ಗದಗ| ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟ, ಇಸ್ಪೀಟ್‌ ವಿರುದ್ಧ ಎಚ್ಚರಿಕೆ — ಪೋಲಿಸ್ ಪ್ರಕಟಣೆ

ಗದಗ| ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟ, ಇಸ್ಪೀಟ್‌ ವಿರುದ್ಧ ಎಚ್ಚರಿಕೆ — ಪೋಲಿಸ್ ಪ್ರಕಟಣೆ

ಗದಗ| ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟ, ಇಸ್ಪೀಟ್‌ ವಿರುದ್ಧ ಎಚ್ಚರಿಕೆ — ಪೋಲಿಸ್ ಪ್ರಕಟಣೆ

ನರೇಗಲ್ಲ: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ದೀಪ ಕಾಯುವ ನೆಪದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್ ಮತ್ತು ಜೂಜಾಟವನ್ನು ತಕ್ಷಣ ನಿಲ್ಲಿಸಲು ಗದಗ ಜಿಲ್ಲಾ ಪೋಲಿಸ್ ಇಲಾಖೆ ಮತ್ತು ನರೇಗಲ್ಲ ಪೋಲಿಸ್ ಠಾಣೆ ಎಚ್ಚರಿಕೆ ನೀಡಿದೆ.

ನರೇಗಲ್ಲ ಪೋಲಿಸ್ ಠಾಣೆಯ ಪಿಎಸ್ಐ ಕುಮಾರಿ ಐಶ್ವರ್ಯ ನಾಗರಾಳ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದು — “ಹಬ್ಬದ ಸಂದರ್ಭದಲ್ಲಿ ಕೆಲವರು ದೀಪ ಕಾಯುವ ನೆಪದಲ್ಲಿ ಜೂಜಾಟ, ಇಸ್ಪೀಟ್ ಮುಂತಾದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಾನೂನು ಬಾಹಿರವಾಗಿದೆ. ಇಂತಹ ಕೃತ್ಯಗಳಲ್ಲಿ ಯಾರೇ ತೊಡಗಿಸಿಕೊಂಡರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಪೋಲಿಸ್ ಇಲಾಖೆ ಸಾರ್ವಜನಿಕರಿಗೆ ಹಬ್ಬವನ್ನು ಶಾಂತಿಯುತವಾಗಿ, ಕಾನೂನಿನ ವ್ಯಾಪ್ತಿಯೊಳಗೆ ಆಚರಿಸಲು ವಿನಂತಿಸಿದೆ.

ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