2025 ನೇ ಸಾಲಿನ ದ್ವಿತೀಯ ಪಿ.ಯು. ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ರಾಂಡಮೈಸ್ ಸುತ್ತೋಲೆಯನ್ನು ಹಿಂಪಡೆಯಲು ಆಗ್ರಹ ಶ್ರೀ ಶಶೀಲ್ ಜಿ ನಮೋಶಿ

2025 ನೇ ಸಾಲಿನ ದ್ವಿತೀಯ ಪಿ.ಯು. ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ರಾಂಡಮೈಸ್ ಸುತ್ತೋಲೆಯನ್ನು ಹಿಂಪಡೆಯಲು ಆಗ್ರಹ ಶ್ರೀ ಶಶೀಲ್ ಜಿ ನಮೋಶಿ

2025 ನೇ ಸಾಲಿನ ದ್ವಿತೀಯ ಪಿ.ಯು. ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ರಾಂಡಮೈಸ್ ಸುತ್ತೋಲೆಯನ್ನು ಹಿಂಪಡೆಯಲು ಆಗ್ರಹ ಶ್ರೀ ಶಶೀಲ್ ಜಿ ನಮೋಶಿ

 ದಿನಾಂಕ:01-10-2024ರಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ಹೊರಡಿಸಿರುವ ಸುತ್ತೋಲೆಯಲ್ಲಿ 2025 ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ ಮಾದರಿಯಲ್ಲಿ ಯಾದೃಚ್ಛಿಕರಿಸಿ Randomise ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷಾ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕುರಿತಂತೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ವಹಿಸುವುದು ಎಂದು ತಿಳಿಸಲಾಗಿದೆ.

ಈ ರೀತಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿ.ಯುಸಿ ಪ್ರಾಯೋಗಿಕ ಪರೀಕ್ಷೆಗೆ ಯಾದೃಚ್ಛಿಕರಿಸುವುದರಿಂದ ಉಂಟಾಗುವ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಎಂದು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಸಚಿವ ಶ್ರೀ ಮಧು ಬಂಗಾರಪ್ಪ ನವರಿಗೆ ಪತ್ರ ಬರೆದಿದ್ದಾರೆ 

೧) ಗ್ರಾಮಾಂತರ ಪ್ರದೇಶದಲ್ಲಿ ಪ್ರಯೋಗಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಯಾದೃಚ್ಛಿಕರಿಸುವುದರಿಂದ ಕನಿಷ್ಠ 15ರಿಂದ 30 ಕಿಲೋಮೀಟರ್ ದೂರದ ಕಾಲೇಜುಗಳಿಗೆ ಪ್ರಾಯೋಗಿಕ ವಿಷಯದ ವಿಜ್ಞಾನ ಮತ್ತು ವಾಣಿಜ್ಯದ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸಾರಿಗೆತೊಂದರೆಯಿಂದ ಸಮಯ್ಯಕ್ಕೆ ಸರಿಯಾಗಿ ಪ್ರಾಯೋಗಿಕ ಪರೀಕ್ಷಾ ಕೇಂದ್ರ ತಲುಪುವುದು ಕಷ್ಟವಾಗುತ್ತದೆ.

೨) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಯೋಗಾಲಯದ ಉಪಕರಣಗಳ ಕೊರತೆ, ಹಾನಿಗೊಗಳಗಾದ ಉಪಕರಣಗಳು ದುರಸ್ತಿಗೊಳಿಸಿರುವುದಿಲ್ಲ. ಮತ್ತು ಪ್ರಯೋಗಾಲಯಗಳಲ್ಲಿ ಅಟೆಂಡರ್ಗಳ ಕೊರತೆ ಇದೆ.

೩) ಬೇರೊಂದು ಉಪಕರಣಗಳು ಪರಿಕ್ಷಾ ಕೇಂದ್ರದಿಂದ ಪ್ರಯೋಗಾಲಯ ವಿದ್ಯಾರ್ಥಿಗಳಿಗೆ ಅಪರಿಚಿತ ಹಾಗೂ ಹಾಗೂ ಹೊಸದಾಗಿ ಇರುವುದರಿಂದ ಅವರಲ್ಲಿ ಭಯ ಆತಂಕ ಹಾಗೂ ಒತ್ತಡ ಹೆಚ್ಚಾಗಿ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಖಾಸಗಿ ಮತ್ತು ಸರ್ಕಾರಿ ಕಾಲೇಜಿನ ಪ್ರಯೋಗಾಲಯ ಉಪಕರಣಗಳಲ್ಲಿ ಬಹಳ ವ್ಯತ್ಯಾಸವಿದೆ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗುತ್ತದೆ.

