ಅಗಸ್ಟ್ ೧೧ ರಂದು ಸೋಲಾಪುರದಲ್ಲಿ ಗಡಿನಾಡು ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಉತ್ಸವ

ಅಗಸ್ಟ್ ೧೧ ರಂದು ಸೋಲಾಪುರದಲ್ಲಿ  ಗಡಿನಾಡು ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಉತ್ಸವ

ಅಗಷ್ಟ 11 ರಂದು ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಉತ್ಸವ

 ೧೦ ನೇ, ಆಗಸ್ಟ್ ,೨೦೨೪

ಸೊಲ್ಲಾಪುರ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ ಮಹಾರಾಷ್ಟ ಹಾಗೂ ಸೊಲ್ಲಾಪುರ ಜಿಲ್ಲೆಯ ಕನ್ನಡಪರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ಅಗಷ್ಟ ೧೧ ರಂದು ಸೊಲ್ಲಾಪುರದಲ್ಲಿ ಆಯೋಜಿಸಲಾಗಿದೆ ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ ತಿಳಿಸಿದರು.

ನಗರದ ಸತ್ಯವಿಜಯ ಸಭಾಭವನದಲ್ಲಿ ಅಗಷ್ಟ ೧೧ ರಂದು ‘ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೯.೩೦ ಗಂಟೆಗೆ ವಿವಿಧ ಕಲಾ ತಂಡಗಳೊAದಿಗೆ ಭುವನೇಶ್ವರಿ ದೇವಿ ಮೇರವಣಿಗೆ ಅದ್ದೂರಿಯಾಗಿ ನಡೆಯಲಿದ್ದು, ಬಸವಾರೂಢ ಮಠದ ಪೂಜ್ಯ ಶಿವಪುತ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ಮಾಜಿ ನಗರಸೇವಕ ರಮೇಶ ನಾರಾಯಣದಾಸ ರಾಠಿಯವರ ಅಧ್ಯಕ್ಷತೆಯಲ್ಲಿ ರೇವಣಸಿದ್ಧ ಶಿವಶರಣ ಸೇವಾಸಂಘದ ಅಧ್ಯಕ್ಷ ಪರಮೇಶ್ವರ ಕಂಚೆ ಮೆರವಣಿಗೆ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ನಾಗಣಸೂರ ವಿರಕ್ತಮಠದ ಪೂಜ್ಯ ಡಾ|| ಅಭಿನವ ಬಸವಲಿಂಗ ಮಹಾಸ್ವಾಮಿಜಿ ಮತ್ತು ಸಸ್ತಾಪೂರ ಶಾಖಾಮಠದ ಪೂಜ್ಯ ಡಾ. ಈಶ್ವರಾನಂದ ಮಹಾಸ್ವಾಮಿಜಿಗಳ ಸಾನಿಧ್ಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ಸಂಸದೆ ಪ್ರಣಿತಿ ಶಿಂಧೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಾಸಕ ಸಚಿನ ಕಲ್ಯಾಣಶೆಟ್ಟಿ ಗಡಿನಾಡು ಪ್ರಶಸ್ತಿ ಪ್ರದಾನ ಮಾಡಲಿದ್ದು, ಶಾಸಕ ವಿಜಯಕುಮಾರ ದೇಶಮುಖ ಸ್ಮರಣ ಸಂಚಿಕೆ ಬಿಡುಗಡೆ ಗೋಳಿಸುವರು. ಶಾಸಕ ಸುಭಾಷ ದೇಶಮುಖ ಜ್ಯೋತಿ ಬೆಳಗಿಸಲಿದ್ದು, ಮಾಜಿ ಸಚಿವ ಸಿದ್ಧರಾಮ ಮ್ಹೇತ್ರೆ ಅವರು ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಪ್ರಾಸ್ತವಿಕ ನುಡಿಗಳನ್ನಾಡುವರು.

