ಡಾ.ಗವಿಸಿದ್ದಪ್ಪ ಎಚ್.ಪಾಟೀಲ

ಡಾ.ಗವಿಸಿದ್ದಪ್ಪ ಎಚ್.ಪಾಟೀಲ

ಡಾ.ಗವಿಸಿದ್ಧಪ್ಪ ಎಚ್.ಪಾಟೀಲ

ಡಾ.ಗವಿಸಿದ್ಧಪ್ಪ ಪಾಟೀಲ ಅವರು ಮೂಲತಃ ತಿರುಳ್ಗ ನ್ನಡ ನಾಡಿನ ಕೊಪ್ಪಳದವರು.ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದಿಂದತ್ತ ಸಂಬಂಧ ಎಂಬು ವಂತೆ ಬಾಳಿ ಬದುಕುತ್ತಿರುವ ಅಪರೂಪದ ಜೀವಿ. ಬಸವಣ್ಣನವರ ಇವನಾರವ ಎನಿಸದೇ ನಮ್ಮವನೆಂಬ ಭಾವ ಬರುವ ಹಾಗೆ ಜಾತ್ಯಾತೀತ ಮನೋಭಾವ ಹೊಂದಿದವರು.ಸಮಸಮಾಜ ಕಟ್ಟಬಯಸುವ ವ್ಯಕ್ತಿ.

     ಕೊಪ್ಪಳ ಜಿಲ್ಲೆಯ ಬಿಸರಳ್ಳಿಯ ಪೋಲಿಸ್ ಗೌಡಕಿ ಮನೆತನದಿಂದ ಬಂದವರು.ಇವರ ತಂದೆ ಎಚ್.ಎಸ್. ಪಾಟೀಲ,ತಾಯಿ ಶಾರದಾ ಇವರ ಐದನೆಯ ಕೊನೆ ಮಗನಾಗಿ ದಿ.೧೬-೦೬-೧೯೭೪ರಂದು ಜನಿಸಿದರು. ಅಳವಂಡಿ ಸರಕಾರಿ ಶಾಲೆಯಲ್ಲಿ ಶಿಕ್ಷಣಾಭ್ಯಾಸ ಪ್ರಾರಂ ಭ,ಕೊಪ್ಪಳ ಸರಕಾರಿ ಶಾಲೆಯಲ್ಲಿ ನಾಲ್ಕನೇಯತ್ತ,೫ ರಿಂದ ೧೦ ನೇಯ ತರಗತಿವರೆಗೆ ಕೊಪ್ಪಳದ ಶ್ರೀ ಗವಿಸಿ ದ್ಧೇಶ್ವರ ಪ್ರೌಢ ಶಾಲೆಯಲ್ಲಿ ಕಲಿತರು.ಪಿಯುಸಿ ಕಿನ್ನಾಳ ದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮತ್ತು ಕೊಪ್ಪಳದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ.ಬಿ.ಎ ಪ್ರಥಮ ಮತ್ತು ದ್ವಿತೀ ಯ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಮತ್ತು ಬಿ.ಎ.ಅಂತಿಮ ಬಳ್ಳಾರಿಯ ವೀರಶೈವ ಪದವಿ ಮಹಾವಿದ್ಯಾಲಯದಲ್ಲಿ ಕಲಿತರು.ಎಂ.ಎ.ಕನ್ನಡ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆ, ರ್ಯಾoಕ್,ಎರಡು ಚಿನ್ನದ ಪದಕ ಪಡೆದರು.ಎಂಫಿಲ್ ಮಾರುತೇಶ ಮಾಂಡ್ರೆಯವರ ಪ್ರಾತಿನಿಧಿಕ ನಾಟಕಗ ಳು,ಕುಕನೂರು ಒಂದು ಸಾಂಸ್ಕೃತಿಕ ಅಧ್ಯಯನ ಪಿಎಚ್.ಡಿ ಪದವಿಯನ್ನು ಡಾ.ಎಂ.ಎಸ್.ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಡೆದರು.

  ‌‌ ವೃತ್ತಿಯನ್ನು ಕಲಬುರಗಿಯ ನೂತನ ಪದವಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ೧೯೯೯- ರಿಂದ ೨೦೦೩ರವರೆಗೆ,೨೦೦೩ರಿಂದ ೨೦೦೭ರವರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಯರಗೇರಾ ರಾಯಚೂರಿನಲ್ಲಿ ಅತಿಥಿ ಉಪನ್ಯಾಸಕ ರಾಗಿ ಸೇವೆ.೨೦೦೭ರಿಂದ ೨೦೧೭ರವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ, ಪ್ರಭಾರಿ ಪ್ರಾಂಶುಪಾಲರಾಗಿ, ವಿದ್ಯಾರ್ಥಿ ಕಲ್ಯಾಣಧಿಕಾರಿಯಾಗಿ,ಎನ್.ಎಸ್.ಎಸ್. ಅಧಿಕಾರಿಯಾಗಿ, ಶಿಸ್ತುಪರಿಪಾಲನೆ,ಕನ್ನಡೇತರ ವಿದ್ಯಾ ರ್ಥಿಗಳಿಗೆ ಕನ್ನಡ ಬೋಧನೆ,ಸಾಂಸ್ಕೃತಿಕ ವಿಭಾಗ ಸಂ ಚಾಲಕರಾಗಿ ಸೇವೆ ಸಂದಿದೆ. ೨೦೧೭ ರಿಂದ ೨೦೧೯ ರವರೆಗೆ ಹುಮನಾಬಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ,ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

    ಇವರ ಮಾರ್ಗದರ್ಶನದಲ್ಲಿ ಡಾ.ನಾಗೇಂದ್ರ ಕೊಪ್ಪಳ ಜಿಲ್ಲೆಯ ಆಧುನಿಕ ಕಾವ್ಯ,ಡಾ.ಸಂತೋಷಕುಮಾರ ಹಿರೇಮನಿ ಆಧುನಿಕ ಕವಿಗಳು ಕಂಡ ಕನಕದಾಸರು, ಡಾ.ಅಶೋಕ ಶಿವರಾಮ ಬೀದರ ಜಿಲ್ಲೆಯ ಮಹಿಳಾ ಸಾಹಿತ್ಯ, ಡಾ.ವಿಠಲ ಕಲಬುರಗಿ ಜಿಲ್ಲೆಯ ಆಧುನಿಕ‌ ಕಾವ್ಯ,ಈಗಾಗಲೇ ಡಾಕ್ಟರೇಟ್ ಪಡೆದವರು.ಡಾಕಪ್ಪ ಮೋತಿಲಾಲ ಕನ್ನಡ ಸಾಹಿತ್ಯಕ್ಕೆ ಲಂಬಾಣಿ ಲೇಖಕರ ಕೊಡುಗೆ,ಜೈಭೀಮ ಹೊಳಿಕೇರಿ ಡಾ.ಅರ್ಜುನ ಗೊಳಸಂಗಿ ಬದುಕು ಬರಹ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

