ಕಾಯಕ ಪುಸ್ತಕೋದ್ಯಮಿ: ಶ್ರೀ ಬಸವರಾಜ ಕೊನೇಕ್
ಕಾಯಕ ಪುಸ್ತಕೋದ್ಯಮಿ: ಶ್ರೀ ಬಸವರಾಜ ಕೊನೇಕ್
-ಲೇಖಕರು: ಡಾ.ಗವಿಸಿದ್ಧಪ್ಪ ಪಾಟೀಲ,ಸಾಹಿತಿ,ಕಲಬುರಗಿ
ಕರ್ನಾಟಕದ ಪುಸ್ತಕ ಪ್ರಕಾಶನ ಮತ್ತು ಪುಸ್ತಕೋದ್ಯಮದಲ್ಲಿ ಒಂದು ಭದ್ರವಾದ ಸ್ಥಾನ ತಂದು
ಕೊಟ್ಟವರು ಶ್ರೀ ಬಸವರಾಜ ಕೊನೇಕ್ ಅವರು.ಅವ ರೊಬ್ಬ ಶ್ರೇಷ್ಠ ಪ್ರಕಾಶಕರು.ಅವರಿಗೀಗ ಎಪ್ಪತ್ತೆರಡರ ಹರೆಯ ಅವರ ಪ್ರಕಾಶನಕ್ಕೆ ನಲವತ್ತೆಂಟರ ಪ್ರಾಯ! ಇಂತಹ ಸಾಧನೆಯನ್ನು ಮಾಡಿದ ವ್ಯಕ್ತಿ ಬಸವರಾಜರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಕೃಷಿಕ ಕುಟುಂಬದ ಗುರಪ್ಪ ಮತ್ತು ಇಟಾಬಾ ಯಿಯ ಮಗನಾಗಿ ೧೯೫೨ ರ ಬಸವ ಜಯಂತಿಯಂ ದು ಹುಟ್ಟಿದವರು.ಬಸವ ಜಯಂತಿಯಂದು ಹುಟ್ಟಿದ್ದಕ್ಕೆ ಬಸವರಾಜ ಎಂದು ನಾಮಕರಣ ಮಾಡಿದರು.ಇದಕ್ಕೆ ಬಡದಾಳದ ತೇರಿನಮಠದ ಶ್ರೀ ಚನ್ನಮಲ್ಲ ಶಿವಾಚಾರ್ಯರು ತ್ರಿಕಾಲ ಜ್ಞಾನಿ,ತಪಸ್ವಿಗ ಳಾಗಿದ್ದರು.ಈ ಮಗುವನ್ನು ನೋಡಿ ಮುಂದೆ ದೊಡ್ಡ ಸಾಧಕನಾಗುವನೆಂದು ಹೇಳಿದರು ಅದು ಸತ್ಯವಾಗಿದೆ.
ಬಡತನ ಹಸಿವು ಕಷ್ಟದ ದಿನ ಬಾಲಕ ಬಸವರಾಜ ಅವರಿಗೆ ಒದಗಿ ಬಂದವು.ಆಟವಾಡಿಕೊಂಡು,ತಿಂದುಂ ಡು ಇರಬೇಕಾದವನಿಗೆ ಬಡತನ ಅರಿವಿಗೆ ಬಂದು ಮಾ ಡ್ಯಾಳದಲ್ಲಿ ಪ್ರಾಥಮಿಕ ಶಾಲೆ ಓದಿದ್ದರಿಂದ ಕಲಬುರಗಿ ಯ ಅತ್ತೆಯಾದ ಶ್ರೀಮತಿ ನೀಲಮ್ಮ ಬಸವಣಪ್ಪ ಖ್ಯಾಲಪ್ಪನವರ ಮನೆಯಲ್ಲಿ ಹೈಸ್ಕೂಲ್ ಓದಲು ಕಳಿಸಿ ದರು.ಇಲ್ಲಿ ಕಲಿತರು ಎಂ.ಪಿ.ಎಚ್.ಎಸ್.ಪ್ರೌಢ ಶಾಲೆಗೆ
