ಪದ, ಪಠ್ಯ ಮತ್ತು ಪಥದ ಪಯಣ -ಸಂಧ್ಯಾ ಹೊನಗುಂಟಿಕರ್ ಅವರ ಕಥೆ

ಪದ, ಪಠ್ಯ ಮತ್ತು ಪಥದ ಪಯಣ -ಸಂಧ್ಯಾ ಹೊನಗುಂಟಿಕರ್ ಅವರ ಕಥೆ

ಸಂಧ್ಯಾ ಹೊನಗುಂಟಿಕರ್ 

ಅಕ್ಟೋಬರ್ 23 — ಕಲ್ಯಾಣ ಕರ್ನಾಟಕದ ಖ್ಯಾತ ಬರಹಗಾರ್ತಿ, ಚಿಂತಕಿ, ರಂಗಕಲಾವಿದೆ ಮತ್ತು ಸಾಹಿತ್ಯಸೇವಕಿ ಸಂಧ್ಯಾ ಹೊನಗುಂಟಿಕರ್ ಅವರು ಕಲಬುರಗಿದವರು, ಸಂಧ್ಯಾ ಹೊನಗುಂಟಿಕರ್ ಅವರು ವಾಸುದೇವರಾವ್ ಮತ್ತು ಸರೋಜಾಬಾಯಿ ಕುಲಕರ್ಣಿ ದಂಪತಿಗಳ ಪುತ್ರಿ. ಬಾಲ್ಯವನ್ನು ಯಾದಗಿರಿಯ ಸಾಹಿತ್ಯಸಂಸ್ಕೃತಿಯ ವಾತಾವರಣದಲ್ಲಿ ಕಳೆದ ಅವರು ಎಂ.ಎ. (ಕನ್ನಡ) ಪದವಿ ಪಡೆದಿದ್ದಾರೆ. ಸಾಹಿತ್ಯ, ಸಮಾಜಸೇವೆ, ಅಭಿನಯ — ಇವೆಲ್ಲ ಅವರ ನಿಷ್ಠೆಯ ಕ್ಷೇತ್ರಗಳು.

ಸಾಹಿತ್ಯ ಲೋಕದಲ್ಲಿ ಅವರ ಕೊಡುಗೆ:

ಸಂಧ್ಯಾ ಹೊನಗುಂಟಿಕರ್ ಅವರ ವೈವಿಧ್ಯಮಯ ಸಾಹಿತ್ಯಸೃಷ್ಟಿಗಳು ನಾಡಿನ ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಅವರ ಪ್ರಮುಖ ಕೃತಿಗಳು 

* ಕಡಲ ಒಡಲು ಬಗೆದಷ್ಟು

* ಹರಿದ ಹಾಸಿಗೆ ಹಂಬಲ

* ಹಾರಲಾಗದ ನೊಣ

* ಒಂದೇ ಕ್ಯಾನ್ವಾಸಿನಲ್ಲಿ

* ಹೆಸರು ಕಳೆದುಕೊಂಡ ಊರು (ಕಥಾ ಸಂಕಲನ)

* ಶರಣರ ಹದಿನೈದು ಕತೆಗಳು (ಮಕ್ಕಳ ಕಥಾ ಸಂಕಲನ)

* ಸೂರ್ಯಮುಖಿ (ಪ್ರಬಂಧಗಳು)

* ಸಖಿ ಶಕ್ತಿ,ಯಶಸ್ವಿ ಬದುಕಿಗೆ ಮೆಟ್ಟಿಲು,ದಾಸ ದರ್ಪಣ ಮುಂತಾದುವು

ರಂಗಭೂಮಿ ಮತ್ತು ದೃಶ್ಯಮಾಧ್ಯಮಗಳಲ್ಲಿ:

ಅವರು ರಂಗಕಲಾವಿದೆಯಾಗಿ ಬೆಂಗಳೂರು ಮತ್ತು ಕಲಬುರ್ಗಿ ದೂರದರ್ಶನ ಕೇಂದ್ರಗಳಲ್ಲಿ ಪ್ರಸಾರವಾದ ಲಕ್ಕವ್ವನ ಮಂದಿ,ಸ್ತ್ರೀಲೋಕ,ಗ್ರಹಣ,ಸಹನಾ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಹಾಗೆಯೇ ವೇದಿಕೆ ನಾಟಕಗಳಲ್ಲಿ ಸಮಗಾರ ಹರಳಯ್ಯ, ಅಂಬಕ್ಕನ ಅಮೇರಿಕಾ ಪ್ರವಾಸ, ಯುದ್ಧಭಾರತ,ಮಗ ಮತ್ತು ಮಾಯಿನ ಗಿಡ ಮುಂತಾದ ಕೃತಿಗಳಲ್ಲಿ ಪಾತ್ರವಹಿಸಿದ್ದಾರೆ.