ಸಾಹಿತ್ಯ ರಚನೆ

ಪಿಯುಸಿ ಇದ್ದಾಗಲೇ ಚುಟುಕು, ಓದು ಗರ ಓಲೆ ಪತ್ರಿಕಾ ಬರಹ ಪ್ರಾರಂಭ.ನಂತರ ಕಾವ್ಯ ರಚನೆ, ಜಿಲ್ಲೆಯ ಜಾನಪದ, ರಂಗ ಕಲಾವಿದರ ಪರಿಚ ಯ,ಪುಸ್ತಕ ವಿಮರ್ಶೆ ತೊಡಗಿದರು.ಇವರ ಬರವಣಿಗೆ

ನವೋದಯ, ರಾಯಚೂರ ವಾಣಿ,ಸುದ್ದಿಮೂಲ,ನಾಗ ರಿಕ,ಪ್ರಪಂಚ,ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿ ಗಳಲ್ಲಿ ಪ್ರಕಟ.ಕಲಬುರಗಿ ಸಂಯುಕ್ತ ಕರ್ನಾಟಕ ಹೈದರಾಬಾದ್ ಕರ್ನಾಟಕ ಪುರವಣಿಗಳಲ್ಲಿ ಬರಹ ಪ್ರಕಟ.ಕ್ರಾಂತಿ, ಸಂಧ್ಯಾ ಕಾಲ,ಸತ್ಯಕಾಮ,ಸಂಜೆ ವಾಣಿಗಳಲ್ಲಿ ಪ್ರಕಟ ೨೦೦೧ ರಿಂದ ಸಾಹಿತ್ಯ ಪುಸ್ತಕ ಪ್ರಕಟಣೆಗೆ ತೊಡಗಿದರು. ೨೦೨೪ರೊಳಗೆ ಅಂದರೆ ೨೩ ವರ್ಷದ ಲ್ಲಿ ೧೦೦ ಪುಸ್ತಕ ಪ್ರಕಟಿಸಿದ್ದು,ತಮ್ಮ ಐವತ್ತು ವರ್ಷದ ಲ್ಲಿ ೧೦೦ ಪುಸ್ತಕ ದಾಖಲೆ ಮಾಡಿದ್ದು ಗಮನಾರ್ಹ! ಸತತ ಅಧ್ಯಯನ, ಪರಿಶ್ರಮ,ಬರವಣಿಗೆ ನಿರಂತರವಾ ಗಿದೆ.

ಕಾವ್ಯ

ಕಾವ್ಯ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಬರವಣಿಗೆ ಆದರೂ ಪ್ರಕಟಿಸಿದ್ದು ೨೦೦೯ರಲ್ಲಿ ಕನಸುಗಣ್ಣಿನ ಹು ಡುಗಿ ಪ್ರಕಟವಾಗಿ ಕವಿಗೆ ಜನಮನ್ನಣೆ ದೊರೆಯಿತು. ಕಸಾಪದ ಕಾವ್ಯದ ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ಕನಸುಗಣ್ಣನ ಹುಡುಗಿ,ಕಾವ್ಯ ಭಜ್ಜಿ,ಸಹಜ ಕಾವ್ಯ, ಬೆಳ್ಳಕ್ಕಿ ಸಾಲು,ನಾಲ್ಕೂ ಸಂಕಲನ.ತನುಸವೆದಂತೆ( ಆ ಧುನಿಕ ವಚನ) ಸಮತೆಯ ಹಾಯಿಕು(ಹಾಯ್ಕು), ಮಲ್ಲಿಗೆಯ ಗಜಲ್(ಗಜಲ್),ಹದುಳ( ಚುಟುಕು), ಶಾಹಿರಿ-ದೋಹೆ,ಮಧು ಪ್ರೀತಿ( ರುಬಾಯಿ- ಮುಕ್ತಕ), ಸುನೀತ ಸಿರಿ(ಸಾನೆಟ್), ಕೆಂಪುಗುಲಾಬಿಯ ಹಾಯಿ ಕು( ಹಾಯಿಕು) ಹನ್ನೆರಡು ಸಂಕಲನ ಕಾವ್ಯದ ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ ಸೃಜನಶೀಲ ಕವಿ.

ಕಥೆ

ಕಥೆಗಳನ್ನು ಎಂ.ಎ.ತರಗತಿಯಿಂದಲೇ ಬರೆಯು ತ್ತಾಬಂದವರು.ಆಕಾಶವಾಣಿ ಕಲಬುರಗಿಯಲ್ಲಿ ನಾಲ್ಲು ಕಥೆ ಪ್ರಸಾರವಾಗಿವೆ.ಗುಲ್ಬರ್ಗಾ ವಿಶ್ವವಿದ್ಯಾಲಯದ ದಿ. ರಾಜಪುರೋಹಿತ ದತ್ತಿ ಪ್ರಶಸ್ತಿಗೆ ಎರಡು ಉತ್ತಮ ಕಥೆ ಎಂದು ಪ್ರಮಾಣ ಪತ್ರಕ್ಕೆ ಅರ್ಹ ವಾದವು.ಕಾಗದ ಚೂರು ಎನ್ನು ಕಥಾ ಸಂಕಲನ ಪ್ರಕಟವಾಗಿದೆ.ಆನಂತ ರ ದಿ.ಜಯತೀರ್ಥ ರಾಜಪುರೋಹಿತರ ಕಥಾ ಸ್ಪರ್ಧೆ ಯಲ್ಲಿ ಬೆಳ್ಳಿ ಪದಕ ಚಿವುಟದಿರಿ ಕಥೆಗೆ ಲಭಿಸಿದೆ.