ಸೇರಿದರು.ಮೊದಲು ಓದು ಕಠಿಣವಾದರು ಬಿಡದ ಛಲದಿಂದ ಓದಿದರು.ಗಣಿತ,ರಸಾಯನಶಾಸ್ತ್ರ, ಬಾಯ ಲೋಜಿ ವಿಷಯ ಆಯ್ದುಕೊಂಡು ಓದಿದರು. ಆದರೆ ಹತ್ತನೆಯ ತರಗತಿಯಲ್ಲಿ ಫೇಲ್ ಆದರು.ಆಗ ತಂದೆಗೆ ನೋವಾಗಿತ್ತು .ಇವರಿಗೆ ಆದ ಗಾಯ ಶಾಪ ವರವನ್ನಾಗಿಸಿಕೊಂಡವರು.೧೯೬೯ರಲ್ಲಿ ತಂದೆ ಲಿಂಗೈ ಕ್ಯರಾದ ಮೇಲೆ ಮನಿ ಜವಾಬ್ದಾರಿ ಬಿತ್ತು.೧೩.೫೦. ಪೈಸೆ ಪೀ ಕಟ್ಟಲು ಹಣವಿಲ್ಲದಾಗ ವಿ.ಎಸ್.ಭಾವಿಕಟ್ಟಿ ಅವರು ಕರೆದು ಹಣ ಕೊಟ್ಟರು. ಕೆಲಸ ಕೊಟ್ಟರು. ಕಟ್ಟು ನಾ ಹಣ ಕೊಟ್ಟ ರು ಕಟ್ಟಿ ಪಾಸಾದರು.ಪುಸ್ತಕ ವ್ಯಾಪಾರದ ಅನುಭವ ಕಲಿಸಿ ಕೊಟ್ಟರು.ಮುಂದೆ ಧರ್ಮಪಾಲ ಆರ್ಯ ಪುಸ್ತ ಕದಂಗಡಿಯಲ್ಲಿ ಕೆಲಸಕ್ಕೆ ಸೇರಿದರು.೪೦ ರೂ ಸಂಬಳ.
೩೦ ರೂಪಾಯಿ ಊರಿಗೆ ಕಳಿಸಿ ೧೦ ರೂಪಾಯಿ ತಾವು ಇಟಗೊಂಡು ಜೀವನ ಸಾಗಿಸವುವಾಗ ಒಂದೇ
ಫೈಜಾಮ್ ಮತ್ತು ಶಟ್೯ದಲ್ಲಿ ಬದುಕು ಕಟ್ಟಿಕೊಂಡವ ರು.ಅವರ ಕಾಯಕದಲ್ಲಿ ನಿಷ್ಠೆ ಇತ್ತು.ಧರ್ಮಪಾಲ್ರ ಮಗಜಗದೀಶ ಹೈದ್ರಾಬಾದ್ ಹೋದಾಗ ಬಿಲ್ ಬರೆದು ಕೊಡಲಾಗದಿದ್ದಾಗ ಸ್ವತಃ ಬಸವರಾಜರು ಬಿಲ್ಲ ಬರೆದು ಕೊಟ್ಟವರು ಇದನ್ನರಿತ ಗ್ರಂಥಪಾಲಕ ನೀಲಕಂಠ ನವ ಣಿ ಅವರ ಮೇಲೆ ಪ್ರಭಾವ ಬೀರಿತು.೨೫ ಪೈಸೆ ಧರ್ಮ ಪಾಲರು ಕೊಟ್ಟು ಇಡ್ಲಿ ತಿಂದ ಬಾ ಎಂದಾಗ ಆ ಬಹು ಮಾನ ಇಂದಿಗೂ ನೆನೆಸುವರು.ಧರ್ಮಪಾಲರ ಮಗ ಜಗದೀಶರು ಎಸ್.ಎಸ್.ಪಾಟೀಲ ರಾಯಕೋಡ ಅಂಗಡಿಯಲ್ಲಿ ಎರಡು ಶಟ್೯ ಎರಡು ಫೈಜಾಮ್,ಎರ ಡು ಅಂಡರ್ ವೇರ್ ಕೊಡಿಸಿ ಹೊಲಿಸಿ ಕೊಟ್ಟವರು ಅರ್ಧ ಹಣ ಅವರದ್ದು ಅರ್ಧ ಇವರಿಗೆ ಹಾಕಿ ಪಗಾರದ ಲ್ಲಿ ಐದು ರೂಪಾಯಿ ಮುರಿದುಕೊಂಡು ಹೋದ್ರು.ಎರ ಡು ವರ್ಷದ ನೌಕರಿ ಮಾಡುತ್ತಲೇ ಖ್ಯಾಲಪ್ಪರ ಮನೆ ಬಿಟ್ಡು ರೂಮ್ ಮಾಡಿದರು.