ಗಂವ್ಹಾರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಸದಸ್ಯತ್ವದಿಂದ ಪಿಡಿಓ ಮತ್ತು ಅಭಿಯಂತರರನ್ನು ಸೇವೆಯಿಂದ ವಜಾಗೊಳಿಸಲು ಧರಣಿ : ಅಮೃತ್ ಪಾಟೀಲ ಸಿರನೂರ
ಗಂವ್ಹಾರ ಗ್ರಾಮ ಪಂಚಾಯತಿಯ ಅಧ್ಯಕ್ಷರ ಸದಸ್ಯತ್ವದಿಂದಪಿಡಿಓ ಮತ್ತು ಅಭಿಯಂತರರನ್ನು ಸೇವೆಯಿಂದ ವಜಾಗೊಳಿಸಲು ಧರಣಿ ಸತ್ಯಗ್ರಹ .
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ನಡೆದ ಲಕ್ಷಾಂತರ ರೂ. ಅವ್ಯವಹಾರದ ತನಿಖೆಗೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಹಾಗೂ ರೈತ ಸಂಘದಿಂದ ಮಾನ್ಯ ಉಸ್ತುವಾರಿ ಸಚಿವರಿಗೆ , ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಆದರೆ ತಿಂಗಳುಗಳು ಗತಿಸಿದರೂ ನಮಗೆ ಯಾವುದೇ ಹಿಂಬರಹ ಬಂದಿರುವದಿಲ್ಲ ಮಾನ್ಯರೇ ತನಿಖೆಗೆ ವಿಳಂಬ ಮಾಡುತ್ತಿರುವದು ಏಕೆ?
ನಿಮ್ಮ ಕಛೇರಿ ಎದುರು ಧರಣಿ ಸತ್ಯಗ್ರಹ ಮಾಡಿ ಅವ್ಯವಹಾರಕ್ಕೆ ಸಂಬಂಧಪಟ್ಟ, ಅಧ್ಯಕ್ಷ/ಪಿಡಿಓ ಮತ್ತು ಅಭಿಯಂತರರು ಇವರುಗಳನ್ನು ಸೇವೆಯಿಂದ ಮತ್ತು ಸದಸ್ಯತ್ವದಿಂದ ವಜಾಗೊಳಿಸಲು ಮತ್ತು ಸಮಗ್ರ ತನಿಖೆಗೆ ಆಗ್ರಹಿಸಿ ಇವತ್ತು ಎರಡು ಸಂಘಟನೆ ಜೊತೆಗೂಡಿ ತಮ್ಮ ಕಛೇರಿ ಎದುರು ಸತ್ಯಗ್ರಹ ಮಾಡಿ ಮನವಿ ಸಲ್ಲಿಸಲಾಗುತ್ತಿದೆ. ಎಂದು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಅಮೃತ್ ಪಾಟೀಲ್ ಸಿರನೂರ ಹೇಳಿದರು.
ಒಂದು ವೇಳೆ ತಾವು ವಿಳಂಬ ಅಥವಾ ನಿರ್ಲಕ್ಷ್ಯ ಮಾಡಿದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಮಲ್ಲಿಕಾರ್ಜುನ ,ಪ್ರಶಾಂತ್ ಕುಮಾರ್, ಮಹಾಂತಗೌಡ ಹೂಗಾರ್, ಶಿವಾನಂದ ,ಸಾಯಬಣ್ಣ, ರವಿ ಒಂಟಿ ಪ್ರತಿಭಟನೆಯಲ್ಲಿ ಭಾಗವಹಿಸಿದರು