ರಂಗಭೂಮಿ

ರಂಗಭೂಮಿಗಾಗಿ ಬಾಲ್ಯದಲ್ಲಿ ಇವರ ಊರಾದ ಬಿಸರಳ್ಳಿಯಲ್ಲಿ ಬಯಲಾಟ, ನಾಟಕ ನೋ ಡಿ ಆಸಕ್ತಿಯನ್ನು ಹೊಂದಿ ಕಲಾವಿದರ ಪರಿಚಯ ಮಾಡಲು ನಿಂತರು.ರಂಗ ಕಲೆ,ಕಲಾವಿದರ ಬದುಕು ಕಣ್ಣಾರೆ ಕಂಡವರು.ಅವರ ಹತ್ತಿರ ಹೋಗಿ ಸುಖ,ದು:ಖಗಳನ್ನು ಸಮವಾಗಿಸಿಕೊಂಡ ತಲ್ಲಣದ ರಂಗದ ಕಲೆಗೆನಸೋತರು.ರಂಗ ಸಿರಿ ಮತ್ತು ಮಾರುತೇಶ ಮಾಂಡ್ರೆ ಎರಡು ಕೃತಿ ರಂಗಭೂಮಿಗಾಗಿ ಮೀಸಲಿಟ್ಟ ಕೃತಿಗಳು.

ವಿಮರ್ಶೆ

ವಿಮರ್ಶೆ ಈ ಪ್ರದೇಶದಲ್ಲಿ ಕಡಿಮೆ.ಇದನ್ನು ಅನುಲಕ್ಷಿಸಿ ಕೊಂಡ ಪಾಟೀಲರು ನಿರಂತರ ಹೊಸದಾ ಗಿ ಬಂದ ಕೃತಿ ಪರಿಚಯ ಮಾಡಿದರು.ಆಕಾಶವಾಣಿ ಯಲ್ಕಿ ಹೊಸ ಓದು,ಪುಯಪರಿಚಯ,ವಿಮರ್ಶೆ, ವರ ದಿಗಳು ಪ್ರಸಾರವಾಗಿವೆ.ನವೋದಯ, ರಾಯಚೂರು ವಾಣಿ,ಸುದ್ದಿಮೂಲಲ ಅಲ್ಲದೇ ಅನೇಕ ಪತ್ರಿಕೆ ಪುಸ್ತಕ ವಿಮರ್ಶೆ, ವಿಶ್ಲೇಷಣೆ, ಪರಿಚಯ, ತೌಲನಿಕ,ಮಾಡುತ್ತ ಬಂದವರು.ಉಳುಮೆ,ಪುಸ್ತಕ ಮಾತುಕತೆ,ಸುವರ್ಣ ಸಿರಿ,ಓದಿನೊಳಗೆ,ಸಹಜ ಓದು ಐದು ವಿಮರ್ಶಾ ಕೃತಿ ಬಂದಿವೆ.ಇವೇ ಸಾವಿರ ಪುಟದ ವಿಮರ್ಶೆ ವೈವಿಧ್ಯಮ ಯ ಕೃತಿಗಳು.

ಜಾನಪದ

 ಜಾನಪದ ಸಾಹಿತ್ಯ ಕುರಿತು ಬಿ.ಎ.ಓದುವ ವಾಗಲೆ ಆಧ್ಯಯನ,ಕ್ಷೇತ್ರ ಕಾರ್ಯ ಕೈಗೊಂಡವರು.ರಾ ಯಚೂರು ಜಿಲ್ಲೆಯ ಜಾನಪದ ಮತ್ತು ಕೊಪ್ಪಳ ಜಿಲ್ಲೆ ಆದ ಮೇಲೆ ಮೊದಲ ಲೇಖನ ಬರೆದವರು.ಅಲ್ಲಿಂದ ನಿ ರಂತರ ಜಾನಪದದ ಅದರಲ್ಲೂ ಕೊಪ್ಪಳ, ಕಲಬುರಗಿ, ರಾಯಚೂರು, ಬೀದರ ಜಿಲ್ಲೆ.ಹೈ.ಕ‌.ಪ್ರದೇಶದ ಜಾನಪ ದ ಲೇಖನಗಳನ್ನು ಬರೆದರುಮಜನ ಜಾನಪದ, ಜಾನ ಪದ ಕೈದೀವಿಗೆ,ಹೊತ್ತರಳಿ ಮೂರು ಜಾನಪದ ಕೃತಿಗಳ ನ್ನು ಪ್ರಕಟಿಸಿದ್ದಾರೆ. ಜಾನಪದ ಸಿರಿ ಸಂಪಾದನೆಯಾಗಿ ದೆ.ಜನಪದ ಕವಿ-ಕಲಾವಿದರ- ವಿದ್ವಾಂಸರ ಬಗ್ಗೆ ಇವೆ .ಜಾನಪದ ಫಸಲು ಈಗ ಹೊರಬರಲಿದೆ.

ವಚನ ಸಾಹಿತ್ಯ

ಅನೇಕ ಉಪನ್ಯಾಸ,ವಚನ ಗೋಷ್ಠಿ ಗಳಲ್ಲಿ ಭಾಗವಹಿಸಿದ್ದ ಅಲ್ಲದೇ ಸ್ವತಃ ಡಾ.ಪಾಟೀಲರು ಪ್ರಥಮ ದಲಿತ ಶರಣ ಸಾಹಿತ್ಯ ಸಮ್ಮೇಳನ,ಬೀದರ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಂಶೋಧನಾ ಸಮ್ಮೇ ಳನ,ಎಂಟು ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿ ತ್ಯ ಸಮ್ಮೇಳನ ಮಾಡಿದವರು.ಇದರೊಂದಿಗೆ ಉರಿಲಿಂ ಗ ಪೆದ್ದಿ ಪ್ರಶಸ್ತಿ, ಯಲ್ಲಾಲಿಂಗೇಶ್ವರ ಶರಣರ ಪ್ರಶಸ್ತಿ ಕಳೆದ ಹದಿನಾರು ವರ್ಷಗಳಿಂದ ಮಾಡುತ್ತ ಬಂದವರು

ಹಾಗೆಯೇ ಶಿವದಾಸ ಚಿಂತನೆ,ವಚನ ಸಿರಿ ಮತ್ತು ಅರಿ ವಿನ‌ ಬೆಳಕಿನಲ್ಲಿ ಎಂಬ ಮೂರು ವಚನ ಸಾಹಿತ್ಯ ವಿಮರ್ಶಾ ಪುಸ್ತಕ ಪ್ರಕಟಿಸಿದ್ದಾರೆ.

ಲೇಖನಗಳ ಸಂಕಲನ

ಮರದ ನೆರಳು,ಸಾಹಿತ್ಯದ ಬೆಳಕಿನಲ್ಲಿ,ಸಮರೂಪ,ಸಮಾಗಮ, ಸಾರಸತ್ವ ,ಬತ್ತದ ಬೆಳೆ,ಗಿರಿ ಶಿಖರ ಏರಿದವರು,ಏಳು ಪುಸ್ತಕ ಅವರ ಬರವಣಿಗೆ ಗುರುತಿಸುತ್ತವೆ.