ನುಚ್ಚು ಕಟ್ಟಿದ್ದು ನೋಡಿ ನಾನು ದುಡಿದು ಕಲಿಸಿದ್ದು ಊಟಕ್ಕೆ ಆಗಲಿಲ್ಲ ಅಂದು ನೋವು ಮಾಡಿಕೊಂಡರು.ಬರಗಾಲ ೧೯೭೨ ರಲ್ಲಿ ಬಂದಿತು.ತಾಯಿ ತಮ್ಮ ನಾಗೇಂದ್ರ ಕೆಲಸ ಮಾಡುವುದು ಇದನ್ನೆಲ್ಲ ಕಂಡು ಹೆಚ್ಚು ಯಾರು ಸಂಬಳ ಕೊಡ್ತಾರೆ ಅಲ್ಲಿ ದುಡಿಯಬೇಕೆಂಬ ಕನಸಿಗೆ ಮತ್ತೆ ವಿ.ಎಸ್.ಭಾವಿಕಟ್ಟಿ ಹತ್ತಿರ ಸೇಲ್ಸ್ ಪ್ರತಿನಿಧಿ ಎಂದು ಮರು ಸೇರ್ಪಡೆಗೊಂಡು ೯೦ ರೂಪಾಯಿ ತಗೆದುಕೊಂ ಡು ೧೫ ರೂ ಸ್ವಂತ ಖರ್ಚಿಗೆ ೭೫ ರೂಪಾಯಿ ತಾಯಿಗೆ ಕಳಿಸಿದವರು.
ಸೇಲ್ಸ್ ಮನ್ ಆಗಿ ಇಡಿ ಕರ್ನಾಟಕ ಸುತ್ತಿ ಪುಸ್ತಕ ವ್ಯಾಪಾರದ ಅನುಭವ ಹೊಂದಿದರು.ಈ.ಎಸ್.ಭಾವಿಕ ಟ್ಟಿಯವರು೨೦೦ ರೂಪಾಯಿ ಸಂಬಳ ಏರಿಸಿದರು. ಅಲ್ಲಿಯೂ ಇವರ ದುಡಿಮೆಗೆ ಇಂದು ವರ್ಷದಲ್ಲಿ ೨೫ ಸಾವಿರ ಗಳಿಕೆ ಲಾಭ ಮಾಡಿದಾಗ ನಾನು ಸ್ವತಂತ್ರ ಮಾಡುವ ಶಕ್ತಿ ಇದೆ ಎಂದು ಅರಿತುಕೊಂಡರು.
ವೈವಾಹಿಕ ಜೀವನ: ಅತ್ತೆಯ ಮಾತಿಗೆ ಒಪ್ಪಿ ಬಸವಕ ಲ್ಯಾಣ ತಾಲೂಕಿನ ಧನ್ನೂರ( ಆರ್) ಗ್ರಾಮದ ಮಹಾಂ ತಪ್ಪ ಮತ್ತು ಸೀತಾಬಾಯಿಯವರ ಮಗಳಾದ ಬಸಮ್ಮ ರನ್ನು ನೋಡಿ ಮದುವೆ ನಿಶ್ಚಿತವಾಗಿ ೧೩-೦೫-೧೯೭೭ ರಲ್ಲಿ ಶರಣಬಸವೇಶ್ವರ ದೇವಾಲಯದಲ್ಲಿ ಜರುಗಿತು.ಸ್ವಂತ ಮನೆ ಇಲ್ಲದ್ದರಿಂದ ಸಿಂಗಲ್ ಬಾಡಿಗೆ ಮನೆಯಲ್ಲಿ ಸಂಸಾರ ಪ್ರಾರಂಭವಾದವು.ಚೊಚ್ಚಲ ಮಗ ಸಿದ್ಧಲಿಂಗ ಜನಿಸಿದ ಮೇಲೆ೧೦೦ ಮನೆ ಬಾಡಿಗೆ ತಗೆದುಕೊಂಡರು.ನಂತರ ಲಕ್ಷ್ಮಿ, ಸರೋ ಜಾ,ಶರಣಬಸವ ಜನಿಸಿದರು.ಇವರಲ್ಲಿ ಇಬ್ಬರು ಗಂಡು ಮಕ್ಕಳನ್ನು ಓದಿಸಿ ಎಂ.ಕಾಂ.ಎಂ.ಬಿ.ಎ.ಮಾಡಿಸಿ ತಮ್ಮ ಮೂಲ ಪುಸ್ತಕೋದ್ಯಮಕ್ಕೆ ಅಣಿಗೊಳಿಸಿದರು. ಇಬ್ಬರು ಹೆಣ್ಣು ಮಕ್ಕಳನ್ನು ಓದಿಸಿ ಇಂಜಿನಿಯರ್, ಡಾಕ್ಟರ್ ಮಾಡಿದರು.ಎಲ್ಲರಿಗೂ ಮದುವೆ ಮಾಡಿ ತುಂಬು ಸಂಸಾರ ತೂಗಿಸಿಕೊಂಡು ಬಂದವರು. ಇಂದು
