ಗಾಂಧೀಜಿಯವರ ತತ್ವ,ಆದರ್ಶಗಳು ಮೈಗೂಡಿಸಿಕೊಳ್ಳಿ - ಸವಿತಾ ಟೋಕಾಪುರ.

ಗಾಂಧೀಜಿಯವರ ತತ್ವ,ಆದರ್ಶಗಳು ಮೈಗೂಡಿಸಿಕೊಳ್ಳಿ - ಸವಿತಾ ಟೋಕಾಪುರ.

ಗಾಂಧೀಜಿಯವರ ತತ್ವ,ಆದರ್ಶಗಳು ಮೈಗೂಡಿಸಿಕೊಳ್ಳಿ - ಸವಿತಾ ಟೋಕಾಪುರ.

ಶಹಪುರ : ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಹೋರಾಟ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ಸವಿತಾ ಟೋಕಾಪುರ ಹೇಳಿದರು. 

ನಗರದ ಮೈಲಾರಲಿಂಗೇಶ್ವರ ವಸತಿ ನಿಲಯದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಶಹಪುರ ಆಯೋಜಿಸಿದ ಗಾಂಧಿ ಜಯಂತೋತ್ಸವ ನಿಮಿತ್ಯ ಸ್ವಚ್ಛತಾ ಅಭಿಯಾನ ಹಾಗೂ ಸಂಗೀತ ಸಂಭ್ರಮದಲ್ಲಿ ಸಸಿಗೆ ನೀರು ಎರೆಯುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ಸತ್ಯ,ಶಾಂತಿ,ಅಹಿಂಸೆ ಇವುಗಳ ಪ್ರತಿಪಾದಕರಾಗಿದ್ದರು,ಗಾಂಧೀಜಿ ಅವರ ದೃಷ್ಟಿಕೋನವು ಸಮಾಜದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡಿತ್ತು ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ನುಡಿದರು.

ಪ್ರತಿಷ್ಠಾನದ ಅಧ್ಯಕ್ಷ ಆನಂದ ಅಂಗಡಿ ಮಾತನಾಡಿ,ಭಾರತವು ಸುಸ್ಥಿರ ಅಭಿವೃದ್ಧಿ ಪಥದೊಂದಿಗೆ ಶುದ್ದ ಪರಿಸರ ಹಾಗೂ ದೀರ್ಘಾವಧಿಯಲ್ಲಿ ಹೆಚ್ಚು ಜಾಗೃತ ವ್ಯಕ್ತಿಗಳೊಂದಿಗೆ ನಿಜವಾದ ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಕಲ್ಪನೆ ಹೊಂದಿದ್ದರು ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸದಸ್ಯರೊಂದಿಗೆ ನಗರದ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕು.ಭಾಗ್ಯ ಹಾಗೂ ಮೇಘನಾ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು,ಈ ಸಮಾರಂಭದ ವೇದಿಕೆ ಮೇಲೆ, ಮಡಿವಾಳಪ್ಪ ಕ್ಯಾತನಾಳ,ಹೀನಾ ಬೇಗಮ್,ಸುಚಿತ್ರ ವಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು,ಶಿವಕುಮಾರ್ ಎಸ್ ನಿರೂಪಿಸಿದರು,ಪವನ್ ಕುಲಕರ್ಣಿ ಸ್ವಾಗತಿಸಿದರು, ಅರುಣ್ ದಿಗ್ಗಿ ವಂದಿಸಿದರು.