ನಗರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ - ಸಿದ್ದಣ್ಣ ಆರಬೋಳ .

ನಗರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ - ಸಿದ್ದಣ್ಣ ಆರಬೋಳ .

ನಗರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ - ಸಿದ್ದಣ್ಣ ಆರಬೋಳ . 

 ಶಹಾಪೂರ : ನಗರ ಅಭಿವೃದ್ಧಿಗಾಗಿ ಹಗಲಿರುಳು ಹಾಗೂ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಣ್ಣ ಸಾಹು ಆರಬೋಳ ಹೇಳಿದರು.

ನಗರದ ಹೊರವಲಯದಲ್ಲಿರುವ ಸುಬೇದಾರ್ ಫಾರ್ಮ ಹೌಸಿನಲ್ಲಿ ಏರ್ಪಡಿಸಿರುವ ಸುಬೇದಾರ ಕುಟುಂಬ ಹಾಗೂ ಸಗರ ಗ್ರಾಮದ ಹಿತೈಷಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಇವರ ಆಶೀರ್ವಾದದಿಂದ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ,ನನಗೆ ಅಧಿಕಾರ ಅಂತಸ್ತು ಶಾಶ್ವತವಲ್ಲ,ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು,ತಾವು ನಮ್ಮ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಈ ಸಂದರ್ಭದಲ್ಲಿ ನುಡಿದರು.

ಹಿರಿಯ ಸಾಹಿತ್ಯ ಲಿಂಗಣ್ಣ ಪಡಶೆಟ್ಟಿ ಮಾತನಾಡಿ ತಮ್ಮ ಯುವ ಸಮೂಹ ಕಟ್ಟಿಕೊಂಡು,ಪಕ್ಷ ಸಂಘಟನೆ ಮಾಡಿದ್ದಾರೆ,ಇವರ ಪ್ರಾಮಾಣಿಕ ಸೇವೆಗೆ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು ನಮ್ಮೆಲ್ಲರಿಗೂ ಇಂದು ಸಂತೋಷವನ್ನುಂಟು ಮಾಡಿದೆ ಎಂದು ಆ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಮುಖ್ಯ ಅತಿಥಿಗಳಾದ ಚಂದಪ್ಪ ತಾಯಮ್ಮಗೋಳ್ ಮಾತನಾಡಿ, ಹಲವು ಅವಕಾಶಗಳ ಜೊತೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವು ಜನರ ಸೇವೆಗೆ ದೊರೆತ ಅವಕಾಶ ಇದಾಗಿದೆ,ಮತ್ತಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮುಂದಿನ ದಿನಗಳಲ್ಲಿ ಇವರ ನಾವು ನೀವೆಲ್ಲರೂ ಕೂಡಿಕೊಂಡು ಕೈ ಬಲಪಡಿಸಬೇಕೆಂದು ಹೇಳಿದರು.

ಈ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸನಗೌಡ ಮಾಲಿ ಪಾಟೀಲ್,ಖ್ಯಾತ ವೈದ್ಯರಾದ ಡಾ,ಚಂದ್ರಶೇಖರ್ ಸುಬೇದಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗನಗೌಡ ಸುಬೇದಾರ್,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂತೋಷಗೌಡ ಸುಬೇದಾರ್,ಹಿರಿಯರಾದ ಚಂದ್ರಶೇಖರ್ ಸಾಹು ಆರಬೋಳ, ಬಸವರಾಜಪ್ಪಗೌಡ ತಂಗಡಗಿ ಗೋಗಿ,ಮೋಹನ್ ರೆಡ್ಡಿ,ರವಿ ಪತ್ತಾರ,ಚೆನ್ನಯ್ಯಸ್ವಾಮಿ ಹಿರೇಮಠ್,ಬಸವರಾಜ ಅರುಣಿ, ಅಡಿವಪ್ಪ ಜಾಕಾ,ಶರಣಪ್ಪ ಮುಂಡಾಸ್,ಬಸವರಾಜಪ್ಪಗೌಡ ವಿಭೂತಿಹಳ್ಳಿ,ಮಾನಪ್ಪ ವಠಾರ, ಸೇರಿದಂತೆ ಹಲವಾರು ಜನ ಹಾಜರಿದ್ದರು.ಶಿವಶರಣಪ್ಪ ನಾಗಲೋಟ ನಿರೂಪಿಸಿ ವಂದಿಸಿದರು.