ಮೊಮ್ಮಕ್ಕಳು ಜೊತೆ ಇದ್ದು ಮನೆಗೆದ್ದು ಮಾರುಗೆದ್ದ ಅಪ್ರತಿಮ ಸಾಧಕರಾದರು.
ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶ ನ ಸಂಸ್ಥೆಯನ್ನು ದಿನಾಂಕ:೧೨-೧೨-೧೯೭೭ರಲ್ಲಿ ಜಗತ್ ಸರ್ಕಲ್ ದ ಸುಪರ್ ಮಾರ್ಕೆಟ್ ಹೋಗುವ ದಾರಿಯಲ್ಲಿ ಗೂಡಂಗಡಿಯನ್ನು ಪ್ರಾರಂಭಿಸಿದರು. ಇವರ ವ್ಯವಹಾರ,ಸೇವೆ,ಭದ್ರತೆ ಕಂಡ ಕಾರ್ಪೋರೇ ಷನ್ ಬ್ಯಾಂಕಿನ ಅಂದಿನ ಮ್ಯಾನೇಜರ್ ಪಿ.ಡಿ.ನಾಯಕ ಅವರು ಮೂರು ಸಾವಿರ ಸಾಲ ನೀಡಿದರು ಇಂದು ಎಂಟತ್ತು ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಶ್ರೀ ಸಿದ್ದ ಲಿಂಗೇಶ್ವರ ಹೆಸರಿಡಲು ವಿದ್ಯಾರ್ಥಿ ಆದಾಗಲೇ ಅಕ್ಕ ಕಸ್ತೂರಿಬಾಯಿ ಸಿದ್ಧಲಿಂಗೇಶ್ವರ ನೂರೆಂಟು ನಾಮಾವಳಿ ಕೊಟ್ಟರು.ಪ್ರತಿ ನಿತ್ಯ ಸ್ನಾನ ಮಾಡಿ ಫೂಜೆ ಮಾಡಿ ಓದು ವ ಹವ್ಯಾಸ ಹೊಂದಿದರು.ಒಂದು ದಿನ ಶಾಲೆಯಲ್ಲಿ ಮೂತ್ರ ವಿಸರ್ಜನೆ ಹೋಗಿ ಬರುವಷ್ಟರಲ್ಲಿ ಪುಸ್ತಕ ಚೀಲ ಕಾಣೆಯಾಗಿತ್ತು. ಆಗ ಅಳು,ದುಃಖ ಒಟ್ಟಿಗೆ ಬಂದು ಕೊಳ್ಳಲು ಹಣವಿಲ್ಲವೆಂ ದು ಚಿಂತಿಸಿ ಆ ನಾಮಾವಳಿಯಲ್ಲಿ ಸೊಸೆ ನೀರು ತರುವಾಗ ನದಿಗೆ ಬಂದಾಗ ಕೈ ಜಾರಿ ಹೋಗಿ ಬಿಟ್ಟಾಗ ಸಿದ್ದಲಿಂಗ ಅಜ್ಜನ ಸ್ಮರಿಸಿ ದಾಗ ಆ ಕೊಡ ಹಿಂದಿರುಗಿ ಬಂತೆಂದು ಓದಿದ್ದು ನೆನಪಿ ಸಿಕೊಂಡು ನನ್ನ ಪುಸ್ತಕ ಚೀಲ ಎಲ್ಲಿ ಇತ್ತು ಅಲ್ಲೇ ಇರ ಬೇಕೆಂದು ಪ್ರಾರ್ಥನೆ ಮಾಡಿದಾಗ ಆ ಚೀಲ ಮತ್ತೆ ಅದೇ ಸ್ಥಳದಲ್ಲೇ ಇತ್ತು ಅಂದಿನಿಂದ ನಾಮಾವಳಿ ಇಂದಿಗೂ ಓದುತ್ತಾರೆ; ಮುಂದೆಯೂ ಓದುವರೆಂಬ ಅಚಲ ವಿಶ್ವಾಸದಿಂದ ಪ್ರಮಾಣ ಮಾಡಿದ್ದು ಹುಸಿ ಇಂದಿಗೂ ಹೋಗಿಲ್ಲ ಆ ಕಾರಣದಿಂದ ಶ್ರೀ ಸಿದ್ಧಲಿಂಗೇ