೪) ಎಲ್ಲಾ ಕಾಲೇಜಿಗಳಿಗೂ ಹೊಂದಿಕೆಯಾಗುವಂತೆ ಪರೀಕ್ಷಾ ಕೇಂದ್ರಗಳ ಆಯ್ಕೆ ಮಾಡುವುದು ಕಷ್ಟ ಹಾಗೂ ಕೆಲ ತಾಲ್ಲೂಕುಗಳಲ್ಲಿ ಕೇಂದ್ರಗಳು ಕಡಿಮೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರೀಕ್ಷೆಗಳನ್ನು ತುಂಬಾ ದಿನಗಳವರೆಗೆ ನಡೆಸಬೇಕಾಗುತ್ತದೆ.

೫) ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಬೇಕಾಗಿರುವ ಸಾಮಗ್ರಿಗಳ ಕೊರತೆ ಇದ್ದು, ಅಂತಹ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದು ಕಷ್ಟವಾಗುವುದು. ಹಾಗೂ ಹೆಚ್ಚಿನ ಅವಶ್ಯಕತೆ ಪೂರೈಸಲು ಬೇರೆ ಕಾಲೇಜಿನಿಂದ ಸಾಮಗ್ರಿಗಳನ್ನು ತಂದು ನಡೆಸುವುದು ಪ್ರಾಯೋಗಿಕವಾಗಿ ಕಷ್ಟ.

೬) ಹೊಸ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಮಾರ್ಗದರ್ಶನ ನೀಡಿ ಅವರಿಗೆ ಎಲ್ಲೂ ತೊಂದರೆಯಾಗದಂತೆ ನೋಡಿಕೊಂಡು ಅವರ ಆತಂಕವನ್ನು ಕಡಿಮೆ ಮಾಡಿ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಸಿಕೊಡುವುದು ಮೌಲ್ಯಮಾಪಕರಿಗೂ ಕಷ್ಟದ ವಿಷಯ. ಮುಂದುವರೆದು ಕೆಲ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಗೈರು ಹಾಜರಾದರೆ ತಕ್ಷಣ ಪ್ರಾಚಾರ್ಯರ ಗಮನಕ್ಕೆ ತಂದು ಅವರಿಗೆ ದೂರವಾಣಿ ಮಾಡಿ ಪೋಷಕರನ್ನು ಸಂಪರ್ಕಿಸಲು ಅವರದೇ ಕಾಲೇಜಿನಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ನಮ್ಮ ಇಲಾಖೆಯ ನಿಯಮದಂತೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮರು ಪ್ರಾಯೋಗಿಕ ಪರೀಕ್ಷೆ ತೆಗೆದುಕೊಳ್ಳಲು ಇಲಾಖೆಯಲ್ಲಿ ಅವಕಾಶವಿಲ್ಲ.

೭) ಇಂಜಿನೀಯರಿಂಗ್ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು (ಡಿಪ್ಲೋಮಾ) ಗಳಲ್ಲು ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಯಾದೃಚೀಕರಿಸುವ ಪದ್ದತಿ ಇರುವುದಿಲ್ಲ.

೮) ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಯಾದೃಚೀಕರಿಸುವ ಬದಲು ಪಾರದರ್ಶಕವಾಗಿ ಪ್ರಾಯೋಗಿಕ ಪರೀಕ್ಷೆಗಳನ್ನುನಡೆಸಲು ಉಪನ್ಯಾಸಕರನ್ನು ಯಾದೃಚ್ಚೇಕರಿಸುವುದು ಉತ್ತಮ.

ಈ ಮೇಲಿನ ಎಲ್ಲಾ ಸಕಾರಣಗಳಿಂದಾಗಿ ತಮ್ಮ ಸುತ್ತೋಲೆ ದಿನಾಂಕ: 01-10 2024ರ ದ್ವಿತೀಯ ಪಿ.ಯು.ಸಿ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾದೃಚ್ಛಿಕರಿಸುವ ಸುತ್ತೋಲೆಯನ್ನು ಹಿಂಪಡೆಯುವಂತೆ ತಮ್ಮಲ್ಲಿ ವಿನಂತಿಸುತ್ತೇನೆ. ಎಂದು ಪತ್ರ ಬರೆದು ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿ ಅವರು ಆಗ್ರಹಿಸಿದ್ದಾರೆ.