಯಾಪಾರಿಗಳು ಅಂಗಡಿಗಳನ್ನು ತೆರವುಗೊಳಿಸದಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಏಕಾಏಕಿ ಬಂದು ಅಂಗಡಿಗಳನ್ನು ಹೊಡೆದು ಹಾಕಿದ್ದಾರೆ. ಈ ಚಿಕ್ಕ ಅಂಗಡಿಗಳನ್ನು ಇಟ್ಟುಕೊಂಡು ಸಂಸಾರ ಮಾಡುತ್ತಾ ದಶಕಗಳಿಂದ ಜೀವನ ನಡೆಸುತ್ತಾ ಇದ್ದಾರೆ. ಆದರೆ ಅದಿಕಾರಿಗಳು ಅವರ ಬದುಕನ್ನು ನೋಡದೆ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಮುಂದೆ ಅವರು ಹೇಗೆ ಜೀವನ ಮಾಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.