ಜೇವರ್ಗಿ ಬಸ್ ನಿಲ್ದಾಣ ಖಾಲಿ – ಸರ್ಕಾರದ ವಿರುದ್ಧ ನೌಕರರ ಹೋರಾಟ

ಜೇವರ್ಗಿ ಬಸ್ ನಿಲ್ದಾಣ ಖಾಲಿ – ಸರ್ಕಾರದ ವಿರುದ್ಧ ನೌಕರರ ಹೋರಾಟ
ಜೇವರ್ಗಿ, ಆ.5:ಸಾರಿಗೆ ಇಲಾಖೆಯ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಅವರ ವೇತನಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂಬ ಆಗ್ರಹದೊಂದಿಗೆ 5 ಆಗಸ್ಟ್ 2025 ಮಂಗಳವಾರದಂದು ಜೇವರ್ಗಿಯಲ್ಲಿ ಸಾರಿಗೆ ನೌಕರರು ಬಂದ್‌ಗೆ ಕರೆ ನೀಡಿದರು. ಈ ಕಾರಣದಿಂದ ಜೇವರ್ಗಿಯ ಬಸ್ ತಂಗುದಾಣ ಸಂಪೂರ್ಣವಾಗಿ ಸ್ತಬ್ಧವಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬಸ್ಸು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಗುರಿಗೆ ತಲುಪಲಾಗದೆ ಪರದಾಡುತ್ತಿರುವ ದೃಶ್ಯಗಳು ಕಂಡುಬಂದವು. ನೌಕರರು ಹಲವು ತಿಂಗಳುಗಳಿಂದ ವೇತನ ಪಾವತಿಯಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಈ ಕುರಿತಾಗಿ ತಕ್ಷಣ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದುವರಿಸಲು ಸಿದ್ಧವಿರುವುದಾಗಿ ನೌಕರರು ಎಚ್ಚರಿಕೆ ನೀಡಿದರು.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