"ರಾಮ ಭಕ್ತನ ಜನ್ಮದಿನ: ಚಿಂಚೋಳಿಯಿಂದ ಅಣವಾರದವರೆಗೆ ಭಕ್ತಿ ಸಂಭ್ರಮ"

ತಾಲೂಕಿನಾದ್ಯಾಂತ ಹನುಮಾನ ಜಯಂತಿ ಆಚರಣೆ

ಭಕ್ತರು ಹನುಮಂತನ ಮಂದಿರಗಳಿಗೆ ತೆರೆಳಿ ಭಕ್ತಿ ಸಮರ್ಪಿಸಿ ರಾಮ ಭಕ್ತನ ಕೃಪೆಗೆ ಪಾತ್ರರಾದರು 

ಚಿಂಚೋಳಿ :ಅವಳಿ ಪಟ್ಟಣ ಚಿಂಚೋಳಿ – ಚಂದಾಪೂರದ ಪೊಲೀಸ್ ಕಾಲೋನಿಯಲ್ಲಿ ರಾಮ ಭಕ್ತ ವೀರ ಆಂಜನೆ ಜಯಂತಿಯನ್ನು ಕಾಲೋನಿಯ ನಿವಾಸಿಗಳು ಸೇರಿದಂತೆ ತಾಲೂಕಿನಾದ್ಯಾಂತ ಸಡಗರ ಸಂಭ್ರಮದಿಂದ ಹನುಮಾನ ಜಯಂತಿ ಆಚರಿಸಿ, ಭಕ್ತಿ ಮರೆದರು.

ಹನುಮಾನ ಜಯಂತಿ ಹಿಂದುಗಳ ಆರಾಧ್ಯ ದೈವನಾಗಿದ್ದು, ಹನುಮನ ಭಕ್ತಿಗೆ ಕೃಪೆಯಾಗಿದರೆ ಯಾವುದೇ ಅಪಾಯ ಮತ್ತು ಸಂಕಟಗಳು ಎದುರಾದರು, ಎದುರಾಗುವ ಸಂಕಟಗಳನ್ನು ಮಾಯಗೊಳುತ್ತವೆಂಬ ಭರವಸೆ ನಂಬಿಕೆಗೆ ಹೆಸರು ಆಗಿರುವ ರಾಮ ಭಕ್ತ ಹನುಮಂತ. ಹೀಗಾಗಿ ಭಕ್ತರು ಬೆಳಿಗ್ಗೆ ಮನೆ ಪಡಸಾಲಿ ಅಂಗಳ ಸಾರಸಿ,ಪೂಜೆ ಕೈಂಕರ್ಯಗಳನ್ನು ಹೋಳಿಗೆ, ತುಪ್ಪದ ನೈವ್ಯದೆಯನ್ನು ಸಮರ್ಪಿಸಿ, ಜರುಗಿಸಿಕೊಂಡು ಹನುಮಂತನ ದೇವಾಲಯಗಳಿಗೆ ತೆರೆಳಿ ವಿಶೇಷ ಅಭಿಷೇಕ ಪೂಜೆಯನ್ನು ನಡೆಸಿ, ಹನುಮಾನ ಚಾಲಿಸ ಪಠಣ ಮಾಡಿ, ರಾಮ ಭಕ್ತ ಹನುಮಂತ ಕೃಪೆಗೆ ಪಾತ್ರರಾದರು. ಇನ್ನೂ ಎರಡನೇ ಶನಿವಾರ ಸರಕಾರಿ ರಜೆ ಇರುವುದರಿಂದ ಕುಟುಂಬ ಸಮೇತ ಹನುಮಂತನ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬಂದಿತು. ಅವಳಿ ಪಟ್ಟಣ ಚಂದಾಪೂರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಪಲ್ಲಕ್ಕಿ ಉತ್ಸವ, ಅನ್ನದಾಸೋಹ ಜರುಗಿದರೇ ತಾಲೂಕಿನ ಅಣವಾರ ಗ್ರಾಮದ ಮಾರುತಿ ಹನುಮಾನ ಪಲ್ಲಕ್ಕಿ ಮತ್ತು ಪುರಂತೈರಿಂದ ವೀರ ಕುಣಿತ ಹಾಗೂ ರಥೋತ್ಸವ ಜರುಗಿಸಲಾಯಿತು. ಪಟ್ಟಣದ ಹೀರೆ ಅಗಸಿ, ಬೊಮ್ಮನಳ್ಳಿ, ಇರಗಪಳ್ಳಿ, ಸುಲೇಪೇಟ ಸೇರಿದಂತೆ ತಾಲೂಕಿನಾದ್ಯಾಂತ ಹನುಮಾನ ಜಯಂತಿ ಪ್ರಯುಕ್ತ ಅನ್ನದಾಸೋಹ, ಭಜನೆ ಕಾರ್ಯಕ್ರಮಗಳ ಮೂಲಕ ಸಡಗರ ಸಂಭ್ರಮದಿಂದ ರಾಮ ಭಕ್ತನ ಜನ್ಮದಿನ ಆಚರಣೆ ಜರುಗಿತ್ತು.