ಸಮೀಕ್ಷೆಗೆ ಒಳಪಡಿಸಿಕೊಳ್ಳಲು ಪೌರಾಯುಕ್ತರ ಮನವಿ

ಸಮೀಕ್ಷೆಗೆ ಒಳಪಡಿಸಿಕೊಳ್ಳಲು ಪೌರಾಯುಕ್ತರ ಮನವಿ

ಸಮೀಕ್ಷೆಗೆ ಒಳಪಡಿಸಿಕೊಳ್ಳಲು ಪೌರಾಯುಕ್ತರ ಮನವಿ

ನಾಗರಾಜ್ ದಂಡಾವತಿ ವರದಿ ಶಹಾಬಾದ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಜಿಲ್ಲಾದಾಧ್ಯಂತ ದಿನಾಂಕ: 22-09-2025 ರಿಂದ ಕೈಗೊಂಡಿದ್ದು, ದಿನಾಂಕ:18-10-2025ರಂದು ಮುಕ್ತಾಯ ಗೊಳ್ಳಲಿದೆ ಎಂದು ನಗರ ಸಭೆ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ ತಿಳಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ನಗರದ ಯಾವುದಾದರೂ ಕುಟುಂಬ ಅಥವಾ ಕುಟುಂಬದ ಸದಸ್ಯರು ಬಿಟ್ಟುಹೋಗಿದ್ದಲ್ಲಿ ಸದರಿ ಕುಟುಂಬದ ಸದಸ್ಯರು ಹತ್ತಿರದ ನಗರ ಸಭೆ, ತಾಲ್ಲೂಕು ಪಂಚಾಯತ, ಅಥವಾ ತಹಶೀಲ್ದಾರರ ಕಛೇರಿಗೆ ಮಾಹಿತಿ ನೀಡಿ ಈ ಉದ್ದೇಶಕ್ಕಾಗಿಯೆ ಸದರಿ ಕಛೇರಿಗಳಲ್ಲಿ ನಿಯೋಜಿಸಲಾದ ಗಣತಿದಾರರಲ್ಲಿ ಸಮೀಕ್ಷೆಗೆ ಒಳಪಡಿಸಿಕೊಳ್ಳಲು ಕೋರಿದೆ.

ಸಮೀಕ್ಷೆ ಸಮಯದಲ್ಲಿ ಸಮೀಕ್ಷೆಗೆ ಒಳಗೊಳ್ಳುವುವರ ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿ (ಲಭ್ಯವಿದ್ದಲ್ಲಿ) ಹಾಗೂ 06 ವರ್ಷದ ಕೆಳಗಿನ ಮಕ್ಕಳಿದ್ದಲ್ಲಿ ಜನ್ಮ ದಿನಾಂಕ ಅಥವಾ ಜನನ ಪ್ರಮಾಣ ಪತ್ರ ದಾಖಲೆಗಳೊಂದಿಗೆ ಸಮೀಕ್ಷೆಗೆ ಒಳಗಾಗಲು ನಗರದ ಎಲ್ಲಾ ಸಾರ್ವಜನಿಕರಲ್ಲಿ ನಗರ ಸಭೆಯ ಪೌರಾಯುಕ್ತರಾದ ಡಾ. ಕೆ. ಗುರುಲಿಂಗಪ್ಪ ನವರು ಮನವಿ ಮಾಡಿದ್ದಾರೆ.