ಜೀವನ ಚರಿತ್ರೆ

ಜೀವನ ಚರಿತ್ರೆಯನ್ನು ಬಹು ವಿಶಿಷ್ಠ ವಾಗಿ ಕಟ್ಟಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರ- ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ,ಮಾರುತೇಶ ಮಾಂಡ್ರೆ, ಫ.ಗು ಹಳಕಟ್ಟಿ, ಸಿದ್ಧಯ್ಯ ಪುರಾಣಿಕ,ಯು.ಆರ್.ಅ ನಂತಮೂರ್ತಿ,ಪೂಜ್ಯ ಮಹಾದೇವಿ ತಾಯಿ,ಚಂದ್ರ ಯಾನ(ಕರದಳ್ಳಿ ಚಂದ್ರಕಾಂತ) ಕಲಾ ಪ್ರಭೆ(ಟಂಕಸಾಲಿ ಮಠ)ಅಟ್ಟಳೆ ನಾಡಿನ ಸಾಹಿತಿ ಎಚ್.ಕಾಶೀನಾಥರೆಡ್ಡಿ,

ಅಗ್ನಿರಥ ( ಎಂ.ಜಿ.ಗಂಗನಪಳ್ಳಿ),ಬೆಲ್ದಾಳ ಶರಣರು,ಜಿ.ಬಿ.ವಿಸಾಜಿ, ಹನ್ನೆರಡು ಜೀವನ ಚರಿತ್ರೆಯನ್ನು ಅವರ ಅಧ್ಯಯನ, ಕಂಡಂತೆ ಓದಿನ ಹಿನ್ನೆಲೆಯಲ್ಲಿ ಬಹು ಸೂಕ್ಷ್ಮವಾಗಿ ರಚಿಸಿರುವರು.

ವ್ಯಕ್ತಿ ಚಿತ್ರಣ

ವಿಶೇಷ ರೀತಿಯಲ್ಲಿ ವ್ಯಕ್ತಿ ಚಿತ್ರಣವನ್ನು ಹಿಡಿದಿಟ್ಟಿದ್ದಾರೆ.ಸಾಧಕರು-೨೦೦೬,ಬೆಳಗು,ಕಲ್ಯಾಣ ಬೆಳಗು,ವ್ಯಕ್ತಿ ಸಿರಿ ನಾಲ್ಕು ಸೇರಿ ಐದನೂರಕ್ಕೂ ಹೆಚ್ಚು ವ್ಯಕ್ತಿತ್ವ ಅನಾವಣಗೊಂಡಿವೆ.

ಹೈದರಾಬಾದ್ ಕರ್ನಾಟಕ ಸಾಹಿತ್ಯ

 ಡಾ.ಪಾಟೀಲರು ಮೊದಲು ಸಮಗ್ರ ಅಧ್ಯಯನ ಈ ಪ್ರದೇಶದ ಮೇಲೆ ಮಾಡಿದ್ದಾರೆ.ಸಾಹಿತ್ಯ ಸಿರಿ,ಸಾಹಿತ್ಯ ಸಂಕಲನ,ಹೈ.ಕ. ಸಿರಿ ಎಂಬ ಮೂರು ಕೃತಿಗಳು ಪ್ರಕಟವಾಗಿ ಈ ಪ್ರದೇಶ ದ ಮಹತ್ವದ ಲೇಖನಗಳಿವೆ.ಇದನ್ನೇ ಆಧರಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಎಚ್.ಡಿ ವಿಷಯಗಳಾಗಿವೆ.ಕಾವ್ಯ,ಕಥೆ, ಕಾದಂಬರಿ, ನಾಟಕ,ವಿಮರ್ಶೆ, ಅನುವಾದ,ವಿಮೋಚ ನಾ ಸಾಹಿತ್ಯ, ವೈಚಾರಿಕ, ಮಹಿಳೆ,ದಲಿತ,ಬಂಡಾಯ, ಜಾನಪದ, ವಚನ,ದಾಸ,ಹೀಗೆ ಹಲವಾರು ವಿಷಯದ ಮೇಲೆ ಪ್ರಭುತ್ವದ ಲೇಖನ ಗಳಿಗೆ.

ಜಿಲ್ಲೆಯ ಸಾಹಿತ್ಯ

ಇದೊಂದು ವಿಶೇಷ ಪ್ರಕಾರ.ಗವಿಸಿ ದ್ಧಪ್ಪನವರು ಎಲ್ಲಿಯೇ ಇರಲಿ ಅಲ್ಲಿ ಒಗ್ಗಿಕೊಂಡು, ಬಿಡುವ ಜಾಯಮಾನ.ಅಲ್ಲಿಯ ಅಧ್ಯಯನಕ್ಕೆ ತೊಡ ಗುತ್ತಾರೆ.ಕೊಪ್ಪಳ, ಕಲಬುರಗಿ, ಬೀದರ,ರಾಯಚೂರು ಜಿಲ್ಲೆಯ ಸಂಬಂಧಪಟ್ಟ ಲೇಖಗಳಿವೆ.ಇವು ಸಾಂದ ರ್ಭಿಕವಾಗಿ ಬರೆದವುಗಳು.ಸಾಹಿತ್ಯ ಸಂಕಥನ ಮತ್ತು ಬೀದರ ಸಾಹಿತ್ಯ ಸಿರಿ ಈ ಜಿಲ್ಲೆಯ ಸಾಹಿತ್ಯ ಅಧ್ಯಯನ ಮಾಡುವಾಗ ಆಕರ ಗ್ರಂಥವಾಗಿವೆ.

ಡಾ.ಅಂಬೇಡ್ಕರ್ ಹಾಗೂ ಬಹುಜನ ಸಾಹಿತ್ಯ

 ಪಿಯುಸಿ ಇರು ವಾಗ ಅಂಬೇಡ್ಕರ್ ಕುರಿತು ಕವನ ರಚಿಸಿದವರು. ಅಂಬೇಡ್ಕರ್ ಅವರನ್ನು,ಬುದ್ಧನನ್ನು ತಮ್ಮ ಪತ್ನಿ ಡಾ.ಜಯದೇವಿ ಅವರ ಮೂಲಕ ಹೆಚ್ಚು ತಿಳಿದುಕೊಂಡು ನಡೆದು ಅದೇ ಮಾರ್ಗದಲ್ಲಿ ಜೀವಿಸುತ್ತಿದ್ದಾರೆ.ಹೀಗಾಗಿ ಅಂಬೇಡ್ಕರ್ ಬೆಳಕಿನಲ್ಲಿ ಎಂಬ ಕೃತಿ ಪ್ರಕಟವಾಗಿ ಈ ಎಲ್ಲಾ ತತ್ವಗಳು ಅವರ ಅಧ್ಯಯನ ಮೂಸೆಯಿಂದ ಹೊರ ಬಂದಿವೆ.

ಸಂಪಾದನೆಗಳು

ಮುಸ್ಲಿಂ ಅಂಗಳದ ಮುಕ್ತ ಧ್ವನಿಗಳು ಹೈದರಾಬಾದ್ ಕರ್ನಾಟಕ ಪ್ರದೇಶದ ಮಸ್ಲಿಂ ತತ್ವ ಪದಕಾರರು,ಆಧುನಿಕ ಕವಿಗಳ ಪ್ರಾತಿನಿಧಿ ಕ ಸಂಕಲನವಾಗಿದೆ.ಈ ಕೃತಿಕಂಡು ಕಲಬುರಗಿಯಲ್ಲಿ ಮುಸ್ಲಿಮ್ ಕನ್ನಡ ಲೇಖಕರ ಸಂಘ ಪ್ರಾರಂಭವಾಯಿ ತು.ಬಿಡುಗಡೆ ಕಲಬುರಗಿ ಜಿಲ್ಲೆಯ ವಿಮೋಚನಾ ಹೋ ರಾಟದ ಕಥೆ-ವ್ಯಥೆ ಕಟ್ಟಿಕೊಡುವ ಆಕರ ಗ್ರಂಥ.ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿಯ ಬೆಳ್ಳಿಸಿದ್ದ ಮಾಲಿಕೆಯ ಇಪ್ಪತ್ತೈದು ಕೃತಿಗಳ ಅವಲೋಕನ ಬೆಳ್ಳಿ ಬೆಳಕು,ಸೂಗಯ್ಯ ಹಿರೇಮಠರ ಸಾಹಿತ್ಯಾವಲೋಕನ, ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ಬೆಳ್ಳಿ ಹಬ್ಬ ದ ಪ್ರಯುಕ್ತ ಪುಸ್ತಕ ಪ್ರಶಸ್ತಿ ಪಡೆದ ಕೃತಿಗಳ ಕುರಿತು ಪುರಸ್ಕೃತ ಕೃತಿಗಳ ಸಮೀಕ್ಷೆ,ಗವಿಸಿದ್ಧ ಎನ್.ಬಳ್ಳಾರಿ ಅವರ ಸಮಗ್ರ ಕಾವ್ಯ,ಕಲ್ಯಾಣ ಕರ್ನಾಟಕ ಸಾಹಿತ್ಯ ಸಮೀಕ್ಷೆ, ಕಲ್ಯಾಣ ಕರ್ನಾಟಕ ಸಾಹಿತಿಗಳ ಬದುಕು- ಬರಹಗಳು, ಬೆಳಕು ಬಯಲಾಯ್ತು ಪ್ರಾತಿನಿಧಿಕ ಕಾವ್ಯ ಸಂಕಲನ ಇವರ ಪ್ರಮುಖ ಸಂಪಾದನೆಗಳು.

ಕನಕ ಸಾಹಿತ್ಯ

 ಕನಕದಾಸರ ಕುರಿತು ಅನೇಕ‌ ಲೇಖನ, ಕವನ,ಚುಟುಕು,ಸಾನೆಟ್,ಹಾಯಿಕು, ಗಜಲ್, ವಚನ, ಬರೆದಂತೆ ಅವುಗಳ ಸಂಕಲನ ಹೊರತರಲಿದ್ದಾರೆ.ಹಾಗೆ ಕನಕ ಸಿರಿ,ಕನಕ ಚಿಂತನ,ಜೀವ ಯಾವ ಕುಲ,ಕನಕ ಸಂವೇದನೆ, ನಾಲ್ಕು ಕೃತಿ ಸಂಪಾದಿಸಿದ್ದಾರೆ. ಬಯಲ ಬಾನಿನ ಹಾಡು ಹಕ್ಕಿ ಎಂಬ ಆಧುನಿಕ ಕವಿಗಳ ಕನಕ ದಾಸರ ಕವನಗಳು ಪ್ರಕಟ ಹಂತದಲ್ಲಿದೆ. ಕನಕ ಉಪ ನ್ಯಾಸ,ಕವಿಗೋಷ್ಠಿ,ಕನಕ ಪ್ರಶಸ್ತಿ ಪ್ರದಾನ,ಕಾರ್ಯಕ್ರ ಮ ಆಯೋಜನೆ ಮಾಡಿದ್ದಾರೆ.

ಸ್ಮರಣ ಸಂಚಿಕೆಗಳು

ಸ್ಮರಣ ಸಂಚಿಕೆಗಳು ಆಯಾ ಸಂದರ್ಭದಲ್ಲಿ ಬಂದ ನೆನಪಿನ ಸಂಚಿಕೆಗಳು.ಸಮ್ಮೇ ಳನ,ಕಾರ್ಯಕ್ರಮ ನಡೆಸುವುದು, ಆದರೆ ದಾಖಲೆಯ ನ್ನು ಸಂಚಿಕೆ ಮಾಡುತ್ತವೆ.ಗಡಿ ಕನ್ನಡ ಸಿರಿ ನಾಲ್ಕನೆಯ ಬಸವಕಲ್ಯಾಣ ತಾಲೂಕಿನ ಸಮ್ಮೇಳನದ ಸಂಚಿಕೆ. ದಾಸ ಸಿರಿ ಅಖಿಲ ಕರ್ನಾಟಕ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸಂಚಿಕೆ.ಗಡಿ ಸಿರಿ,ಜ್ಞಾನ ಸಿರಿ ನಾಲ್ಕು ಸಂಚಿಕೆಗಳ ರೂಪಿಸುವಲ್ಲಿ ಆಕರವಾಗುವ ಹಾಗೆ ಮಾಡಿದ್ದು ಉಲ್ಲೇಖನಾರ್ಹವಾಗಿವೆ.

ಅಭಿನಂದನ ಗ್ರಂಥ

 ಅಭಿನಂದನ ಗ್ರಂಥ ಇಂದು ಸಾಹಿ ತ್ಯದ ಪ್ರಕಾವಾಗಿ ಬೆಳೆದಿದೆ.ಈ ಪ್ರದೇಶದಲ್ಲಿ ಗವೀಶ ಹಿರೇಮಠರು ಹೆಚ್ಚು ಗ್ರಂಥ ತಂದವರು ಅವರ ಸರಿಸಮಾ ನವಾಗಿ ತಂದವರು ಗವಿಸಿದ್ಧಪ್ಪನವರು.ನಮ್ಮ ಅನುವಾದಕ( ಭಾಲಚಂದ್ರ ಜಯಶೆಟ್ಟಿ),ಬೆಳ್ಳಿ ದಾಂಪತ್ಯ (ಶ್ರೀಮತಿ ಶಶಿಕಲಾ ಡಾ.ಬಸವರಾಜ ಪೋಲಿ‌ ಸ್ ಪಾಟೀಲ) ಸಾಹಿತ್ಯ ಮಂದಾರ(ಎಂ.ಜಿ.ದೇಶಪಾಂಡೆ),ಸುಗಂಧ(ಸೂಗಯ್ಯ ಹಿರೇಮಠ) ರತ್ನಧವಳ(ಎ.ಜಿ. ರತ್ನ ಕಾಳೇಗೌಡ),ಹಾರಕೂಡ ಸಿರಿ(ಡಾ.ಚನ್ನವೀರ ಶಿವಾಚಾರ್ಯರ ೫೨ನೇ ಹುಟ್ಟುಹಬ್ಬ-ಶಿಕ್ಷಣ ಸಂಸ್ಥೆಯ

ಬೆಳ್ಳಿ ಹಬ್ಬ),ಬೌದ್ಧಸಿರಿ( ಎಸ್.ಎಂ.ಜನವಾಡಕರ), ಸಂ ಪನ್ನ( ಡಾ.ಸಂಗಮೇಶ ಸವದತ್ತಿಮಠ),ಚನ್ನಶ್ರೀನಿಧಿ (ಹಾರಕೂಡ ಡಾ.ಚೆನ್ನವೀರ ಶಿವಾಚಾರ್ಯರು), ಜನಪ ದ ಕಾಶಿ( ಎಚ್.ಕಾಶಿನಾಥ ರೆಡ್ಡಿ), ಮಾತೃ ಛಾಯೆ( ಪೂಜ್ಯ ಮೈತ್ರಾದೇವಿ)ಬೋಧಿ ಬೆಳಕು(ಡಾ.ಕೆ.ಎಸ್.ಬಂಧು),ಹನ್ನೆರಡು ಅಭಿನಂದನ ಗ್ರಂಥವನ್ನು ವಿಶಿಷ್ಟ ರೀತಿಯಲ್ಲಿ ಸಂಪಾದಿಸಿದ್ದಾರೆ.

•ಸಂಸ್ಮರಣ ಗ್ರಂಥ:-ವಿಶೇಷ ಸಾಹಿತ್ಯ,ಕನ್ನಡ ಕಟ್ಟು ವಲ್ಲಿ ಶ್ರಮಿಸಿದವರ ಸ್ಮರಿಸಲು ಸಂಸ್ಮರಣ ಗ್ರಂಥವನ್ನು ತಯಾರು ಮಾಡಿದ್ದಾರೆ. ಬಿ.ಮಹಾದೇವಪ್ಪರ ಒಡನಾ ಡಿ,ಸೂಗಯ್ಯ ಹಿರೇಮಠರ ಜನಪದ ಜಂಗಮ, ಚನ್ನಣ್ಣ ವಾಲೀಕಾರರ ನಮ್ಮ ಚನ್ನಣ್ಣ,ಭಾಲಚಂದ್ರ ಜಯಶೆಟ್ಟಿಯವರ ಭಾಲಚಂದ್ರ ಈ ನಾಲ್ಕು ಸಂಸ್ಮರಣ ಗ್ರಂಥ ಅವರ ವ್ಯಕ್ತಿತ್ವ, ಸಾಧನೆ,ಸಾಹಿತ್ಯ ಅವಲೋಕನ ಮಾಡಿ ಅಧ್ಯಯನಕಾರರಿಗೆ ಉಪಯುಕ್ತ ಮಾಹಿತಿಯ ನ್ನು ನೀಡಿದ್ದಾರೆ.

ಪಠ್ಯ ಸಂಪಾದನೆ

ಇಲ್ಲೂ ಹಿಂದೆ ಬೀಳದ ಗವಿಸಿದ್ಧಪ್ಪ ಅವರು ಸರಳವಾಗಿ ಪದವಿ ವಿಷಯಕ್ಕೆ ಅನುಗುಣ ವಾಗಿ ಪಠ್ಯ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾತಿನಿ ಧಿಕ ಸಣ್ಣ ಕಥೆಗಳು(ಬಿ.ಕಾಂ ೨),ಹಳಗನ್ನಡ ಕಾವ್ಯ ಸಂಗ್ರ ಹ(ಬಿ.ಎ.೪),ಗಜಲ್ ಸಂಗ್ರಹ(ಬಿ.ಬಿ.ಎಂ೨), ವಿಜ್ಞಾನ ಗಂಗಾ(ಬಿಎಸ್ಸಿ೧) ನಾಲ್ಕು ಗುಲ್ಬರ್ಗಾ ವಿಶ್ವವಿ ದ್ಯಾಲಯಕ್ಕೆ ಪಠ್ಯ ವಾಗಿವೆ.ಅಲ್ಲದೇ ಇವರ ಲೇಖನಗ ಳು ಸಹ ಬಿ.ಕಾಂ.ಮತ್ತು ಬಿ.ಎ.ಕ್ಕೆ ಪಠ್ಯದಲ್ಲಿ ಸೇರಿವೆ.

ಅವರು ಐವತ್ತು ವರ್ಷಗಳಲ್ಲಿ ನೂರು ಪುಸ್ತಕ ರಚನೆ ಇನ್ನೂ ಹತ್ತಾರು ಕೃತಿಗಳು ಮುದ್ರಣ ಹಂತದಲ್ಲಿವೆ.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು

 ಬೇಂದ್ರೆ ಕಾವ್ಯ ಪ್ರಶಸ್ತಿ, ಶೈಲಜಾ ಉಡಚಣ,ಸಾಹಿತ್ಯ ಶ್ರೀ, ಅಪ್ಪ ಪ್ರಶಸ್ತಿ, ಉತ್ತಮ ಕವಿ ಪ್ರಶಸ್ತಿ, ಶ್ರೀಮತಿ ಪಂಪಮ್ನ ಶರಣೇಗೌಡ ವಿರುಪಾಪು ರ ದತ್ತಿ ಪ್ರಶಸ್ತಿ,ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಶ್ರೀ ಪ್ರಶಸ್ತಿ,ರುಕ್ಮಿಣಿ ಬಾಯಿ ಸಾಹಿತ್ಯ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಮಹಾತ್ಮಜ್ಯೋತಿ ಬಾಫುಲೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಫೆಲೋ ಪ್ರಶಸ್ತಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ, ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಿವಿಜಿ ಸಾಹಿ ತ್ಯ ಪ್ರಶಸ್ತಿ,ಕನ್ನಡ ರತ್ನ ಪ್ರಶಸ್ತಿ, ಅಣ್ಣ ಪ್ರಶಸ್ತಿ, ಸಿದ್ದಾರ್ಥ ಪ್ರಶಸ್ತಿ, ಕಾವ್ಯ ರತ್ನ ಪ್ರಶಸ್ತಿ, ಕೊಪ್ಪಳ ಐಸಿರಿ ಪ್ರಶಸ್ತಿ, ದಿವ್ಯಜ್ಯೋತಿ ಪ್ರಶಸ್ತಿ, ಸಾಹಿತ್ಯ ರತ್ನ ಚೂಡಾ ಮಣಿ ಪ್ರಶಸ್ತಿ, ಜ್ಯೋತಿ ಬಾಫುಲೆ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ರಾಜ್ಯೋತ್ಸವ ಪ್ರಶ ಸ್ತಿ ರಂಗ ಸಿರಿ ಮತ್ತು ಸಮಾಗಮ ಕೃತಿಗೆ ಲಭಿಸಿದೆ. ದಿ. ಜಯತೀರ್ಥ ರಾಜಪುರೋಹಿತ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಇಂದು ಪ್ರೀತಿ ಸುತ್ತ,ಸೋಲಿನ ಸೋಲು ಎರಡು ಕಥೆಗಳು ಪ್ರಮಾಣ ಪತ್ರಕ್ಕೆ ಅರ್ಹವಾದರೆ. ಚಿವುಟದಿರಿ ಕಥೆಗೆ ಬೆಳ್ಳಿಪದಕ ಲಭಿಸಿತು. ಬೀದರ ಜಿಲ್ಲಾಡಳಿತವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಕವಿ ಸಂತ ಕನಕದಾಸ ಸಂಶೋಧನಾ ಕೇಂದ್ರ ಕರ್ನಾಟಕ ಸರಕಾತರದ ಕನಕ ಯುವ ಪುರಸ್ಕಾರ, ೫೦ ಸಾವಿರ ನಗದು,ಪ್ರಶಸ್ತಿ ಫಲಕ ಹೊಂದಿದೆ.ಚನ್ನಶ್ರೀ ಪ್ರಶಸ್ತಿ ಐದು ಗ್ರಾಂ ಚಿನ್ನದೊಂದಿಗೆ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಸಾಹಿತ್ಯ ಚೂಡಾಮಣಿ,ಕೆಂಪೇಗೌಡ ಪ್ರಶಸ್ತಿ, ಸಂಘಟನಾ ಚತುರ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕರುನಾ ಡು ಪ್ರಶಸ್ತಿ, ಜಾನಪದ ಸಿರಿ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ದೇವನಾಂಪ್ರಿಯ ಪ್ರಶಸ್ತಿ,ಕ‌ರ್ನಾಟಕ ಸಾಂಸ್ಕೃತಿಕ ರತ್ನಪ್ರಶಸ್ತಿ, ಹೀಗೆ ಐವತ್ತುಕ್ಕೂ ಹೆಚ್ಚು ಪ್ರಶಸ್ತಿ ಗೌರವಗಳು ಲಭಿಸಿವೆ. ಬೇಲೂರಿನ ಉರಿಲಿಂಗ‌ಪೆದ್ದಿ ಮಠದಲ್ಲಿ ಜರುಗಿದ ಪ್ರಥಮ ಹೈ.ಕ.ಯುವ‌ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ. ಅನೇಕ ಮಠಗಳು,ಸಾಹಿತ್ಯ ಸಂಘಟನೆ,ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಇವರ ಕುರಿತು ಪ್ರಕಟವಾದ ಗ್ರಂಥಗಳು

ಡಾ.ಶರಣಪ್ಪ ಕವಡೆ ಗವಿಗಂಧ,ವಿಜಯಕುಮಾರ ಬೀಳಗಿ,ಭೀಮಶೇನ ಎಂ.ಗಾಯಕವಾಡ,ಡಾ.ಪೀರಪ್ಪ ಸಜ್ಜನ,ಈಶ್ವರ ತಡೋಳರ ಸಮರಸ ಜೀವಿ,ಡಾ.ಮಲ್ಲ ಯ್ಯ ಅತ್ತನೂರರ ಗವಿಚಂದಿರ,ವಿಮರ್ಶಾ ಸಿಂಚನ, ಕೃತಿಗಳು ಬಂದಿವೆ.

ಶ್ರೀಸಿದ್ದಲಿಂಗೇಶ್ವರ ಪ್ರಕಾಶನದ ಹಿರಿಯ ಸದಸ್ಯರಾಗಿರುವರು.ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠದ ಶ್ರೀಚನ್ನರೇಣುಕ ಬಸವ ಪ್ರಶಸ್ತಿ, ಕನಕ ಯುವ ಮತ್ತು ಗೌರವ ಪ್ರಶಸ್ತಿ, ಜಾನಪದ ಪುಸ್ತಕ ಆಯ್ಕೆ ಸಮಿತಿ,ಹಲವು ಸಂಸ್ಥೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿರುವರು.

ಸಾಕ್ಷಿ ಪ್ರತಿಷ್ಠಾನ

 ಹುಮನಾಬಾದನಲ್ಲಿ ಪ್ರತಿಷ್ಠಾನ ಮಾಡಿ ನೂರಾರು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಗಳ ಜೊತೆಗೆ ಹದಿನಾರು ಮೌಲಿಕ ಕೃತಿಗಳನ್ನು ಹೊರ ತಂದಿದ್ದಾರೆ.ಅದರಂತೆ ಪ್ರಕಾಶಕರಾಗಿರುವರು.ಅದರ ಅಧ್ಯಕ್ಷರಾದವರು.

