ಕೆ.ಪಿ.ನಂಜುಂಡಿ - ಕೇಂದ್ರದ ಜಾತಿಗಣತಿಯಲ್ಲಿ ವಿಶ್ವಕರ್ಮ ಎಂದು ಜಾತಿ ನೋಂದಾಯಿಸಲು ಕರೆ
ಚಿಕ್ಕೇಶ್ವರ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮ|ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಭಾಗಿ
ಕೇಂದ್ರದ ಜಾತಿಗಣತಿಯಲ್ಲಿ ವಿಶ್ವಕರ್ಮ ಎಂದು ಜಾತಿ ನೋಂದಾಯಿಸಲು ಕರೆ
ಅಫಜಲಪುರ: ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮುದಾಯದವರು ಉಪಜಾತಿ ಹಾಗೂ ವಿಶ್ವಕರ್ಮ ಲಿಂಗಾಯತ ಎಂದು ಜಾತಿಗಣತಿಯಲ್ಲಿ ನೋಂದಣಿ ಮಾಡಿರುವುದರಿಂದ ಈಗ 8 ಲಕ್ಷಕ್ಕೆ ಇಳಿಕೆ ಕಂಡಿದೆ. ಇದರಿಂದಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಮುಂಬರುವ ಕೇಂದ್ರ ಸರ್ಕಾರದ ಜಾತಿಗಣತಿಯಲ್ಲಿ ಕೇವಲ ವಿಶ್ವಕರ್ಮ ಎಂದು ನೋಂದಾಯಿಸಿ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ. ನಂಜುAಡಿ ಕರೆ ನೀಡಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ಶ್ರೀ ಮೂರುಝಾವಧೀಶ್ವರ ಮಠದ ಶ್ರೀ ಚಿಕ್ಕೇಶ್ವರ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲೇ ಐದು ಕುಲಕಸುಬು ಮಾಡುವ ಏಕೈಕ ವಿಶ್ವಕರ್ಮ ಸಮುದಾಯವಾಗಿದೆ. ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಸಂಘಟನೆಯಲ್ಲಿ ವ್ಯಾಪಾರಿಕರಣ ಆದಾಗ ಸಮುದಾಯ ಅಭಿವೃದ್ಧಿಗೊಂದಲು ಸಾಧ್ಯವಿಲ್ಲ. ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಧೃಡರಾಗಲು ಜಾತಿ ಸಂಘಟನೆ ಅತ್ಯಂತ ಮಹತ್ವವಾಗಿದೆ. ಹೀಗಾಗಿ ನಾವೆಲ್ಲರೂ ಮೊದಲು ಸಂಘಟಿತರಾಗಬೇಕಾಗಿದೆ,
ದೇವಸ್ಥಾನ ನಿರ್ಮಿಸುವವರು ನಾವು ನಂತರ ದೇವಸ್ಥಾನದಿಂದ ಹೋರಗೆ ನಿಲ್ಲುವವವರು ನಾವು, ಹುಟ್ಟಿನಿಂದ ಹಿಡಿದು ಸತ್ತ ವ್ಯಕ್ತಿ ಶವಸಂಸ್ಕಾರಕ್ಕೆ ಬೇಕಾಗುವ ಸಲಕರಣೆಗಳು ಮಾಡಿ ಕೊಡುವ ನಾವು ಎಲ್ಲರಿಂದ ದೂರವಾಗಿದ್ದೇವೆ. ಯಾವುದೇ ಕುಲಕಸಬು ಇಲ್ಲದ ಸಮುದಾಯದಗಳು ಇಂದು ರಾಜಕೀಯದಲ್ಲಿ ಬಲಾಡ್ಯರಾಗಿದ್ದಾರೆ. ಎಲ್ಲವನ್ನು ಬಲ್ಲವರು ನಾವು ಇಂದು ಕಟ್ಟಕಡೆಯಲ್ಲಿ ಇದ್ದೇವೆ ಎಂದು ಬೇಸರದ ಮಾತುಗಳನ್ನಾಡಿದರು.
