ಮಠಗಳಿಂದ ಜನರ ಬದುಕು ಸುಂದರವಾಗುತ್ತದೆ : ಬಾಳಿಕಾಯಿ ಅಭಿಮತ

ಮಠಗಳಿಂದ ಜನರ ಬದುಕು ಸುಂದರವಾಗುತ್ತದೆ : ಬಾಳಿಕಾಯಿ ಅಭಿಮತ

ಮಠಗಳಿಂದ ಜನರ ಬದುಕು ಸುಂದರವಾಗುತ್ತದೆ : ಬಾಳಿಕಾಯಿ ಅಭಿಮತ 

ಅಫಜಲಪುರ: ಮಠಗಳು ಸಮಾಜದಲ್ಲಿ ನೈತಿಕತೆ, ಶಿಕ್ಷಣ, ಮತ್ತು ಧಾರ್ಮಿಕ ಚಿಂತನೆಗೆ ಪೂರಕವಾಗಬಹುದು. ಇವುಗಳಿಂದ ಆಶ್ರಯ, ಅಧ್ಯಾತ್ಮ ಮತ್ತು ಸೇವಾ ಚಟುವಟಿಕೆಗಳನ್ನು ಒದಗಿಸುವ ಮೂಲಕ ಜನರ ಬದುಕಿಗೆ ಸಮೃದ್ಧಿಯನ್ನು ತರುತ್ತವೆ ಎಂದು ಕ್ರಾಂತಿವೀರ ಬ್ರಿಗೇಡ್ ದ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ ಹೇಳಿದರು 

ನೀಲೂರಿನ ಬಂಗಾರ ಜಡೆ ನೀಲಕಂಠೇಶ್ವರ ಮಠದಲ್ಲಿ ನಡೆದ 7 ನೇ ದಿನದ ಲಚ್ಯಾಣ ಸಿದ್ದಲಿಂಗ ಮಹಾರಾಜರ ಮಹಾಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು 

ನೀಲೂರಿನ ನಿಂಬೆಕ್ಕ ತಾಯಿಯವರು ಶಿವನನ್ನೇ ಧರೆಗೆ ಕರೆಸಿ ಜನರ ಜೀವನ ಪಾವನಗೊಳಿಸಿದರು ಎಂದು ಹೇಳಿದರು.

 ದಾನಮ್ಮ ದೇವಿ ಸಮಿತಿಯ ಪಾರ್ವತಿ ಬೀಳಗಿ ಮಠದ ಕುರಿತು ಮಾತನಾಡಿದರು,

ಮಠದ ಧರ್ಮಾಧಿಕಾರಿಗಳಾದ ಶರಣಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು, ಅಶೋಕ ಲಿಂಬಿಗಿಡ, ಪ್ರಭು ಮಾಳಿ,ಶಂಕರ ಹೋಸಮನಿ, ಜಗದೀಶ ಅಥಣಿ,ಗುಂಡಪ್ಪ ಗೋಕಾಕ,ಜಂದ್ರು ಬಾಳಿಕಾಯಿ, ಸೂರ್ಯಕಾಂತ ರಾಮಜಿ, ಹಣಮಂತ ಜಂಬಗಾ, ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಲಚ್ಚಾಣ ಸಿದ್ದಲಿಂಗ ಮಹಾರಾಜರ ಮದುವೆ ಅದ್ದೂರಿಯಾಗಿ ಮುತ್ತೈದೆಯರು ನಡೆಸಿದರು. ನಗರದ ಆದರ್ಶ್ ಕಾಲೋನಿಯ ದಾನಮ್ಮ ದೇವಿ ಸಮಿತಿಯ ಎಲ್ಲಾ ಮುತ್ತೈದೆಯರಿಗೆ ಉಡಿತುಂಬಿ ಹಾರೈಸಿದರು. ಭಗವಂತರಾವ ಕಾಮಜಿ, ಮಲ್ಲಿನಾಥ ಹಾಳಮಳ್ಳಿ,ನಾಗಪ್ಪ ಠಕ್ಕಾ,ವಿರಭದ್ರಪ್ಪ ಪಾಟೀಲ,ಸಾತಲಿಂಗಪ್ಪ ಲೋಣಿ, ಶರಣಗೌಡ ಪಾಟೀಲ ಪಾಳಾ,ಭಾವುರಾವ ಕುಲಕರ್ಣಿ,

ಸಾಯಬಣ್ಣ ಹೂಗಾರ ನಿಲೂರ ಸ್ವಾಗತಿಸಿದರು, ಸಂಗಮನಾಥ ಹೂಗಾರ ನಿರೂಪಿಸಿದರು, ಮಲ್ಲಿನಾಥ ಕಾಮದಿ ವಂದಿಸಿದರು.