ಶ್ವರರ ಹೆಸರು ಇಟ್ಟರು; ಮಗನಿಗೂ ಇಟ್ಟರು.
ಸರಸ್ವತಿ ಗೋದಾಮದಲ್ಲಿ ಹಳೆ ಮನೆ ಖರೀದಸಿದರು ಸಣ್ಣ ಸ್ವಂತ ಮನೆಯಲ್ಲಿ ಜೀವನ ನಡೆಯಿತು. ೧೯೮೪ ರಲ್ಲಿ ಗೂಡಂಗಡಿ ರಸ್ತೆ ಬದಿ ವ್ಯಾಪಾರ ಬಿಟ್ಟು ೧೯೮೪ ರಲ್ಲಿ ಜಗತ್ ಸರ್ಕಲ್ ದಲ್ಲಿ ಚೌಡಪಗೊಳ ಅಂಗಡಿ ಬಾ ಡಿಗೆ ಪಡೆದು ಸಂಗಮ ಕಾಂಪ್ಲೆಕ್ಸ್ ತಮ್ಮ ಈರಣ್ಣನಿಗೆ ವಹಿಸಿದರು.
ಹತ್ತನೆಯ ತರಗತಿ ವಿದ್ಯಾರ್ಥಿ ಗಳಿಗೆ ಪಾಕೆಟ್ ಪುಸ್ತಕ ಇವರೇ ಬರೆದು ಮುದ್ರಿಸಿ ಮಾರಾಟ ಮಾಡಿದ ರು.೧೯೮೫ ರಲ್ಲಿ ಪ್ರೊ.ಭಾಲಚಂದ್ರ ಜಯಶೆಟ್ಟಿಯವರ ವಿಭೂತಿಯಾಂ ಗುಲಬರ್ಗಾ ವಿಶ್ವವಿದ್ಯಾಲಯದ ಪಠ್ಯ ಪ್ರಕಟಿಸಿದರು.ಇದೇ ಕೃತಿಗೆ ಪ್ರಶಸ್ತಿ ಲಭಿಸಿತು.ಬಿ.ಕಾಂ. ಎರಡನೇ ವರ್ಷಕ್ಕೆ ಶೃಂಗಾರ ತರಂಗಿಣಿ ಪಠ್ಯ ಪ್ರೊ.ಶಾ ಶ್ವತ ಸ್ವಾಮಿ ಮುಕುಂದಿಮಠ ಸಂಪಾದಿಸಿದರು.ಇದರ ಲ್ಲಿ ಶರಂಗಾರ ರಸ ಇದೆ ಎಂದು ರದ್ದು ಮಾಡಬೇಕೆಂದಾಗ ಹೋರಾಟ ಮಾಡಿ ಉಳಿಸಿಕೊಂಡರು.ಶೋ ರೂಮ್ನ್ನು ೨೦೦೦ದಲ್ಲಿ ಸರಸ್ವತಿ ಗೋದಾಮದ ಹಳೆಮನೆ ಕೆಡವಿ ಮೇಲೆ ಮನೆ ಕೆಳಗೆ ಶೋ ರೂಮ್ ಅನ್ನು ಡಾ.ಶರಣಬಸವಪ್ಪ ಅಪ್ಪ ಅವರು ಉದ್ಘಾಟನೆ ಮಾಡಿ "ಸರಸ್ವತಿ ಗೋದಾಮ ಎಂಬ ಹೆಸರು ಹಿಂದೆ ಇಟ್ಟಿದ್ದು ಇಂದು ಸಿದ್ಧಲಿಂಗೇಶ್ವರ ಭಂಡಾರ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಪುಸ್ತಕ ಮಳಿಗೆ,ಮಾರಾಟ,ಪ್ರಕಾಶನ ಕಲ್ಯಾಣ ಕರ್ನಾಟ ಕದಲ್ಲಿ ಬೃಹತ್ ಸಂಸ್ಥೆಯಾಯಿತು.
