ಬಿಳಿ ಬಂಗಾರದ ಹತ್ತಿ ಬೆಳೆಗೆ ಬೆಂಬಲ ಬೆಲೆ ೧೦ ಸಾವಿರ ನೀಡುವಂತೆ ಉಮೇಶ ಕೆ. ಮುದ್ನಾಳ ಆಗ್ರಹ

ಬಿಳಿ ಬಂಗಾರದ ಹತ್ತಿ ಬೆಳೆಗೆ ಬೆಂಬಲ ಬೆಲೆ ೧೦ ಸಾವಿರ ನೀಡುವಂತೆ ಉಮೇಶ ಕೆ. ಮುದ್ನಾಳ ಆಗ್ರಹ

ಬಿಳಿ ಬಂಗಾರದ ಹತ್ತಿ ಬೆಳೆಗೆ ಬೆಂಬಲ ಬೆಲೆ ೧೦ ಸಾವಿರ ನೀಡುವಂತೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಿ ಬೆಳೆಗೆ ಬೆಂಬಲ ಬೆಲೆ ಘೋಷಿಸ ಬೇಕು ಎಂದು ಪ್ರಾದೇಶಿಕ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ರವರು ಆಗ್ರಹಿಸಿದ್ದಾರೆ.

ಈ ಕುರಿತು ತಾಲ್ಲೂಕಿನ ಮುದ್ನಾಳ ಗ್ರಾಮದ ಹೊರಹೊಲದಲ್ಲಿರುವ ರೈತರಾದ ರವಿ ಮತ್ತು ಮಹೇಶ ಅವರು ಹತ್ತಿ ಬೆಳೆದ ಜಮೀನಿಗೆ ಇಂದು ಬೆಳಿಗ್ಗೆ ಬೇಟಿ ನೀಡಿ ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು 

ಕಲ್ಯಾಣ ಕರ್ನಾಟಕ ಯಾದಗಿರಿ ಜಿಲ್ಲೆಯಲ್ಲಿ ಸಕಾಲ ದಲ್ಲಿ ಉತ್ತಮವಾಗಿ ಮಳೆಯಾಗಿದೆ. ಈಗಾಲೇ ರಸಗೊಬ್ಬರ, ಬಿತ್ತನೆ ಬೀಜಕ್ಕಾಗಿ ಹಾಗೂ ಜಮೀನಿನಲ್ಲಿ ಬೆಳೆದ ಕಳೆ ತೆಗೆಯಲು ರೈತರು ಸಾಲ ಸೂಲ ಮಾಡಿ ಸಾವಿರಾರು ರುಪಾಯಿ ಖರ್ಚು ಮಾಡಿದ್ದಾರೆ. ಹಾಗೆಯೇ ರಸಗೊಬ್ಬರ ಮತ್ತು ಕೂಲಿ ಕಾರ್ಮಿಕರ ಬೆಲೆ ಕೂಡ ದುಬಾರಿ ಆಗಿರುವುದರಿಂದ ರೈತರು ಬೆಳೆದ ಬಿಳಿ ಬಂಗಾರದ ಹತ್ತಿ ಬೆಳೆಗೆ ಬೆಂಬಲ ಬೆಲೆ ಕೊಡದಿದ್ದರೆ ಬಡ ರೈತರಿಗೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಗುವುದರ ಜೊತೆಗೆ ಮಾಡಿದ ಸಾಲ ಸೂಲ ತೀರಿಸಲು ಕಷ್ಟವಾಗುತ್ತದೆ. ಜಿಲ್ಲೆಯಲ್ಲಿ ಬಹುಸಂಖ್ಯಾ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ವಾಣಿಜ್ಯ ಬೆಳೆಯಾದ ಹತ್ತಿಯಲ್ಲಿ ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಇಳುವರಿ ಮತ್ತು ಮಾರಾಟ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆೆ. ಮತ್ತು ಕೂಲಿ ಹಾಳು ಸಿಗದೆ ಹೊಲ್ಲದಲ್ಲೇ ಕೊಳೆಯುತ್ತಿದೆ ಹತ್ತಿ ಬೆಳೆ, ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತತಾಗಿ ರೈತರಿಗೆ ಪ್ರತಿ ಕುಂಟಾಲ್ ಹತ್ತಿಗೆ 

೧೦,೦೦೦/- ರಂತೆ ಸರ್ಕಾರದಿಂದ ಖರಿಸಿದಿ ರೈತರ ಖಾತೆಗೆ ನೇರವಾಗಿ ಹಣ ಜಮಾವಾಗುಂತೆ ನೋಡಿಕೊಳ್ಳಬೇಕು ಇದರಿಂದ ದಲ್ಲಾಳಗಳ ಮತ್ತು ಅಕ್ರಮ ಹತ್ತಿ ಖರಿದಿ ಕೇಂದ್ರಗಳಿAದ ರೈತರಿಗೆ ಮೋಸವಾಗುವುನ್ನು ತಪ್ಪಿಸಿದಂತಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರೈತರಪರವಾಗಿ ಅತಿ ಶ್ರೀಘದಲ್ಲಿ ಈ ನಿರ್ಣಯ ತೆಗೆದುಕೊಂಡರೆ ರೈತರ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರ ಈ ಹಿಂದೆ ಬರಗಾಲದಿಂದ ಸಂಕಷ್ಟದಲ್ಲಿದ್ದರು ಈಗ ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು ರೈತರಿಗೆ ಗಾಯದ ಮೇಲೆ ಬರೆಯಳದ್ದಾಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ಬೆಳೆದ ಬೆಳೆಗೆ ಬೆಂಬಲ ತುರ್ತಾಗಿ ಬೆಲೆ ಘೋಷಣೆ ಮಾಡದ್ದಿದರೆ ರೈತರು ಕುಟುಂಬ ಸಮೇತ ಮಹಾ ನಗರಗಳಿಗೆ ಗೂಳೆ ಹೋಗುವ ಪರಸ್ಥಿತಿ ಬರುತ್ತದೆ. ಇದ್ದರಿಂದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಉಮೇಶ.ಕೆ.ಮುದ್ನಾಳ ರವರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.