ಸಮೀಕ್ಷಾ ಸಿಬ್ಬಂದಿಗೆ ಕಿರಿಕಿರಿ: ಶಶೀಲ್ ಜಿ. ನಮೋಶಿ ನೇತೃತ್ವದಲ್ಲಿ ಮಿಂಚಿನ ಪ್ರತಿಭಟನೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ತೊಡಗಿರುವ ಸಿಬ್ಬಂದಿಗಳಿಗೆ ವಿನಾಕಾರಣ ತೊಂದರೆ
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ನೇತೃತ್ವದಲ್ಲಿ ಮಿಂಚಿನ ಪ್ರತಿಭಟನೆ
ಕಲಬುರ್ಗಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಸಿಬ್ಬಂದಿಗಳು ತಮಗೆ ವಹಿಸಿರುವ ಕೆಲಸ ಮುಗಿಸಿದ್ದರೂ ಅವರಿಗೆ ನಿಯಮ 12 ರಡಿ ನೋಟಿಸ್ ಜಾರಿ ಮಾಡಿ ತೊಂದರೆ ಕೊಡುತ್ತಿರುವ ಬಗ್ಗೆ ಸರಕಾರಿ ನೌಕರರ ಸಂಘದ ಮಿಂಚಿನ ಪ್ರತಿಭಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಬೆಂಬಲ ಹಾಗೂ ಪ್ರತಿಭಟನೆಯಲ್ಲಿ ಭಾಗಿ ಕಲಬುರಗಿ ಜಿಲ್ಲೆಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾರಿಯಲ್ಲಿದ್ದು, ಶಿಕ್ಷಕರು/ನೌಕರರು ತಮ್ಮ ರಜಾ ದಿನಗಳಂದು ಕೂಡ ನಿರಂತರವಾಗಿ ಸರಕಾರದ ಮತ್ತು ಇಲಾಖೆಯ ನಿರ್ದೇಶನದಂತೆ ತಮಗೆ ವಹಿಸಿರುವ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಈಗಾಗಲೆ ಜಿಲ್ಲೆಯಲ್ಲಿ ನಿಗದಿಪಡಿಸಿದ ಯು.ಹೆಚ್.ಐ.ಡಿ. ಪ್ರತೀಶತಕ್ಕಿಂತ ಹೆಚ್ಚು ಪ್ರಮಾಣದ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ಆದಾಗ್ಯೂ ಜನಸಂಖ್ಯೆವಾರು ಕೊರತೆಯಾಗಿರುವುದರಿಂದ ಇನ್ನುಳಿದ ಮನೆಗಳ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ ಅಧಿಕಾರಳು ಬಾಕಿ ಉಳಿದಿರುವ ಮನೆಗಳ ವಿವರ & ವಿಳಾಸ ನೀಡದೇ ಸಮೀಕ್ಷಾ ಕಾರ್ಯ ಕೈಗೊಳ್ಳಿ ಎಂದು ಒತ್ತಾಯಿಸುತ್ತಿದ್ದು, ಸಮೀಕ್ಷೆದಾರರು ಎಲ್ಲಿ ಹೋಗಿ ಸಮೀಕ್ಷೆ ಮಾಡಬೇಕೆಂದು ತಿಳಿಯದೇ ಗೊಂದಲದಲ್ಲಿದ್ದಾರೆ. ಈ ಮಧ್ಯ ಮೇಲಿನ ಉಲ್ಲೇಖದನ್ವಯ ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ರವರು ನಗರದಲ್ಲಿ ಸಮೀಕ್ಷೆ ಕೈಗೊಳ್ಳುತ್ತಿರುವ 541 ಸಿಬ್ಬಂದಿಯವರಿಗೆ ನಿಯಮ 12 ರಡಿ ನೋಟಿಸ್ ಜಾರಿಮಾಡಿರುತ್ತಾರೆ.
ಶಿಕ್ಷಕ/ಸಿಬ್ಬಂದಿಗಳು ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದರೂ ಅವರಿಗೆ ವಿನಾಕಾರಣ ಕೆಲವು ಮೇಲಾಧಿಕಾರಿಗಳು ನೋಟೀಸ್ ನೀಡುವುದಾಗಿ ಅಮಾನತ್ತು ಮಾಡುವುದಾಗಿ ಹೆದರಿಸುತ್ತಿರುವುದರಿಂದ ಸಿಬ್ಬಂದಿಗಳು ಮಾನಸಿಕ ಒತ್ತಡಕ್ಕೊಳಗಾಗಿ ಅಪಘಾತಕ್ಕೀಡಾಗಿ/ಅನಾರೋಗ್ಯದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಹಿಸಿದ ಕೆಲಸ ನಿರ್ವಹಿಸದರೂ ಸಿಬ್ಬಂದಿಯವರಿಗೆ ಹೆದರಿಸಿ, ಪ್ರಸ್ತುತ 541 ಶಿಕ್ಷಕರಿಗೆ ನೋಟಿಸ್ ಜಾರಿಮಾಡಿರುವುದು ನೌಕರರ ತಾಳ್ಮೆ ಕಳೆದುಕೊಳ್ಳುವ ಸ್ಥಿತಿ ತಂದೊಡ್ಡಿದೆ. ಪ್ರಯುಕ್ತ ಜಾರಿಮಾಡಿರುವ ನೋಟಿಸ್ ಹಿಂಪಡೆದು, ಹಂಚಿಕೆ ಮಾಡಿರುವ ಪ್ರದೇಶದಲ್ಲಿ ಬಾಕಿ ಉಳಿದಿರುವ ಮನೆಗಳ ಸ್ಪಷ್ಟ ವಿಳಾಸ ಒದಗಿಸಿದಲ್ಲಿ ಸಮೀಕ್ಷೆದಾರರು ಸಮೀಕ್ಷೆ ಮಾಡಲು ಸಿದ್ದರಿದ್ದಾರೆ. ಇಲ್ಲವಾದಲ್ಲಿ ಎಲ್ಲಾ ಸಿಬ್ಬಂದಿಯವರು ದಿನಾಂಕ:17.10.2025 ರಿಂದ ಸಮೀಕ್ಷೆ ಕಾರ್ಯ ಸ್ಥಗಿತಗೊಳಿಸಿ, ತಮ್ಮ ಕಛೇರಿಯ ಎದರು ಬಂದು ಕುಳಿತು, ತಾವು ನೀಡುವ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದರಿದ್ದೇವೆ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ತರುತ್ತಾ, ಇದರಿಂದ ಯಾವುದೇ ಶಿಕ್ಷಕ/ಸಿಬ್ಬಂದಿಗಳಿಗೆ ತೊಂದರೆಯಾದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತಿದ್ದೇವೆ ಎಂದು ಮನವಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹಾಗೂ ಕಲಬುರ್ಗಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಅವರ ನೇತೃತ್ವದಲ್ಲಿ ನೂರಾರು ಶಿಕ್ಷಕರ ಜೋತೆಗೂಡಿ ಮನವಿ ಸಲ್ಲಿಸಿದರು.