ರಟಗಲ್ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ -ವಿನೂತನ ಪ್ರತಿಭಟನೆ

ರಟಗಲ್ ಗ್ರಾಮ ಪಂಚಾಯಿತಿ ಅವ್ಯವಹಾರ ಖಂಡಿಸಿ -ವಿನೂತನ ಪ್ರತಿಭಟನೆ
ಪಿಡಿಓ ಸಂತೋಷಕುಮಾರ ತೇಲಿ, ನಾಗಣ್ಣ ಮಾಮನಿ, ಶ್ರವಣ್, ಬಸಲಿಂಗಪ್ಪ ಡಿಗ್ಗಿ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕೆಂದು ವಿನೂತವಾಗಿ ಪ್ರತಿಭಟನೆ
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯತನಲ್ಲಿ ತೆರಿಗೆ ಹಣವನ್ನು ನಿಧಿ-1ರ ಹಣವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿರುವ ಪಿಡಿಓ ಸಂತೋಷಕುಮಾರ ತೇಲಿ, ಬಿಲ್ ಕಲೆಕ್ಟರ್ ನಾಗಣ್ಣ ಮಾಮನಿ, ಶ್ರವಣ್ ಮತ್ತು ಕಾಳಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕೆಂದು ಕಲ್ಯಾಣ ಕನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯ ಎದುರುಗಡೆ ಕತೆಗಳ ಕೋರಳಿಗೆ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ಪೋಟೊ ಹಾಕಿ ವಿನೂತವಾಗಿ ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಭರಣಿ ಮಾತನಾಡಿ ಕಾಳಗಿ ತಾಲ್ಲೂಕಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಟಕಲ್ ಗ್ರಾಮ ಪಂಚಾಯತದಲ್ಲಿ ಎಪ್ರಿಲ್ ತಿಂಗಳಿoದ ಜುಲೈ ತಿಂಗಳವರೆಗೆ ಡಿಸಿಬಿ ಪ್ರಕಾರ ಆನ್‌ಲೈನ್ ಮಶಿನ್ ಮುಖಾಂತರ ವಿವಿಧ ರೀತಿಯ ತೆರಿಗೆ ಹಣವನ್ನು ಸುಮಾರು 3ರಿಂದ 4 ಲಕ್ಷ ರೂ ವರೆಗೆ ತೆರಿಗೆ ವಸೂಲಿ ಮಾಡಿರುತ್ತಾರೆ. ಅಲ್ಲದೆ ನಮೂನೆ-3 ನಿಯಮ-20, ತೆರಿಗೆ ಸಾಮಾನ್ಯ ರಸೀದಿ ಪುಸ್ತಕದ ಮುಖಾಂತರ (ಮ್ಯಾನವೆಲ್) ನಗದು ರೂಪದಲ್ಲಿ ಸಮಾರು ಅಂದಾಜು 1-2 ಲಕ್ಷ ರೂಪಾಯಿಗಳು ತೆರಿಗೆ ವಸೂಲಿ ಮಾಡಿರುತ್ತಾರೆ.
ಆನ್‌ಲೈನ ಮಶೀನ್ ಮುಖಾಂತರ 3-ರಿಂದ 4 ಲಕ್ಷ ರೂ. ತೆರಿಗೆ ವಸೂಲಿ ಮಾಡಿದ್ದು ಮತ್ತು ಸಾಮಾನ್ಯ ರಸೀದಿ ಪುಸ್ತಕದ ಮುಖಾಂತರ 1-2 ಲಕ್ಷ ರೂ. ಅಂದರೆ ಒಟ್ಟಾರೆಯಾಗಿ ಸುಮಾರು 5-6 ಲಕ್ಷ ರೂಪಾಯಿ ತೆರಿಗೆ ಹಣವನ್ನು ಸಂದಾಯವಾಗಿರುತ್ತದೆ. ಈ ತೆರಿಗೆ ಹಣವನ್ನು, ತೆರಿಗೆ ವಸೂಲಿಯಾದ 24 ಗಂಟೆಯೊಳಗೆ ಸರಕಾರದ ನಿಧಿ-1 ಬ್ಯಾಂಕ ಖಾತೆಗೆ ಜಮಾ ಮಾಡಬೇಕಾಗಿರುತ್ತದೆ.
ಕರ ವಸೂಲಿಗಾರರು ಮತ್ತು ಪಂಚಾಯತ ಅಭಿವೃಧಿ ಅಧಿಕಾರಿಗಳು ಶ್ರೀ ಸಂತೋಷ ಕುಮಾರ ತೇಲಿ ಅವರು ಸೇರಿಕೊಂಡು ನಿಧಿ-1 ಬ್ಯಾಂಕ ಖಾತೆಗೆ ಜಮಾ ಮಾಡದೆ, ಸರಕಾರದ ನಿಯಮ ಮೀರಿ ಹಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಸರಕಾರದ ತೆರಿಗೆ ಹಣವನ್ನು ಲೂಟಿ ಮಾಡಿರುತ್ತಾರೆ. ಈ ಮೇಲ್ನೋಟಕ್ಕೆ ಪಂಚಾಯತ ಅಭಿವೃದ್ಧಿ ಅಧಿಕಾರಿಯ ಅಧಿಕಾರ ದುರ್ಬಳಕೆ, ಕರ್ತವ್ಯ ಲೋಪ, ಕಾನೂನು ಉಲ್ಲಂಘನೆ, ಅಕ್ರಮವಾಗಿ ಹಣ ಲೂಟಿ ಮಾಡಿರುವುದು ಕಾಣಬರುತ್ತದೆ.
