ಜನಪರ ಸಾಹಿತ್ಯ ನೆಲೆಯ ಕರ್ಜಗಿಯವರು- ಪ್ರೊ.ಭಾಸ್ಕರ

ಜನಪರ ಸಾಹಿತ್ಯ ನೆಲೆಯ ಕರ್ಜಗಿಯವರು- ಪ್ರೊ.ಭಾಸ್ಕರ

ಜನಪರ ಸಾಹಿತ್ಯ ನೆಲೆಯ ಕರ್ಜಗಿಯವರು- ಪ್ರೊ.ಭಾಸ್ಕರ

ಕಲಬುರಗಿ : ಸಾಹಿತ್ಯ ಸಮಾಜಪರ, ವೈಚಾರಿಕ ನಿಲುವಿನಿಂದ ಬರೆದ ಸಾಹಿತ್ಯ ಅಮರ. ವಚನ ಮತ್ತು ದಾಸ ಸಾಹಿತ್ಯ ಎವರ್ ಗ್ರೀನ್ ಹಾಗೇ ಐದು ಕವನ ಸಂಕಲನದ ಮೂಲಕ ರವೀಂದ್ರ ಕರ್ಜಗಿ ಅವರ ಸಾಹಿತ್ಯ ಜನಪರವಾದ ಸತ್ಯದ ನೆಲೆಯಲ್ಲಿ ರಚಿಸಿದ ಸಾಹಿತಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ, ಸಾಹಿತಿ ಪ್ರೊ.ಟಿ.ಎಂ.ಭಾಸ್ಕರ ಅಭಿಮತ ವ್ಯಕ್ತಪಡಿಸಿದರು.

    ಕಲಾ ಮಂಡಳದಲ್ಲಿ ಏರ್ಪಡಿಸಿದ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಪ್ರೊ.ರವೀಂದ್ರ ಕರ್ಜಗಿ ಬದುಕು- ಬರಹ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಸಾಹಿತ್ಯದಲ್ಲಿ ಸತ್ಯದ ಬರೆಹ ಬಂದಾಗ ಮಿಥ್ಯ ಹೋಗಿ ಬಿಡುವುದು. ಕನ್ನಡ ಮನಸ್ಸು ಅವರದ್ದು, ಪಾಠ ಮಾಡಿ ಅಸಂಖ್ಯಾತ ವಿದ್ಯಾರ್ಥಿ ಸೃಷ್ಟಿಸಿದ ಉತ್ತಮ ಪ್ರಾಧ್ಯಾಪಕರಾಗಿ, ನೂರು ವರ್ಷ ಕಾಲ ರಸ ಋಷಿಗಳಾಗಿ ಬದುಕು ಬಾಳಲಿ ಹರುಷಲಿ ಸಾಹಿತ್ಯ ವಸ್ತುನಿಷ್ಠವಾಗಿರಬೇಕು ಜನಮಖಿಯಾಗಿ ಸಾಹಿತ್ಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

   ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್‌. ನಿರಗುಡಿ ಸಿರಿಗನ್ನಡ ವೇದಿಕೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕರ್ಜಗಿ ಅವರು ನಗುಮುಖದ ಲೇಖಕರೆಂದರು.

ಕರ್ಜಗಿ ಅವರ ಕಾವ್ಯದಲ್ಲಿ ವಿಡಂಬನೆ, ಹಾಸ್ಯದ ಮೂಲಕ ಸಾಮಾಜಿಕ ಚಿಂತನೆಯ ಕಾವ್ಯ ಗಮನ ಸೆಳೆಯುತ್ತವೆ ಎಂದು ಡಾ.ಮಲ್ಲಿನಾಥ ತಳವಾರ ಕಾವ್ಯ ಕುರಿತು ಉಪನ್ಯಾಸದಲ್ಲಿ ಬಣ್ಣಿಸಿದರು. ಕರ್ಜಗಿ ಅವರ ಜೀವನ ಚರಿತ್ರೆಗಳು ರಾಜಕೀಯ, ಶರಣರು, ಸಾಹಿತಿಗಳು, ಕನ್ನಡ ಕಟ್ಟಿದವರಾದ ಶಾಸ್ತ್ರಿ, ವಾಜಪೇಯಿ, ದಿನಕರ ದೇಸಾಯಿ, ಆನಂದಕಂದ, ಹೇರೂರು ಮೊದಲಾದವರ ಚರಿತ್ರೆಗೆ ಅಕ್ಷರ ರೂಪ ನೀಡಿದರು ಎಂದು ಪತ್ರಕರ್ತ- ಸಾಹಿತಿ ಸಂಗಮನಾಥ ರೇವತಗಾಂವ ನುಡಿದರು. ಗದ್ಯ ಸಾಹಿತ್ಯ ಕುರಿತು ಸಾಹಿತಿ ಡಾ.ಸಾರಿಕಾದೆವಿ‌ ಕಾಳಗಿ ಮಾತನಾಡಿ ಗದ್ಯದ ಹದ ವಿಸ್ತಾರವಾದ ಬರಹಗಳು ಬದುಕಿಗೆ ದಾರಿದೀಪವಾಗಿವೆ ಎಂದರು.