ನಂತರ ೧೯೯೧ ರಲ್ಲಿ ತಮ್ಮ ಶ್ರೀಮತಿ ಬಸಮ್ಮ ಬಸವರಾಜ ಕೊನೇಕ್ ಪತ್ನಿಯ ಹೆಸರಲ್ಲಿ ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು ಪ್ರಕಾಶನ ಪ್ರಾರಂಭಿಸಿ
ದರು.ತಮ್ಮ ಪ್ರಕಾಶನದ ಬೆಳ್ಳಿ ಹಬ್ಬ ಆಚರಣೆ ಹೊತ್ತಿಗೆ
ಮಗ ಸಿದ್ಧಲಿಂಗ ಕೊನೇಕ್ ಹೆಸರಲ್ಲಿ ಶ್ರೀ ಸಿದ್ಧಲಿಂಗೇಶ್ವ
ರ ಪ್ರಕಾಶನ ಸ್ಥಾಪಿಸಿದರು.೨೦೦೨ರಿಂದ ಪ್ರತಿವರ್ಷ ಪುಸ್ತಕ ಪ್ರಕಟಣೆ,ಬಿಡುಗಡೆ, ಸಮಾರಂಭ ಅದ್ದೂರಿ ಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ೨೦೧೫ ರಲ್ಲಿ ಬೆಂಗಳೂರು ಸಪ್ನ ಮಾದರಿಯಲ್ಲಿ ಶ್ರೀ ಸಿದ್ಧಲಿಂಗೇಶ್ವರ
ಬೃಹತ್ ಬುಕ್ ಮಾಲ್ ತೆರೆದು ಈ ಭಾಗದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪಠ್ಯ ಪುಸ್ತಕ ಮುದ್ರಣ: ಈ ಭಾಗದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪಠ್ಯ ಕ್ಕೆ ಅನುಗುಣವಾಗಿ ಪುಸ್ತಕ ಇರದಿರುವುದು ಗಮನಿಸಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಹಿತ ದೃಷ್ಟಿಯಿಂದ ಇಲ್ಲಿನ ಪ್ರತಿಭಾವಂತ ಪ್ರಾಧ್ಯಾಪಕರ ಮನೆಗೆ ಹೋಗಿ ಸಮಸ್ಯೆ ಹೇಳಿ ಪುಸ್ತಕ ಕೊಟ್ಟು ಸಿಲೆಬಸ್ ನೀಡಿ ನೂರಾ ರು ಬಾರಿ ಅಲೆದು ಬರೆಯಲು ಹಚ್ಚಿದ ಶ್ರೇಯಸ್ಸು ಕೊನೇಕ್ ಅವರಿಗೆ ಸಲ್ಲುತ್ತದೆ.ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಲಾಭವನ್ನು ಪಡೆದರು; ಪಡೆಯುತ್ತಿ ದ್ದಾರೆ.೨೦೦೧-೨೦೦೨ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಹದಿನಾ ರು ಪಠ್ಯ ಪುಸ್ತಕ ಮುದ್ರಿಸಿ ವಿತರಿಸುವಲ್ಲಿ ಸಫಲರಾಗಿ ವಿಜಯಿಯಾದರು.ಸರಕಾರದ ಕೆಲಸ ಬಹು ಬೇಗ ಮಾಡಿ ಕೊಡುವ ಮೂಲಕ ಜನಪ್ರಿಯತೆ ಹೊಂದಿದರು.
