ಓಂ ಪತ್ತಿನ ಸಹಕಾರ ಸಂಘದ 5ನೇ ವರ್ಷದ ವಾರ್ಷಿಕೋತ್ಸವ
ಓಂ ಪತ್ತಿನ ಸಹಕಾರ ಸಂಘದ 5ನೇ ವರ್ಷದ ವಾರ್ಷಿಕೋತ್ಸವ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಪತ್ತಿನ ಸಹಕಾರ ಸಂಘಗಳು ಮಹಿಳೆಯರಿಗೆ ಹೆಚ್ಚು ಸಾಲ ನೀಡಿದರೆ, ಅವರು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಾರೆ ಎಂದು ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಸಲಹೆ ನೀಡಿದರು.
ಅವರು ನಗರದ ಸೆಮ್ಸ್ ಫಂಕ್ಷನ್ ಹಾಲ್ ನಲ್ಲಿ ಓಂ ಪತ್ತಿನ ಸಹಕಾರ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಿಳೆಯರಿಂದ ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ, ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಠೇವಣಿದಾರರು ಹಾಗೂ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು
ಆಡಳಿತ ಮಂಡಳಿಯವರು ಪ್ರಾಮಾಣಿಕತೆ ಸೇವಾ ಮನೋಭಾವ ಹಾಗೂ ಸ್ವಚ್ಛ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡಿ, ಗ್ರಾಹಕರ ಮನಸ್ಸು ಗೆಲ್ಲಬೇಕು ಎಂದರು.
5 ವರ್ಷದಿಂದ ಓಂ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿರುವುದರ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಕಲಬುರಗಿ ಡಿಸಿಸಿ ಬ್ಯಾಂಕ್ ವತಿಯಿಂದ 5 ಲಕ್ಷ ರೂ.ಗಳ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಸಾಯಿ ಮಂದಿರ ಅಗಸ್ತ್ಯ ಮಹರ್ಷಿ ಪೀಠ ತೋನಸನಹಳ್ಳಿಯ ಕೊಟ್ಟುರೇಶ್ವರ ಗುರೂಜಿ, ಹೊನಗುಂಟ ಬೀರಲಿಂಗೇಶ್ವರ ಪೀಠಾಧಿಪತಿ ಪದ್ಮಣಪ್ಪ ಮುತ್ಯಾ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ನಿಂಗಣ್ಣ ಹುಳಗೋಳ್ಕರ, ಡಾ. ವಿಶ್ವನಾಥ ಬೆಲ್ಲದ ಮಾತನಾಡಿದರು.
ರಾಮಣ್ಣ ಇಬ್ರಾಹಿಂಪುರ ಪ್ರಸ್ತನಿಕವಾಗಿ ಮಾತನಾಡಿದರು.
ಶರಣಬಸಪ್ಪ ಕೋಬಾಳ, ಬಾಬುರಾವ್ ಪಾಚಾಂಳ, ಸೋಮಶೇಖರ ಕೆರಳ್ಳಿ, ಪ್ರಕಾಶ ಸಜ್ಜನ, ವಿರೂಪಾಕ್ಷ ಸ್ವಾಮಿ, ನಿಂಗಣ್ಣ ಸಂಘಾವಿ ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಸವರಾಜ ಮದ್ರಿಕಿ ವಹಿಸಿ ಮಾತನಾಡಿದರು
ಹನುಮಂತ ಜಾಧವ ನಿರೂಪಿಸಿ, ವಂದಿಸಿದರು, ಸಂಘದ ನಿರ್ದೇಶಕರು ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಾಘವೇಂದ್ರ ಎಂಜಿ, ಡಿವಿ ಅಂಗಡಿ, ಮಲ್ಲಿಕಾರ್ಜನ ಇಟಗಿ, ಅಮರ ಕೋರೆ, ಸಿದ್ದು ಚೌಧರಿ, ದೇವಿಂದ್ರ ಕೋಬಾಳ, ಸಿದ್ದು ಸಜ್ಜನ, ಮೋಹನ ಹಳ್ಳಿ, ವಿಜಯ ಕುಮಾರ ಕಂಠಿಕರ, ಆಕಾಶ ಒಡೆಯರ, ಭೀಮಶಾ ಗಚ್ಚಿನಮನಿ, ತಿಪ್ಪಣ್ಣ ಹೆಡಗಿಮದ್ರಿ, ಶೇಟಪ್ಪ ಬೋರಗಿ ಭಾಗಿಯಾಗಿದ್ದರು.
