ಸುಧೀರ ಬಿರಾದಾರ

ಸುಧೀರ ಬಿರಾದಾರ
ಜನ್ಮದಿನಾಂಕ : 14ನೇ ಜನೇವರಿ 1991
ಜನ್ಮಸ್ಥಳ : ಕುರಕುಂಟಾ, ಸೇಡಂ ತಾಲೂಕು. ಕಲಬುರ್ಗಿ ಜಿಲ್ಲೆ
ವಿದ್ಯಾರ್ಹತೆ : ಪಿಯುಸಿ
ಆಸಕ್ತಿ ಕ್ಷೇತ್ರ : ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ
ಗೌರವ-ಪ್ರಶಸ್ತಿ : ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಸೇರಿದಂತೆ ಸ್ಥಳಿಯ ಸಂಘ ಸಂಸ್ಥೆಗಳಿಂದ ಮಾಧ್ಯಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಗೌರವ ಸನ್ಮಾನ.
ಸಾಹಿತ್ಯ ರಚನೆ : ಮಾಧ್ಯಮವಲ್ಲದೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಸೇಡಂ ತಾಲೂಕಿನಲ್ಲಿರುವ ಬೆರಳೆಣಿಕೆಯಷ್ಟು ಕಥೆ ಬರೆದವರಲ್ಲಿ ಒಬ್ಬರಾಗಿದ್ದಾರೆ. “ಗೆದ್ದ ಕೀರ್ತಿ” ಎಂಬ ಕಥಾ ಸಂಕಲನ ಇವರ ಮೊದಲ ಕೃತಿಯಾಗಿದೆ.
2017ರಲ್ಲಿ ಕೆಬಿಎನ್ ಟೈಮ್ಸ್ ಪತ್ರಿಕೆಯ ವರದಿಗಾರರಾಗಿ ಪತ್ರಿಕಾ ಲೋಕಕ್ಕೆ ಪಾದರ್ಪಣೆ ಮಾಡಿದರು. ನಂತರ ಎಸ್‍ಎಸ್‍ವಿ ಟಿ.ವಿ, ಉದಯಕಾಲ ಕನ್ನಡ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ 2022ರಿಂದ ಪ್ರಸ್ತುತದವರೆಗೂ ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಸೇಡಂ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಕೋಶಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
-: ವಿಸ್ತøತ :-
ತಾಯಿಯ ತವರೂರಾದ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಜನಿಸಿದ ಸುಧೀರ ಬಿರಾದಾರ ಪ್ರಾಥಮಿಕ ಶಿಕ್ಷಣ ತಂದೆಯ ಕರ್ಮಭೂಮಿಯಾದ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿ ಮುಗಿಸಿದ್ದಾರೆ. ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸೇಡಂನಲ್ಲಿ ಪೂರ್ಣಗೊಳಿಸಿದ್ದಾರೆ. ಆರಂಭದಲ್ಲಿ ಕಲಬುರಗಿಯ ಉರ್ದು ಪತ್ರಿಕೆ ಕೆಬಿಎನ್ ಟೈಮ್ಸ್ ದಿನಪತ್ರಿಕೆಗೆ ಕನ್ನಡ ಭಾಷೆಯಲ್ಲಿ ಸುದ್ದಿ ಕಳಿಸುವ ಮೂಲಕ ಮಾದ್ಯಮ ಲೋಕಕ್ಕೆ ಕಾಲಿಟ್ಟವರು, ನಂತರದಲ್ಲಿ ಎಸ್.ಎಸ್,ವಿ ಟಿವಿ, ಉದಯಕಾಲ ತಾಲೂಕು ವರದಿಗಾರನಾಗಿ ಕೆಲಸ ಮಾಡಿ, 2022ರಿಂದ ‘ಉದಯವಾಣಿ’ ಪತ್ರಿಕೆಯಲ್ಲಿ ಸೇಡಂ ತಾಲೂಕು ವರದಿಗಾರರಾಗಿ ಸೇರಿ ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ 2024ನೇ ವರ್ಷದ ಪತ್ರಿಕಾ ದಿನಾಚರಣೆಯಲ್ಲಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಅನೇಕ ಲೇಖನಗಳು ಉದಯಕಾಲ, ಉದಯವಾಣಿ ಪತ್ರಿಕೆಯಲ್ಲಿ ರಾಜ್ಯಮಟ್ಟದವರೆಗೆ ಪ್ರಕಟಗೊಂಡಿವೆ.