ಪ್ರಕಟಣೆ: ಮೂರು ಪ್ರಕಾಶನದ ಕಾರ್ಯ ಮೆಚ್ಚಬೇಕು.
ಇದುವರೆಗೂ ಮೂರು ಸಾವಿರದ ಐದನೂರಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ. ಸಾಹಿತ್ಯ ಮಾಲಿಕೆ, ಜನಪ್ರಿಯ ಮಾಲಿಕೆ,ದರ್ಶನ ಮಾಲಿಕೆ,ಪರಿ ಚಯ ಮಾಲಿಕೆ,ಸಾಹಿತಿಗಳ ಮಾಲಿಕೆ,ಆಧುನಿಕ ಸಾಹಿ ತ್ಯ ಸಂಪುಟಳು,ಬೆಳ್ಳಿ ಸಿದ್ಧ ಮಾಲಿಕೆಯ ಇಪ್ಪತ್ತಾರು ಕಲ್ಯಾಣ ಕರ್ನಾಟಕದ ಸಾಹಿತ್ಯ ಕೃತಿಗಳು,ಕೊನೇಕ್ ಅವರ ಷಷ್ಠ್ಯಬ್ದ ಸಮಾರಂಭದಲ್ಲಿ ರಾಜ್ಯದ ಅರವತ್ತು ಮೌಲಿಕ ಗ್ರಂಥ ಹೊರ ತಂದಿದ್ದಾರೆ. ಅಭಿನಂದನ ಗ್ರಂಥ ಸಂಸ್ಮರಣ ಗ್ರಂಥ,ಸಂಪಾದನೆಗಳು.ಗುಲಬರ್ಗಾ, ಬೀದರ, ರಾಯಚೂರು, ಬಳ್ಳಾರಿ, ವಿಜಯಪುರ ಮಹಿ ಳಾ,ಬೆಳಗಾವಿ ವಿಶ್ವವಿದ್ಯಾಲಯದ ಪಠ್ಯ ಪ್ರಕಟಿಸಿದ್ದಾರೆ
ಬೀದರದಿಂದ ಚಾಮರಾಜನಗರದವರೆಗೂ ಅವರು ಮುದ್ರಿಸಿದ ಪಠ್ಯ ಗಳು ಅಧ್ಯಯನ ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ ಜನಪ್ರಿಯತೆ ಪಡೆದು ಕೊಂಡಿತು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಅಧಿಕೃತ ಮಾರಾಟಗಾರರಾಗಿ, ಸದ್ಯ ಪ್ರಕಣೆಯ ಜವಾಬ್ದಾರಿ ಹೊತ್ತಿದ್ದಾರೆ. ಕೊನೇಕ್ ಏರಿದ ಎತ್ತರ ಯಾರು ಏರಲು ಸಾಧ್ಯವಿಲ್ಲ.
ಆಕಾಶವಾಣಿ ಹೊಸ ಓದು:
ಈ ಕಾರ್ಯಕ್ರಮ ಕ್ಕೆ ಪ್ರಾಯೋಜಿತ ರಾಗಿ ಹತ್ತು ವರ್ಷಗಳ ಕಾಲ ನಿರಂತರ ಪುಸ್ತಕ ಹೊಸ ಓದು ಅನಾವರಣಗೊಳಿಸಲು ಕೊನೇಕ್ ಅವರು ನೆರವಾಗಿದ್ದಾರೆ.
ಸಂವಾದ ಕಾರ್ಯಕ್ರಮ: ಕೊನೇಕ್ ಅವರು ನಮ್ಮ ಭಾಗದ ಸಾಹಿತಿಗಳ ಕೃತಿಗಳು ಮತ್ತು ಸಾಹಿತಿಗಳೊಂದಿ ಗೆ ಸಂವಾದ ಮತ್ತು ಅಟ್ಟದ ಮೇಲೆ ಬೆಟ್ಟದ ವಿಚಾರ , ನುಡಿ ನಮನ,ಕಾರ್ಯಕ್ರಮ ಅಯೋಜಿಸಿದ್ದಾರೆ.