      ಅಭಿನಂದನ ಪರವಾದ ನುಡಿ ಆಡಿದ ಪ್ರೊ.ರವೀಂದ್ರ ಕರ್ಜಗಿ ಮಾತನಾಡಿ ನನಗೆ ಯಾವ ಆಸೆ ಇಲ್ಲ. ನನಗೆ ಈ ಕಲಬುರಗಿ ನೆಲದ ಋಣ ನನಗಿದೆ. ಸಾಹಿತ್ಯ- ಸಾಂಸ್ಕೃತಿಕ, ಪತ್ರಕರ್ತರು, ಅಭಿಮಾನಿ, ಶಿಷ್ಯರಿಗೆ, ವಂದನೆಗಳನ್ನು ಸಲ್ಲಿಸಿದರು. ಸಿರಿಗನ್ನಡ ವೇದಿಕೆಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಶಾಂತಾ ಪಸ್ತಾಪೂರ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು.

ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಇವರೊಬ್ಬ ಯಾವ ಪಂಥಕ್ಕೆ ಸೇರದ ಮಾನವಿಯ ಕವಿ ಅವರ ಶೈಕ್ಷಣಿಕ ಕೊಡುಗೆ ಅಪಾರವೆಂದರು.

     ಡಾ.ಶ್ರೀನಿವಾಸ ಕುಷ್ಟಗಿ, ಶ್ರೀ ಬಾಬುರಾವ ಜಮಾದಾರ, ಎ.ಕೆ.ರಾಮೇಶ್ವರ, ಡಾ.ಶೈಲಜಾ ಬಿರಾದಾರ, ಪ್ರೊ.ಭಾಗ್ಯಶ್ರೀ ನರಗುಂದ ಅವರ ವಿಶೇಷ ಸಾಧನೆಗೆ ಗೌರವ ಸನ್ಮಾನ ಮಾಡಲಾಯಿತು.

ಪ್ರೊ.ಶೋಭಾದೇವಿ ಚೆಕ್ಕಿ ಪ್ರಾರ್ಥನೆ ಗೀತೆ ಹಾಡಿದರು. ಬಸವರಾಜ ಶ್ರೀಂಗೇರಿ ಭಾವಗೀತೆ ಹಾಡಿದರು. ಡಾ.ಶೀಲಾದೇವಿ ಬಿರಾದಾರ ಸ್ವಾಗತಿಸಿದರು, ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು, ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು. ಡಾ.ಶ್ರೀಶೈಲ ನಾಗರಾಳ, ಅಪ್ಪಾರಾವ ಅಕೋಣಿ, ಡಾ.ಕೆ.ಎಸ್.ಬಂಧು, ರಾಜೇಂದ್ರ ಝಳಕಿ, ಪ್ರೊ.ಎಸ್.ಎಲ್.ಮಾಲಿಪಾಟೀಲ, ಡಾ.ಶೂಲಾಬಾಯಿ ಕಾಳಮಂದರಗಿ, ವಿಶ್ವನಾಥ ತೊಟ್ನಳ್ಳಿ, ಡಾ.ಮಲ್ಲಿಕಾರ್ಜುನ ಬಿರಾದಾರ,ಕಲ್ಲಯ್ಯ ಸ್ಥಾವರಮಠ ಜಯಶ್ರೀ ನರಗುಂದ, ಮನೋಹರ ಮರಗುತಗತಿ, ಡಾ.ಕೈಲಾಸ ಡೋಣಿ, ನರಸಿಂಗರಾವ ಹೇಮನೂರ, ಡಾ.ಮಹೇಶ ಬಡಿಗೇರ, ಡಾ.ಪೀರಪ್ಪ ಸಜ್ಜನ, ಡಾ.ಚಿದಾನಂದ. ಕುಡ್ಡನ್ ಡಾ.ಜಯದೇವಿ ಗಾಯಕವಾಡ, ಅಣ್ಣಾರಾವ ಯಲಮಡಗಿ, ಆಕಾಶ ತೆಗನೂರು ಮೊದಲಾದವರಿದ್ದರು.