ಮಧ್ಯಾಹ್ನ ೧೨ ಗಂಟೆಗೆ ಗಡಿನಾಡು ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಅಕ್ಕಲಕೋಟ ವಿರಕ್ತಮಠದ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ಧಾರಾಮ ಹೊನ್ಕಲ್ ಅವರ ಅಧ್ಯಕ್ಷತೆಯಲ್ಲಿ ‘ಮಹಾರಾಷ್ಟçದ ಅಭಿವೃದ್ಧಿಯಲ್ಲಿ ಕನ್ನಡ-ಕನ್ನಡಿಗರ ಪಾತ್ರ’ ಕುರಿತು ಕಲಬುರಗಿಯ ಸಾಹಿತಿ ಡಾ|| ಶ್ರೀಶೈಲ ನಾಗರಾಳ, ‘ಕನ್ನಡ-ಮರಾಠಿ ಸಾಹಿತ್ಯ-ಸಂಸ್ಕೃತಿ ಸಾಮರಸ್ಯ’ ಕುರಿತು ಬಿದರ ಜಿಲ್ಲೆಯ ಸಾಹಿತಿ ಡಾ|| ಗವಿಸಿದ್ದಪ್ಪ ಪಾಟೀಲ ಹಾಗೂ ‘ಗಡಿಯಾಚೆಗಿನ ಶರಣ ಸಂಪ್ರದಾಯ’ ಕುರಿತು ಯುವ ಸಾಹಿತಿ ಡಾ. ರಾಜಕುಮಾರ ಹಿರೇಮಠ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ ೨ ಗಂಟೆಗೆ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು ತದನಂತರ ೩.೩೦ ಗಂಟೆಗೆ ಸಂವಾದ – ಮಹಾರಾಷ್ಟçದ ಗಡಿ ಕನ್ನಡಿಗರ ಸ್ಥಿತಿಗತಿ ಸೇರಿದಂತೆ ಒಟ್ಟು ೩ ಗೋಷ್ಠಿಗಳು ನಡೆಯಲಿದ್ದು, ಅಗಷ್ಟ ೧೧ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ತೋಳನೂರ ಗಂಗಾಧರ ಸ್ವಾಮಿ ಮಠದ ಪೂಜ್ಯ ಚೆನ್ನಮಲ್ಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮುಗಳಿ ಬಸವಮಂಟಪದ ಪೂಜ್ಯ ಮಹಾನಂದಾತಾಯಿ ಹಿರೇಮಠ ಸಮಾರೋಪ ನುಡಿಗಳನ್ನಾಡುವರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಮಹಾರಾಷ್ಟç ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಆದರ್ಶ ಕನ್ನಡ ಬಳಗದ ಉಪಾಧ್ಯಕ್ಷ ರಾಜಶೇಖರ ಉಮರಾಣಿಕರ, ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ವಿದ್ಯಾಧರ ಗುರವ, ಗಿರೀಶ ಜಕಾಪುರೆ ಸೇರಿದಂತೆ ಮೊದಲಾದವರು ಇದ್ದರು.

[ಸಮಾರಂಭದಲ್ಲಿ ಪಾಲ್ಗೋಳ್ಳಲಿರುವ ಪ್ರಮುಖ ಅತಿಥಿಗಳು : ಸಿದ್ಧರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ, ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಯುವ ನಾಯಕಿ ಶೀತಲ ಮೇತ್ರೆ, ಜಿಲ್ಲಾ ಪಂ ಮಾಜಿ ಕೃಷಿ ಸಭಾಪತಿ ಮಲ್ಲಿಕಾರ್ಜುನ ಪಾಟೀಲ, ಜಿಲ್ಲಾ ಪಂ. ಮಾಜಿ ವಿಪಕ್ಷ ನಾಯಕ ಆನಂದ ತಾನವಡೆ, ಉದ್ಯಮಿ ಮಹಾದೇವ ಕೋಗನೂರೆ, ಅಶ್ವಿನಿ ಆಸ್ಪತ್ರೆಯ ಮುಖ್ಯಸ್ಥ ಕಿರಣ ಜಾಮಗೊಂಡ, ಶಿವಸೇನಾ ನಾಯಕ ಅಮರ ಪಾಟೀಲ, ಬಿಜೆಪಿಯ ಉದಯ ಪಾಟೀಲ, ಮಾಜಿ ನಗರಸೇವಕ ಗುರುಶಾಂತ ದೂತ್ತೂರಗಾಂವಕರ, ಈರಪ್ಪ ಸಾಲಕ್ಕಿ ಮಹಾಂತೇಶ ಕವಲಗಿ, ಸಿದ್ಧೇಶ್ವರ ಜೋಕಾರೆ, ಶರಣಬಸಪ್ಪ ಖೇಡಗಿ, ಕಿರಣ ಪೂಜಾರಿ ಸೇರಿದಂತೆ ಇನ್ನಿತರರು ಪಾಲ್ಗೋಳ್ಳಲಿದ್ದಾರೆ.]

[ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ ಮಹಾರಾಷ್ಟ ಹಾಗೂ ಸೊಲ್ಲಾಪುರ ಜಿಲ್ಲೆಯ ಕನ್ನಡಪರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ಅಗಷ್ಟ ೧೧ ರಂದು ಸೊಲ್ಲಾಪುರದಲ್ಲಿ ಆಯೋಜಿಸಲಾಗಿದ್ದು, ಉತ್ಸವದಲ್ಲಿ ಗಡಿಭಾಗದ ಕನ್ನಡ ಸಂಘ-ಸಂಸ್ಥೆಗಳು, ಕನ್ನಡ ಹೋರಾಟಗಾರರು, ಸಾಹಿತಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತರಬೇಕು. -ಸೋಮಶೇಖರ ಜಮಶೆಟ್ಟಿ, ಅಧ್ಯಕ್ಷರು, ಕಸಾಪ ಮಹಾರಾಷ್ಟ ಗಡಿನಾಡು ಘಟಕ.]