ಅಲ್ಲದೆ ಸರಕಾರದ ನಮೂನೆ-3 (ನಿಯಮ-20)ರ ತೆರಿಗೆ ಸಾಮಾನ್ಯ ರಸೀದಿ ಪುಸ್ತಕವನ್ನು ಬಂದಾಗಿರುತ್ತದೆ. ಆದರೂ ಸಹ ಸಂತೋಷಕುಮಾರ ತೇಲಿ ರವರು ಮತ್ತು ಕರವಸೂಲಿಗಾರರು ಸೇರಿಕೊಂಡು ಸರಕಾರದ ಹಣವನ್ನು ಅಕ್ರಮವಾಗಿ ಲೂಟಿ ಮಾಡಿ ಭ್ರಷ್ಟಾಚಾರ ಎಸಗಿರುತ್ತಾರೆ. ಪಿಡಿಓ ಸಂತೋಷಕುಮಾರ ತೇಲಿ ಇವರು ಸದರಿ ಭ್ರಷ್ಟಾಚಾರದ ಹಣವನ್ನು ವಾಪಸ್ ಮಾಡಲು ಹೆದರಿಕೊಂಡು ಮತ್ತು ಇದರಿಂದ ತಪ್ಪಿಸಿಕೊಳ್ಳಲು ಬೇರೆ ಕಡೆ ವರ್ಗಾವಣೆ ಕೋರಿ ಪತ್ರ ನೀಡಿರುತ್ತಾನೆ. ಕಳೆದ ಕೆಲವು ತಿಂಗಳುಗಳಿAದ ಪಂಚಾಯತ್ ಕಛೇರಿಗೆ ಕರ್ತವ್ಯಕ್ಕೆ ಬರುತ್ತಿಲ್ಲ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ದೂರವಾಣಿ ಕರೆ ಮಾಡಿದರೆ, ನಾನು ಈಗ ನಾನು ಪಂಚಾಯತ್ ಕಛೇರಿಗೆ ಬರುವುದಿಲ್ಲ ನನಗೆ ಯಾವುದೇ ಸಂಬAಧವಿರುವುದಿಲ್ಲ ಎಂದು ಉಡಾಫೆ ಮಾತನಾಡುತ್ತಿದ್ದಾನೆ. ಮತ್ತು ಇವರ ದೂರವಾಣಿ ಸಂಖ್ಯೆ ಯಾವಾಗಲೂ ಸ್ವಿಚ್ ಆಫ್ ಆಗಿರುತ್ತದೆ.
ಇದನ್ನು ವಿರೋಧಿಸಿ ತಮ್ಮ ಕಛೇರಿಗೆ ದಿನಾಂಕ: 14/08/2025ರಂದು ದೂರು ಸಲ್ಲಿಸಿರುತ್ತೇನೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದ್ದ ಕಾಳಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಇವರು ಸದರಿ ಅಕ್ರಮಕ್ಕೆ ನೇರವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ನಮ್ಮ ದೂರಿನ ಮೇಲೆ ಜಿ.ಪಂ. ಕಛೇರಿಯಿಂದ ಕಾಳಗಿ ಇ.ಓ. ಅವರಿಗೆ ಈ ಅಕ್ರಮದ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿ ಒಂದು ತಿಂಗಳು ಆದರೂ ಸಹ ಕಾಳಗಿ ಇ.ಓ. ಅವರು ಪಿಡಿಓ ಅವರನ್ನು ಬಚಾವ್ ಮಾಡುವ ಉದ್ದೇಶದಿಂದ ಯಾವುದೇ ತನಿಖೆ ನಡೆಸದೆ ತಮ್ಮ ಕರ್ತವ್ಯವನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ.
ಆದ್ದರಿAದ ಮಾನ್ಯರಾದ ತಾವುಗಳು ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಾಳಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ಪಿಡಿಓ ಸಂತೋಷಕುಮಾರ ತೇಲಿ, ಬಿಲ್ ಕಲೆಕ್ಟರ್ ನಾಗಣ್ಣ ಮಾಮನಿ ಮತ್ತು ಶ್ರವಣ್ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಸತೀಶ ಕಡೂನ, ಪಪ್ಪು ಬಿದ್ದಾಪೂರ, ವಿಶ್ವನಾಥ ಡೇಕೂನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.