ಬಿಳವಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗುರು ಜೆಟ್ಟಿಂಗರಾಯ ದೇವರ ಜಾತ್ರಾ ಮಹೋತ್ಸವ

ಬಿಳವಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗುರು ಜೆಟ್ಟಿಂಗರಾಯ ದೇವರ ಜಾತ್ರಾ ಮಹೋತ್ಸವ

ಬಿಳವಾರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗುರು ಜೆಟ್ಟಿಂಗರಾಯ ದೇವರ ಜಾತ್ರಾ ಮಹೋತ್ಸವ

ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಮಹಾಮಹಿಮಾ, ಕಲಿಯುಗದ ಭಕ್ತರ ಆರಾಧ್ಯ ದೈವವಾದ ಶ್ರೀ ಗುರು ಜೆಟ್ಟಿಂಗರಾಯ ದೇವರ ಜಾತ್ರಾ ಸಮಾರಂಭ ದೀಪಾವಳಿ ಅಮಾವಾಸ್ಯೆಯ ಪ್ರಯುಕ್ತ ಭಕ್ತಿಭಾವದಿಂದ, ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಊರಿನ ಭಕ್ತರು ಬಾಜಿ, ಭಜಂತ್ರಿ ಮತ್ತು ಡೊಳ್ಳಿನ ಮೇಳದೊಂದಿಗೆ ದೇವರ ಪಲ್ಲಕ್ಕಿ ಉತ್ಸವವನ್ನು ವೈಭವದಿಂದ ನಡೆಸಿದರು. ಶ್ರೀ ಗುರು ಜೆಟ್ಟಿಂಗರಾಯ ದೇವರ ಪಲ್ಲಕ್ಕಿಗೆ ಗ್ರಾಮಸ್ಥರು ಕಾಯಿ, ಕರ್ಪೂರ, ಜಲಾಭಿಷೇಕ ಅರ್ಪಣೆ ಮಾಡಿದರು ಹಾಗೂ ಭಕ್ತಿ ಭಾವದಿಂದ ದೇವರ ಆಶೀರ್ವಾದ ಪಡೆದರು.

ಈ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜಾತ್ರಾ ಸಮಾರಂಭದ ಯಶಸ್ವಿ ಆಯೋಜನೆಗಾಗಿ **ಶರಣು ಪೂಜಾರಿ ದೊಡ್ಮನಿ, ರಾಜೇಂದ್ರ ಪೂಜಾರಿ ದೊಡ್ಡಮನಿ, ಶಿವಶಂಕರ ಪೂಜಾರಿ ಮಲ್ಲಾಬಾದಿ, ಈರಪ್ಪ ಪೂಜಾರಿ ಹಿರೇಕುರುಬರ್, ಮರಿಯಪ್ಪ ಪೂಜಾರಿ ಮಲ್ಲಾಬಾದ, ಅಯ್ಯಪ್ಪ ಪೂಜಾರಿ ದೇವರಹಳ್ಳಿ, ನಾಗಪ್ಪ ಪೂಜಾರಿ ಮಲ್ಲಾಬಾದ್, ತಿಪ್ಪಣ್ಣ ಪೂಜಾರಿ ಹಿರೇಕುರುಬರ್, ಜಟ್ಟಪ್ಪ ಪೂಜಾರಿ ಹಾರಬೋಳ, ಭೀಮಣ್ಣ ಪೂಜಾರಿ ದೇಸಾಯಿ ಹಾಗೂ ಅಯ್ಯಪ್ಪ ಪೂಜಾರಿ ಜಮಖಂಡಿ ಮುಂತಾದವರು ಶ್ರಮಿಸಿದ್ದರು.

ಜಾತ್ರೆಯ ಯಶಸ್ವಿ ಸಂಯೋಜಕರಾಗಿ ಜೇಟ್ಟೆಪ್ಪ ಎಸ್. ಪೂಜಾರಿ ಕಾರ್ಯನಿರ್ವಹಿಸಿದರು.

ಭಕ್ತರ ಭಕ್ತಿ, ಹರ್ಷೋಲ್ಲಾಸ ಮತ್ತು ಗ್ರಾಮಸ್ಥರ ಸಹಕಾರದಿಂದ ಈ ವರ್ಷದ ಜಾತ್ರಾ ಸಮಾರಂಭ ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು.