ಆಳಂದ ಮತಗಳ್ಳತನ ತನಿಖೆ ಸುಭಾಷ್ ಗುತ್ತೇದಾರ್ ವಿರುದ್ಧ ಷಡ್ಯಂತ್ರ: ಡಾ.ಪ್ರಣವಾನಂದ ಶ್ರೀ ಆರೋಪ

ಆಳಂದ ಮತಗಳ್ಳತನ ತನಿಖೆ ಸುಭಾಷ್ ಗುತ್ತೇದಾರ್ ವಿರುದ್ಧ ಷಡ್ಯಂತ್ರ: ಡಾ.ಪ್ರಣವಾನಂದ ಶ್ರೀ ಆರೋಪ

ಆಳಂದ ಮತಗಳ್ಳತನ ತನಿಖೆ ಸುಭಾಷ್ ಗುತ್ತೇದಾರ್ ವಿರುದ್ಧ ಷಡ್ಯಂತ್ರ: ಡಾ.ಪ್ರಣವಾನಂದ ಶ್ರೀ ಆರೋಪ

ಕಲಬುರಗಿ : ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆಪಾದಿಸಿ ಎಸ್ಐಟಿ ಮೂಲಕ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್ ಮತ್ತು ಅವರ ಮಕ್ಕಳ ಮನೆ ಮೇಲೆ ದಾಳಿ ಮಾಡಿ ರಾಜಕೀಯ ಭವಿಷ್ಯ ಮಟ್ಟ ಹಾಕಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಶ್ರೀಗಳು ಕಟುವಾಗಿ ಆರೋಪಿಸಿದ್ದಾರೆ. 

    ಆಳಂದ ಮತಕ್ಷೇತ್ರದಿಂದ ಹಲವು ಬಾರಿ ಗೆದ್ದು ಶಾಸಕರಾಗಿದ್ದ ಸುಭಾಷ್ ಗುತ್ತೇದಾರ್ 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆದರೆ ಈಗ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಇದು ಸೇಡಿನ ರಾಜಕೀಯದ ಭಾಗವಾಗಿದೆ. ಇಡೀ ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ನಾಯಕ ಸೇರಿದಂತೆ 26 ಪಂಗಡಗಳ ನಾಯಕರನ್ನು ರಾಜಕೀಯವಾಗಿ ಮುಗಿಸಲು ತೆರೆ ಮರೆಯಲ್ಲಿ ಹುನ್ನಾ ರ ನಡೆಯುತ್ತಿದೆ. ಆಳಂದದಲ್ಲಿ ಸುಭಾಷ್ ಗುತ್ತೇದಾರ್ ಶಾಸಕರಾಗಿ ಅಭಿವೃದ್ಧಿ ಸಾಧಿಸಿರುವುದನ್ನು ಕ್ಷೇತ್ರದ ಜನ ಈಗಲೂ ಕೊಂಡಾಡುತ್ತಿದ್ದಾರೆ. ಗುತ್ತೇದಾರ್ ಮತ್ತು ಅವರ ಮಕ್ಕಳ ಮೇಲೆ ರಾಜಕೀಯ ಕುತ್ತು ಎಸಗಲು ಎಸ್ಐಟಿ ಮೂಲಕ ದಾಳಿ ನಡೆಸಲಾಗುತ್ತಿದೆ. ಆರು ತಿಂಗಳ ಹಿಂದೆ ಇದೇ ರೀತಿ ಸಂತೋಷ್ ಗುತ್ತೇದಾರ್ ಮನೆಯ ಮೇಲೆ ದಾಳಿ ಮಾಡಿ ಬಂಧನಕ್ಕೀಡು ಮಾಡಿರುವುದು ರಾಜಕೀಯ ದ್ವೇಷದ ಕಾರಣದಿಂದ ಹೊರತು ಬೇರೇನೂ ಅಲ್ಲ. ಮತಗಳ್ಳ ತನದ ಆಪಾದನೆ ಹೊರಿಸಿ ಮತ್ತೆ ಗುತ್ತೇದಾರ್ ಮನೆಗಳ ಮೇಲೆ ದಾಳಿ ಮಾಡಿರುವುದು ಖಂಡನೀಯ ವಾಗಿದೆ.

  ಗುತ್ತೇದಾರ್ ಕುಟುಂಬದ ರಾಜಕೀಯ ಮುಗಿಸಲು ಯಾರಿಂದಲೂ ಅಸಾಧ್ಯ. ಒಂದು ವೇಳೆ ಅಂತಹ ದುಸ್ಸಾಹಸಕ್ಕೆ ಇಳಿದರೆ ನಾವು ಗುತ್ತೇದಾರರನ್ನು ಬೆಂಬಲಿಸಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು,ಎಸ್ಐಟಿ ತಂಡ ಹಾಗೂ ಶಾಸಕರಾದ ಬಿ ಆರ್ ಪಾಟೀಲ್ ಗಮನಿಸಬೇಕು. ರಾಜಕೀಯ ದ್ವೇಷ ಕೈ ಬಿಟ್ಟು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ರಾಜಕಾರಣ ಮಾಡಲು ಸಲಹೆ ನೀಡುತ್ತಿದ್ದೇನೆ.ಪ್ರಸ್ತುತ ಆಫ್ರಿಕಾ ದೇಶದ ಉಗಾಂಡಾ ಪ್ರವಾಸದಲ್ಲಿರುವುದರಿಂದ ಸ್ವದೇಶಕ್ಕೆ ಮರಳಿದ ಬಳಿಕ ಈ ಬಗ್ಗೆ ಕೂಲಂಕಷವಾದ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.