ದೂರದರ್ಶನ ಕಲಬುರ್ಗಿಯಲ್ಲಿ ಉಳಿಸಲು ಪ್ರಯತ್ನಿಸುವೆ: ಖರ್ಗೆ

ದೂರದರ್ಶನ ಕಲಬುರ್ಗಿಯಲ್ಲಿ ಉಳಿಸಲು ಪ್ರಯತ್ನಿಸುವೆ: ಖರ್ಗೆ

ದೂರದರ್ಶನ ಕಲಬುರ್ಗಿಯಲ್ಲಿ ಉಳಿಸಲು ಪ್ರಯತ್ನಿಸುವೆ: ಖರ್ಗೆ

ಕಲಬುರಗಿ: ಕಳೆದ ಐದು ದಶಕಗಳಿಂದ ಜನತೆಗೆ ನಿಷ್ಠೆಯ ಸೇವೆ ಸಲ್ಲಿಸುತ್ತಿರುವ ಕಲಬುರಗಿ ದೂರದರ್ಶನ ಕೇಂದ್ರ (ಡಿಡಿ1)ವನ್ನು ಯಾವುದೇ ಕಾರಣಕ್ಕೂ ಬಂದ್ ಮಾಡದಂತೆ ನೋಡಿಕೊಳ್ಳಲು ಹಾಗೂ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಪುನರುತ್ಥಾನ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕಲಬುರಗಿ ಘಟಕದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಅವರ ನೇತೃತ್ವದ ನಿಯೋಗವು ಇತ್ತೀಚೆಗೆ ನಗರದ ಐವನ್-ಇ-ಶಾಹಿಯಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿ, ಕಲಬುರಗಿಯ ದೂರದರ್ಶನ ಕೇಂದ್ರವನ್ನು ಉಳಿಸಲು ಮನವಿ ಪತ್ರ ಸಲ್ಲಿಸಿತು.

ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಖರ್ಗೆಯವರು, “ದೂರದರ್ಶನ ಕಲಬುರಗಿಯ ಹೆಮ್ಮೆ, ಇದನ್ನು ಉಳಿಸಲು ನಾನು ಬದ್ದನಾಗಿದ್ದೇನೆ. ಕೇಂದ್ರ ಮಟ್ಟದಲ್ಲಿ ನನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಮಾಡುವೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಏ.ಕೆ. ರಾಮೇಶ್ವರ, ಹಿರಿಯ ಸಾಹಿತಿ ಭೀಮಣ್ಣ ಬೋನಾಳ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ಸೋಮಶೇಖರ ನಂದಿದ್ವಜ, ವೀರಣ್ಣ ಇಂಡಿ, ಭಾನುಕುಮಾರ ಗಿರೇಗೋಳ, ಡಾ. ಹಣಮಂತ್ರಾಯ ರಾಂಪುರೆ ಸೇರಿದಂತೆ ಅನೇಕರು ಹಾಜರಿದ್ದರು

.

---