ಮಂದೆವಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಪ್ರದರ್ಶನ ಶಿಬಿರ

ಮಂದೆವಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಪ್ರದರ್ಶನ ಶಿಬಿರ

ಮಂದೆವಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕರಾಟೆ ಪ್ರದರ್ಶನ ಶಿಬಿರ

ಜೆವರ್ಗಿ ತಾಲೂಕು ಮಂದೆವಾಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಸ್ವಯಂ ರಕ್ಷಣಾ ಯೋಜನೆಯಡಿ 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ತರಬೇತಿ ಹಾಗೂ ಪ್ರದರ್ಶನ ಶಿಬಿರವನ್ನು ಆಯೋಜಿಸಲಾಯಿತು.

ಈ ಶಿಬಿರದಲ್ಲಿ ಕರಾಟೆ ತರಬೇತುದಾರರಾದ ಜೇಟ್ಟಪ್ಪ ಎನ್. ಪೂಜಾರಿ (ಇಜೇರಿ) ಹಾಗೂ ರಾಹುಲ್ ಬಿ. ಮದರಿ ಅವರು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕುರಿತ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಮಲ್ಲಿಕಾರ್ಜುನ್ ಚೆನ್ನಾ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ಅಮಾನವೀಯ ಹಾಗೂ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯವಾಗಿದ್ದು, ಇಂತಹ ಘಟನೆಗಳನ್ನು ತಡೆಗಟ್ಟಲು ಪ್ರತಿಯೊಬ್ಬ ಹೆಣ್ಣುಮಕ್ಕಳು ಸ್ವಯಂ ರಕ್ಷಣಾ ಕಲೆಗಳಾದ ಕರಾಟೆಯನ್ನು ಕಲಿಯುವುದು ಅಗತ್ಯವಾಗಿದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ದೌಲತ್ತರಾಯ ಸಹಶಿಕ್ಷಕರು, ಶ್ರೀಮತಿ ಸೌಭಾಗ್ಯಲಕ್ಷ್ಮಿ ಸಹಶಿಕ್ಷಕಿ, ಸುರೇಶ್ ಹಾಲು,ರಮೇಶ್ ಕುಂಬಾರ್, ವಿನೋದ್ ಕುಮಾರ್ ಸಹಶಿಕ್ಷಕರು, ಹೊಲಿಗೆ ಶಿಕ್ಷಕಿಯರಾದ ಸುಜಾತ ಮೇಡಂ, ದ್ವಿತೀಯ ದರ್ಜೆ ಸಹಾಯಕರಾದ ಪೂಜಾ ಮೇಡಂ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಜೆವರ್ಗಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಾಳ್ ಹಾಗೂ ತಾಲೂಕು ಪರಿವೀಕ್ಷಣಾಧಿಕಾರಿ ಶಿವಪುತ್ರಪ್ಪ ಬಿರಗೊಂಡ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಜೇಟ್ಟಪ್ಪ ಎಸ್. ಪೂಜಾರಿ