ಅಲ್ಲದೇ ಸಮುದಾಯದ ಸ್ವಾಮೀಜಿಗಳು ಕೂಡ ಒಂದಾಗಿ ನಡೆದಾಗ ಮಾತ್ರ ಸಮಾಜದ ಗುರಿ ತಲುಪಲು ಸಾಧ್ಯವಾಗುತ್ತದೆ. 9 ವರ್ಷಗಳ ನಿರಂತರ ಹೋರಾಟದಿಂದ ಫಲವಾಗಿ ಸರ್ಕಾರ ವಿಶ್ವಕರ್ಮ ಹಾಗೂ ಜಕಣಾಚಾರ್ಯರ ಜಯಂತಿಯನ್ನು ಆಚರಿಸಲು ಮುಂದಾಗಿದೆ. ರಾಜ ಮಹಾರಾಜರ ಕಾಲದಲ್ಲೂ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿತ್ತು, ಈಗಲೂ ನಮ್ಮ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ನಡೆಯುತ್ತಾ ಬರುತ್ತಿದೆ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸುಮ್ನೆ ಕೂಡುವ ವ್ಯಕ್ತಿ ನಾನಲ್ಲ, ಸಮಾಜಕ್ಕಾಗಿ ಜೀವ ಕೂಡ ಕೊಡಲು ಸಿದ್ದನಿದ್ದೇನೆ. ಆದರೆ ಮೊದಲು ನೀವು ನನ್ನನ್ನು ನಂಬಿ ನಾನು ಯಾವತ್ತೂ ಕೂಡ ಸಮಾಜಕ್ಕೆ ದ್ರೋಹ ಮಾಡುವುದಿಲ್ಲ. ಸರ್ಕಾರದಿಂದ 32 ಜಿಲ್ಲೆಯಲ್ಲಿ ಸಮುದಾಯ ಭವನ, ವಸತಿ ನಿಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇನೆ .ಹೀಗಾಗಿ ನನ್ನ ಜತೆ ಗಟ್ಟಿಯಾಗಿ ನಿಲ್ಲಿ ಸಾಕು, ಮುಂದಿನದು ನಾನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ ಅವರು ಕಲಬುರಗಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮುದಾಯವನ್ನು ಸಂಘಟಿಸುವಲ್ಲಿ ಈರಣ್ಣ ಪಂಚಾಳ್ ನಿರಂತರವಾಗಿ ಶ್ರಮವಹಿಸಿದ್ದಾರೆ. ಅವರ ಶ್ರಮ ಸಮಾಜ ಯಾವತ್ತೂ ಕೂಡ ಮರೆಯುವುದಿಲ್ಲ ಎಂದರು.
ವಿಶ್ವಕರ್ಮ ಸಮುದಾಯದ ಹಿರಿಯ ಮುಖಂಡ ಈರಣ್ಣ ಪಂಚಾಳ್ ಪ್ರಸಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯ 40 ಲಕ್ಷ ಜನಸಂಖ್ಯೆ ಹೊಂದಿದ್ದರೂ ಸಹ ಬೆಳಕಿಗೆ ಮಾತ್ರ ಇನ್ನೂ ಬಂದಿರಲಿಲ್ಲ, ಆದರೆ ಕೆ.ಪಿ.ನಂಜುAಡಿ ಈ ಸಮುದಾಯವನ್ನು ಬೆಳಕಿಗೆ ತರುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಸಂಘಟನೆ ಮತ್ತು ಹೋರಾಟ ಮಾಡುವ ಮೂಲಕ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿ, ಜಕಣಾಚಾರ್ಯ, ವಿಶ್ವಕರ್ಮ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಮಾಡಿದ್ದಾರೆ. ಅಲ್ಲದೇ ಮೂರುಝಾವಧೀಶ್ವರ ಮಠದ ಬ್ರಹ್ಮನಂದ ಮಹಾಸ್ವಾಮಿಗಳ ವಯಸ್ಸು ಚಿಕ್ಕದಾದರೂ ಸಮಾಜದ ಮೇಲೆ ಅತ್ಯಂತ ಕಾಳಜಿಯಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮುದಾಯದ ಸಂಘಟನೆಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು. ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವಿಂದ್ರ ಕಲ್ಲೂರ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಸಾನಿಧ್ಯವನ್ನು ಶ್ರೀ ಚಿಕ್ಕೇಂದ್ರ ಮಹಾಸ್ವಾಮಿಗಳು, ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಶ್ರೀ ಅಜ್ಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಆಯ್ ಸಿ. ಪಂಚಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ವಸಂತಾ ಮುರಳಿ ಆಚಾರ್ಯ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಎಸ್.ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೋಲಿ ಸಮಾಜದ ಮುಖಂಡ ಲಚ್ಚಪ್ಪ ಜಮಾದಾರ, ಚಂದ್ರಶೇಖರ ಕರಜಗಿ, ಮೌನೇಶ್ ಬಡಿಗೇರ, ಜಾಫರ್ ಪಟೇಲ್ ಚಲನ ಚಿತ್ರ ನಟ ಬೀದರನ ಬಲರಾಮ ವಿಶ್ವಕರ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ನಂತರ ಪ್ರತಿಕ್ರಿಯೇ ನೀಡಿದ ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವೀಂದ್ರ ದೇಸಾಯಿ ಅವರು ಮಾತನಾಡಿ ಸಂಘಟನೆ ಮತ್ತು ಸಮಾಜಕ್ಕಿಂತ ಯಾರು ದೊಡ್ಡವರಲ್ಲ. ಸಮಾಜದ ಗುರುಗಳು ಇಂದು ಬೇರೆ ಬೇರೆ ಇರಬಹುದು ಆದರೆ ಅವರು ಒಂದಾಗುತ್ತಾರೆ. ಆದರೆ ಎಲ್ಲವೂ ನನ್ನಿಂದ, ನನ್ನ ಹಿಂದೆ ಬನ್ನಿ ಎನ್ನುವುದು ಎಷ್ಟರ ಮಟ್ಟರ ಮಟ್ಟಿಗೆ ಸರಿ, ಸಮಾಜ ಎಂದ ಮೇಲೆ ಕೆಲವರು ವಿರೋಧ ಮಾಡುವವರು ಇರುತ್ತಾರೆ, ಕೆಲವರು ಸುಮ್ಮನೆ ಎಲ್ಲವನ್ನು ನೋಡುವವರು ಇರುತ್ತಾರೆ. ಆದರೆ ವಿರೋಧ ಮಾಡಿದವರನ್ನು ಹೊರಗೆ ಹೇಗೆ ಇಡಲು ಸಾಧ್ಯ? ಎಂದು ಪ್ರತಿಕ್ರಿಯೇ ನೀಡಿದರು.
ಸದ್ಯಕ್ಕೆ ಸಮಾಜ ಅಭಿವೃದ್ಧಿಯ ಕಡೆ ಎಲ್ಲರೂ ಗಮನ ನೀಡಬೇಕು. ಹರಿದು ಹಂಚಿ ಹೋಗುತ್ತಿರುವ ವಿಶ್ವಕರ್ಮ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಬೇಕಾಗಿದೆ. ನಾನ್ನಿದ್ದರೇ ನೀವು ಎನ್ನುವ ಅಹಂ ಸರಿಯಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಮೌನೇಶ ಬಡಿಗೇರ, ಹಾಗೂ ಅನುರಾಧ ಕುಲಕರ್ಣಿ ಮಾಡಿದರು.
ಮೊದಲಿಗೆ ಕು. ರಷಿಕಾ ಪೋದ್ದಾರ ಅವರಿಂದ ಭರತ ನಾಟ್ಯ ಪ್ರಸ್ತೂತ ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಮೈಸೂರು, ರಾಯಚೂರು, ಕೊಪ್ಪಳ, ಬೀದರ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಯ ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು.
ತುಲಾಭಾರ ಮತ್ತು ಸನ್ಮಾನ!
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ಮೂರುಝಾವಧೀಶ್ವರ ಮಠದ ಶ್ರೀ ಚಿಕ್ಕೇಶ್ವರ ಮಹಾಸ್ವಾಮಿಗಳ ಪುಣ್ಯರಾಧನೆ ಮಹೋತ್ಸವದಲ್ಲಿ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಿತು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ವಿಶ್ವಕರ್ಮ ಕಲಾಚೇತನ ಪ್ರಶಸ್ತಿ ಪ್ರದಾನ ಹಾಗೂ ಸಾರ್ಥಕ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿರುವ ಮಹನೀಯರಿಗೆ ಸನ್ಮಾನಿಸಲಾಯಿತು.
ಶಿವರಾಜ ಶಾಸ್ತ್ರಿ ಅವರಿಂದ ವಟುಗಳಿಗಳಗೆ ಉಪನಯನ ನಡೆಯಿತು.