ಮಾಧ್ಯಮ ಹಾಗೂ ಸಾಹಿತ್ಯ ವೇದಿಕೆಗಳಲ್ಲಿ:

ಸಂಧ್ಯಾ ಹೊನಗುಂಟಿಕರ್ ಅವರು ರಾಜ್ಯಮಟ್ಟದ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಕಲಬುರ್ಗಿ ಆಕಾಶವಾಣಿಯ ಜನಪ್ರಿಯ “**ಸೂರ್ಯಮುಖಿ**” ಕಾರ್ಯಕ್ರಮದ ನಿರೂಪಕರಾಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಮೈಸೂರು ಆಕಾಶವಾಣಿಯ ಪದ ಸಂಸ್ಕೃತಿ ಸರಣಿಯ 12 ಭಾಗಗಳಲ್ಲಿ ಪಾಲ್ಗೊಂಡಿದ್ದಾರೆ.

ಅವರು “ಸಂಧ್ಯಾಕಾಲ” ಪತ್ರಿಕೆಯಲ್ಲಿ “ಮಾತಿನ ಕಟ್ಟೆ” ಎಂಬ ಅಂಕಣ ಬರಹಗಳನ್ನು ನೀಡಿದ್ದರು.

ಅವರ ಕಥೆಗಳು ಪಠ್ಯಕ್ರಮದಲ್ಲಿ:

* ಹಾರಲಾಗದ ನೊಣ— ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಪಠ್ಯದಲ್ಲಿ

* ಕಡಲ ಒಡಲು ಬಗೆದಷ್ಟು — ಸ್ನಾತಕೋತ್ತರ ಪಠ್ಯಕ್ರಮದಲ್ಲಿ

* ಹಾವು ಮುತ್ತಿನ ಹುಡುಕಾಟ— ಬೆಂಗಳೂರು ವಿಶ್ವವಿದ್ಯಾಲಯದ ಬಿಸಿಎ ಪಠ್ಯದಲ್ಲಿ

ಪ್ರಶಸ್ತಿ ಪುರಸ್ಕಾರಗಳು:

ಸಂಧ್ಯಾ ಹೊನಗುಂಟಿಕರ್ ಅವರು ಅನೇಕ ಗೌರವ ಮತ್ತು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ —

* ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ

* ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ

* ಧಾರವಾಡ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ

* ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ (ದ್ವಿತೀಯ ಬಹುಮಾನ)

* “ಸಂಚಯ” ಪತ್ರಿಕೆಯ ಕಥಾ ಮತ್ತು ಕವನ ಸ್ಪರ್ಧೆಗಳಲ್ಲಿ ಬಹುಮಾನ

* *ಕರವೇ ನಲ್ನುಡಿ* ಪತ್ರಿಕೆಯ ರಾಜ್ಯೋತ್ಸವ ಕಥಾ ಸ್ಪರ್ಧೆ – ಪ್ರಥಮ ಬಹುಮಾನ

* ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ – ಪ್ರಥಮ ಬಹುಮಾನ

* “ಖರೇವಂದ್ರ ತಪ್ಪು” ಬಾನುಲಿ ನಾಟಕಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಥಮ ಬಹುಮಾನ

* ರೋಟರಿ ಕ್ಲಬ್ ಕಲಬುರ್ಗಿಯಿಂದ “ಮಹಿಳಾ ರತ್ನ” ಗೌರವ

* ಕೆ.ಎಂ.ಎಫ್., ರಂಗಮಾಧ್ಯಮ, ಸಾಹಿತ್ಯ ಸಾರಥಿ ಪ್ರಶಸ್ತಿ ಮುಂತಾದ ಗೌರವಗಳು

ಸಂಧ್ಯಾ ಹೊನಗುಂಟಿಕರ್— ಸಾಹಿತ್ಯ, ರಂಗಭೂಮಿ, ಮಾಧ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮ ಬದ್ಧತೆ, ಶ್ರದ್ಧೆ ಮತ್ತು ಕೃತಿತ್ವದ ಮೂಲಕ ಕಲ್ಯಾಣ ಕರ್ನಾಟಕದ ಹೆಮ್ಮೆ ಪಡುವ ವಿಷಯ 

ಅವರ ಸಾಹಿತ್ಯಯಾತ್ರೆ ಇನ್ನಷ್ಟು ಬೆಳಕನ್ನು ಹರಿಸಿ, ಹೊಸ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಹಾರೈಕೆ!*

 -ಶರಣಗೌಡ ಪಾಟೀಲ ಪಾಳಾ