ಸಂಘ - ಸಂಸ್ಥೆ ಪದಾಧಿಕಾರಿ

೧.ಜಿಲ್ಲಾಧ್ಯಕ್ಷ: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಯಚೂರು-೨೦೦೫-೦೭,ಜಿಲ್ಲಾ ಕಲಾ ವಿಕಾಸ ಪರಿ ಷತ್ತು ರಾಯಚೂರು ದುಃಖಿತ ಶೋಷಿತ ಸಮಾವೇಶ-೨೦೦೮, ವಿಶ್ವ ಶರಣು ವಚನ ಫೌಂಡೇಷನ್,ಈಗ‌ ಪ್ರಸ್ತುತ ಕಲಬುರಗಿ ಜಿಲ್ಲೆಯ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷರಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ, ಕಲಬುರಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಹೈ.ಕ.ಸಾಹಿತ್ಯ ಮಂಟಪ ಪ್ರಧಾನ ಕಾರ್ಯದರ್ಶಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಿದ್ದಾರೆ.

ಪತ್ರಿಕಾ ಸೇವೆ

ತಳಮಳ ವಾರ ಪತ್ರಿಕೆ, ಸಂಶೋಧನಾ ವ್ಯಾಸಾಂಗ,ಸಂಯುಕ್ತ ಕರ್ನಾಟಕ ದಿನಪತ್ರಿಕೆ ಬಸವ ಕಲ್ಯಣ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆಕಾಶವಾಣಿ-ದೂರದರ್ಶನ:- ಕಲಬುರಗಿ, ರಾಯಚೂರು ಆಕಾಶವಾಣಿ,ಕಲಬುರಗಿ, ಬೆಂಗಳೂರು ದೂರದರ್ಶನದಲ್ಲಿ ಇವರ ಕಾವ್ಯ,ಕಥೆ,ಹೊಸ ಓದು, ವಿ ಮರ್ಶೆ, ವರದಿ,ಸಮೀಕ್ಷೆ, ಸಂದರ್ಶನ ಪ್ರಸಾರವಾಗಿವೆ.

ಡಾ.ಗವಿಸಿದ್ಧಪ್ಪ ಪಾಟೀಲ ಅವರು ಬಹುಮುಖ ಪ್ರತಿಭಾವಂತರು.

ಮಠಗಳಲ್ಲಿ ಸಾಹಿತ್ಯ ಜಾತ್ರೆ

ಹಾರಕೂಡ ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ದ ಸಾಹಿತ್ಯಕ ಸಾಂಸ್ಕೃತಿಕ ಸಲಹೆಗಾರರಾಗಿದ್ದಾರೆ.೨೦ ೦೭ರಿಂದ ಇಲ್ಲಿಯವರೆಗೆ ಡಾ.ಚೆನ್ನವೀರ ಶಿವಾಚಾರ್ಯ ರ ಆಪ್ತ ಭಕ್ತ ಸಾಹಿತಿಗಳಲ್ಲಿ ಒಬ್ಬರು.

ಬೇಲೂರು ಉರಿಲಿಂಗಪೆದ್ದಿ ಮಠ:-ಈ ಮಠ ಇರುವು ದು ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ.ಅಲ್ಲಿ ಶರಣ ಸಂಸ್ಕೃತಿ ಉತ್ಸವ ಬದಲಾಗಿ ಉರಿಲಿಂಗಪೆದ್ದಿ ಉತ್ಸವ ಮಾಡಿ ಉರಿಲಿಂಗಪೆದ್ದಿ ಭಾವಚಿತ್ರ ಬದಲಾಯಿಸಿ ಹೊ ಸ ರೂಪ ನೀಡಿದರು.ಹುಡುಗಿಯ ಬಸವರಾಜ ಮುಗಳಿಯವರು ಈ ಚಿತ್ರ ಇಂದು ಚಾಲ್ತಿಯಲ್ಲಿದೆ. ೨೦೦೮ ರಿಂದ ಇಲ್ಲಿಯವರೆಗೆ ಹದಿನಾರು ಹೊಸ ಹೊಸ ಸಮ್ಮೇಳನ ಮಾಡಿ ಗಡಿಭಾಗದಲ್ಲಿ ಕನ್ನಡ ಕಟ್ಡು ವ ಕೆಲಸ ಮಾಡಿದ್ದಾರೆ.

ಸಸ್ತಾಪೂರದ ಶ್ರೀ ಯಲ್ಲಾಲಿಂಗೇಶ್ವರ ಮಠ:- ತಡೋಳ ಸಸ್ತಪೂರದ ಮಠದಲ್ಲಿ ಸರ್ವಧರ್ಮ ಸಮ್ಮೇಳನ, ಎಂಟು ಬೀದರ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ ಸಮ್ಮೇಳನ,ಚುಟುಕು,ಕವಿ,ಕರುನಾಡು, ತಾಲೂಕು ಮ ತ್ತು ಜಿಲ್ಲಾ ದಲಿತ ಸಮ್ಮೇಳನ ಹದಿನಾಲ್ಕು ಸಮ್ಮೇಳನ ಮಾಡಿದವರು. ಪ್ರಾಧ್ಯಾಪಕ,ಕವಿ,ಸಾಹಿತಿ,ಕಥೆಗಾರ,ವಿಮರ್ಶಕ,ಜೀವನ

ಚರಿತ್ರೆಕಾರ,ವ್ಯಕ್ತಿ ಚಿತ್ರಣಕಾರ,ಜಾನಪದ ವಿದ್ವಾಂಸ,ವ ಚನ ಸಾಹಿತ್ಯಕಾರ,ರಂಗ ತಜ್ಞ, ದಲಿತ,ಬಂಡಾಯ, ಕನಕ ಸಾಹಿತ್ಯ, ಪಠ್ಯ ಸಂಪಾದಕರಾಗಿ, ಅಭಿನಂದನ ಗ್ರಂಥ ರೂವಾರಿ,ಸ್ಮರಣ ಸಂಚಿಕೆ ತಯಾರಕ,ಸಂಪಾದ ನೆಕಾರರಾಗಿದ್ದಾರೆ.ಸಾಹಿತಿಯಾದಂತೆ ಸಾಂಸ್ಕೃತಿಕ ಸಂಘಟಕರು ಹೌದು.ಅವರೊಬ್ಬ ಕ್ರಿಯಾಶೀಲ ವ್ಯಕ್ತಿ.

ಡಾ.ಶರಣಬಸಪ್ಪ ವಡ್ಡನಕೇರಿ