ಕನ್ನಡಕ್ಕೆ ಮರುಜನ್ಮ ನೀಡಿದ ಡಾ.ಚನ್ನಬಸವ ಪಟ್ಟದ್ದೇವರು : ಎಸ್.ಎನ್.ಶಿವಣಕರ್
ಕಮಲನಗರದಲ್ಲಿ ಕಸಾಪದಿಂದ ಪಟ್ಟದ್ದೇವರ 136ನೇ ಜಯಂತ್ಯುತ್ಸವ,
ಕನ್ನಡಕ್ಕೆ ಮರುಜನ್ಮ ನೀಡಿದ ಡಾ.ಚನ್ನಬಸವ ಪಟ್ಟದ್ದೇವರು : ಎಸ್.ಎನ್.ಶಿವಣಕರ್
ಕಮಲನಗರ :ಗಡಿಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಡಾ.ಚನ್ನಬಸವ ಪಟ್ಟದ್ದೇವರು, ಗಡಿಭಾಗದಲ್ಲಿ ನಿಜಾಮನ ವಿರೋಧದಿಂದ ಸೊರಗಿ ಹೋಗಿದ್ದ ಕನ್ನಡ ಭಾಷೆಗೆ ಮರುಜನ್ಮ ನೀಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎನ್.ಶಿವಣಕರ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಡಾ.ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಕನ್ನಡ ಭಾಷೆ ಹಾಗೂ ವಚನ ಸಾಹಿತ್ಯವನ್ನು ಕಟ್ಟುವ ಕೆಲಸ ಮಾಡಿದ ಡಾ.ಚನ್ನಬಸವ ಪಟ್ಟದ್ದೇವರ ಜಯಂತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾಡುತ್ತಿರುವುದು ಅರ್ಥಪೂರ್ಣವೆನಿಸಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್ ಮಾತನಾಡಿ, ಅಂದಿನ ಕಾಲದಲ್ಲಿ ಬೇರೂರಿದ್ದ ಜಾತೀಯತೆ, ಮೂಢನಂಬಿಕೆ, ಮೇಲು-ಕೀಳು ಎಂಬ ಭಾವ ತೊಡೆದು ಹಾಕಿ ಕಲ್ಯಾಣ ರಾಜ್ಯದ ನಿರ್ಮಾಣ ಮಾಡಲು ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಶ್ರಮಿಸಿದ ಹಾಗೆಯೇ, 20ನೇ ಶತಮಾನದಲ್ಲಿ ಪಟ್ಟದ್ದೇವರು ಅದನ್ನು ಅದನ್ನು ಮುಂದುವರಿಸಿಕೊಂಡು ಬಂದರು ಎಂದು ಬಣ್ಣಿಸಿದರು.
ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಅಧ್ಯಕ್ಷತೆ ವಹಿಸಿದ್ದರು.
ಕರವೇ ತಾಲೂಕು ಅಧ್ಯಕ್ಷ ಮಂಜು ಸ್ವಾಮಿ, ಕಸಾಪ ಕೋಶಾಧ್ಯಕ್ಷ ಯಶವಂತ ಬಿರಾದಾರ, ಉಪಾಧ್ಯಕ್ಷ ಧನರಾಜ ಭವರಾ, ಸಾಹಿತಿ ಸಂಗಮೇಶ ಮುರ್ಕೆ, ಎಎಸ್‍ಐ ಯಾದವ್, ಬಾಲಾಜಿ ತೇಲಂಗ್, ಮನೋಹರ ಬಿರಾದಾರ, ಶಿವಕುಮಾರ ಪಾಟೀಲ್, ಗುಂಡಪ್ಪ ದಾನಾ, ಮನೋಜ ಹಿರೇಮಠ, ಪರಮೇಶ್ವರ ರಾಂಪುರೆ, ನಿತಿನ್ ಶಿವಣಕರ, ಮಹಾದು ಬರ್ಗೆ, ಸಂತೋಷ ಸುಲಾಕೆ, ಉತ್ತಮರಾವ ಮಾನೆ, ಸಂಜೀವಕುಮಾರ ಮುಳೆ, ಸಂಗಮೇಶ ಝುಲ್ಪೆ, ಅಮೂಲ ಸೂರ್ಯವಂಶಿ, ಸಾಯಿನಾಥ ಕಾಂಬಳೆ, ಮಹೇಶ ಪಾಟೀಲ್, ಇತರರಿದ್ದರು.
ಪ್ರಶಾಂತ ಖಾನಾಪುರೆ ಸ್ವಾಗತಿಸಿದರು. ಮಹಾದೇವ ಮಡಿವಾಳ ನಿರೂಪಣೆ ಮಾಡಿದರು.
ಗಡಿಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಅದ್ಭುತ ಕ್ರಾಂತಿ ಮಾಡಿದ್ದಾರೆ. ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುವುದರ ಮೂಲಕ ಕನ್ನಡ ಭಾಷೆಯನ್ನು ಜೀವಂತವಾಗಿರಿಸಿದ್ದಾರೆ. ಪಟ್ಟದ್ದೇವರು ಕನ್ನಡಿಗರ ಮನೆ ದೇವರು.
- ಪ್ರಶಾಂತ ಮಠಪತಿ, ಕಸಾಪ ತಾಲೂಕು ಅಧ್ಯಕ್ಷ
ಕಮಲನಗರದಲ್ಲಿ ಜನಿಸಿದ ಡಾ. ಚೆನ್ನಬಸವ ಪಟ್ಟದ್ದೇವರು ಗಡಿನಾಡಿನೊಳಗೆ ಕನ್ನಡವ ಬೆಳೆಸಿದ ಅಕ್ಷರದ ಸಂತ, ಕನ್ನಡಿಗರ ವಸಂತ, ಶತಮಾನ ಕಂಡ ಶತಾಯುಷಿ ಮಹಾಂತರು ನಮ್ಮಲ್ಲೆರಿಗೂ ಹೆಮ್ಮೆ ಅಷ್ಟ ಅಲ್ಲ. ಕನ್ನಡಿಗರ ಹೆಮ್ಮೆ.
- ಎಮ್.ಎಸ್.ಹಿರೇಮಠ, ಡಿಗ್ಗಿ ಹಿರೇಮಠ ಟ್ರಸ್ಟ್ ಅಧ್ಯಕ್ಷ