ಬಸವ ಸಿರಿ ಪ್ರಶಸ್ತಿ: ಮೇ ೧,೨೦೧೩ರಿಂದ ಅವರ ಧರ್ಮಪತ್ನಿ ನಿಧನರಾದ ಬಳಿಕ ಪ್ರತಿ ವರ್ಷ ಬಸವ ಸಿರಿ ಪ್ರಶಸ್ತಿ, ಹನ್ನೊಂದು ಸಾವಿರ ರೂಪಾಯಿ ನಗದು ನೀಡಿ ಗೌರ ವಿಸಲಾಗುತ್ತಿದೆ.ನಾಡೋಜ ಡಾ.ಬಸವಲಿಂಗ ಪಟ್ಟದ್ದೇ ವರು,ಡಾ.ಸಿದ್ಧರಾಮ ಶರಣರು ಬೆಲ್ದಾಳ,ಅಕ್ಕ ಅನ್ನ ಪೂರ್ಣ,ಇಲ್ಲಕಲ್ಲ ಶ್ರೀ ಗಳು,ಅಲ್ಲಮಪ್ರಭು ಸ್ವಾಮೀಜಿ,ಡಾ.ಅಕ್ಕ ಗಂಗಾಂಬಿಕಾ,ಈಶ್ವರ ಮಂಟೂರ
ಮೊದಲಾದವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಬಸವರಾಜ ಕೊನೇಕ್ ಅವರು ಒಬ್ಬ ಲೇಖಕರಾಗಿ ಥಾಯ್ ಎಂಬ ಪ್ರವಾಸ ಕೃತಿ ರಚಿಸಿದ್ದಾರೆ. ಹಲವು ಅಭಿನಂದನ ಗ್ರಂಥ ಗಳಿಗೆ ಲೇಖನ ಬರೆದವರು.ಪಠ್ಯ ದಲ್ಲಿ ಇವರ ಜೀವನ ಸಾಧನೆ ಸೇರಿದೆ.ಬಸವ ಸಿರಿ ಅಭಿ ನಂದನ ಗ್ರಂಥ ಸಮರ್ಪಿಸಲಾಗಿದೆ. ವಿಸ್ತಾರ ಪ್ರಶಸ್ತಿ, ಉರಿಲಿಂಗಪೆದ್ದಿ ಪ್ರಶಸ್ತಿ, ಯಲ್ಲಾಲಿಂಗೇಶ್ವರ ಪ್ರಶಸ್ತಿ, ಅಮ್ಮ,ಅವ್ವ,ಅಪ್ಪ,ಗೌಡ,ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ.ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ,ಗುಲಬರ್ಗಾ ವಿಶ್ವವಿ ದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.
ಶ್ರೀ ಬಸವರಾಜ ಕೊನೇಕ್ ಅವರು ಪ್ರಕಾಶಕರಾಗಿ, ಕೃಷಿಕ ರಾಗಿ, ಹಲವು ಕನ್ನಡ ಪರ ಸಂಘಟನೆಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.ಇವರ ಸಾಮಾಜಿಕ,ಧಾರ್ಮಿಕ, ಪುಸ್ತಕೋದ್ಯಮಿ ಸಾಧನೆಯನ್ನು ಪರಿಗಣಿಸಿ ಕಲಬುರಗಿಯ ಶರಣ ಬಸವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.ಇದು ಕರ್ನಾಟಕದಲ್ಲಿ ಇದುವರೆಗೂ ಪ್ರಕಾಶ ಕರಿಗೆ,ಪುಸ್ತಕೋದ್ಯಮಿಗೆ ಮೊಟ್ಟ ಮೊದಲ ಗೌರವ ಡಾಕ್ಟರೇಟ್ ಪಡೆದ ಸಾಲಿಗೆ ಮೊದಲಿಗರೆಂಬ ಹೆಗ್ಗಳಿಕೆ ಗೆ ಪಾತ್ರರಾಗಿದ್ದಾರೆ. ಈ ಸಂಭ್ರಮವನ್ನು ಇಂದು ದಿನಾಂಕ; ೨೯-೧೨-೨೦೨೪ ರಂದು ಹೈ.ಕ.ಚೇಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಸಂಜೆ ೫-೩೦ರ ಸಮಾರಂಭದಲ್ಲಿ ಅಭಿನಂದನಾ ಸಮಾರಂಭ ದಲ್ಲಿ ಗೌರವಿಸಲಾಗುತ್ತಿದೆ.