ಬಸವ ಜಯಂತಿಯ ಪ್ರಯುಕ್ತ ಕಲಬುರಗಿಯಲ್ಲಿ ಮಹಿಳಾ ಬೈಕ್ ರ್ಯಾಲಿ

ಬಸವ ಜಯಂತಿಯ ಪ್ರಯುಕ್ತ ಕಲಬುರಗಿಯಲ್ಲಿ ಮಹಿಳಾ ಬೈಕ್ ರ್ಯಾಲಿ

ಬಸವ ಜಯಂತಿಯ ಪ್ರಯುಕ್ತ ಕಲಬುರಗಿಯಲ್ಲಿ ಮಹಿಳಾ ಬೈಕ್ ರ್ಯಾಲಿ 

ಕಲಬುರಗಿ, ಏಪ್ರಿಲ್ 27:  ವಿಶ್ವಗುರು ಬಸವಣ್ಣನವರ 892ನೇ ಜಯಂತ್ಯೋತ್ಸವದ ಅಂಗವಾಗಿ, ಕಲಬುರಗಿ ನಗರದಲ್ಲಿ ಏಪ್ರಿಲ್ 29 ರಂದು ಮಹಿಳಾ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮುಖಂಡರಾದ ಮಾಲಾ ಕಣ್ಣಿ ಮತ್ತು ಜ್ಯೋತಿ ಮರಗೋಳ ತಿಳಿಸಿದ್ದಾರೆ.

ರ್ಯಾಲಿ ಏಪ್ರಿಲ್ 29ರಂದು ಸಂಜೆ 4:30ಕ್ಕೆ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಲಿದ್ದು, ಸೂಪರ್ ಮಾರ್ಕೆಟ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಹಾದು, ಪುನಃ ದೇವಸ್ಥಾನ ಆವರಣದಲ್ಲಿ ಮುಕ್ತಾಯವಾಗಲಿದೆ ಎಂದು ಅವರು ತಿಳಿಸಿದರು.

"ಬಸವ ತತ್ವಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಗಿಸಲು ಹಾಗೂ ಅಣ್ಣ ಬಸವಣ್ಣನವರ ಮಹಿಳಾ ಸಬಲೀಕರಣಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ವಿಶಾಲವಾಗಿ ಪ್ರಸಾರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ" ಎಂದು ಮಾಲಾ ಕಣ್ಣಿ ಹಾಗೂ ಜ್ಯೋತಿ ಮರಗೋಳ ಹೇಳಿದರು.

ಈ ಬೈಕ್ ರ್ಯಾಲಿಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  

ಮಾಲಾ ಕಣ್ಣಿ: 97412 99995  

ಜ್ಯೋತಿ ಮರಗೋಳ್:99025 57213