ಆಂದೋಲಾ ಶ್ರೀಗಳಿಗೆ , ಶ್ರೀ ಚಂದು ಪಾಟೀಲ ಅವರಿಗೆ ಸೂಕ್ತ ಪೊಲೀಸ ಭದ್ರತೆ ಸರ್ಕಾರ ನೀಡಬೇಕೆಂದು ದಯಾನಂದ ಪಾಟೀಲ ಅಗ್ರಹ
ಆಂದೋಲಾ ಶ್ರೀಗಳಿಗೆ , ಶ್ರೀ ಚಂದು ಪಾಟೀಲ ಅವರಿಗೆ ಸೂಕ್ತ ಪೊಲೀಸ ಭದ್ರತೆ ಸರ್ಕಾರ ನೀಡಬೇಕೆಂದು ದಯಾನಂದ ಪಾಟೀಲ ಅಗ್ರಹ
ಕಲಬುರಗಿ : ಗುತ್ತಿಗೆದಾರರಾದ ಸಚೀನ್ ಪಾಂಚಾಳ, ಅವರು ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವರ ಡೆತ್ ನೋಟನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರಾದ ಆಂದೋಲಾ ಶ್ರೀಗಳಿಗೆ ಮತ್ತು ಶ್ರೀ ಚಂದು ಪಾಟೀಲರವರ ಕೊಲೆಗೆ ಸಂಚು ರೂಪಿಸಿದ್ದಾರೆಂದು ಬರೆದಿದ್ದಾರೆ, ಆದಕಾರಣ ಅವರಿಗೆ ಸೂಕ್ತ ಪೊಲೀಸ ಭದ್ರತೆ ಸರ್ಕಾರ ನೀಡಬೇಕೆಂದು ದಯಾನಂದ.ಎಂ.ಪಾಟೀಲ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಗುತ್ತಿಗೆದಾರರಾದ ಸಚೀನ್ ಪಾಂಚಾಳ, ಅವರು ಆತ್ಮ ಹತ್ಯೆ ಮಾಡಿಕೊಂಡಿದ್ದು, ಅವರ ಡೆತ್ ನೋಟನಲ್ಲಿ ಆಂದೋಲಾ ಶ್ರೀಗಳಿಗೆ ಹಾಗೂ ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡರಾದ ಚಂದು ಪಾಟೀಲ ಅವರ ಹತ್ಯೆಗೆ ಸಂಚು ರೂಪಿಸಿರುತ್ತಾರೆ ಎಂದು ಮೃತ ದುರ್ದೈವಿ ಸಾವಿನ ಮುಂಚೆ ಡೆತನೋಟಿನಲ್ಲಿ ಉಲ್ಲೇಖಿಸಿರುತ್ತಾನೆ. ಅದ್ದರಿಂದ ಅವರಿಗೆ ಸರ್ಕಾರ ಪೊಲೀಸ ಭದ್ರತೆ ನೀಡಬೇಕೆಂದು ಹೇಳಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಹಾಗೂ ಚಿತ್ತಾಪೂರ ಮತಕ್ಷೇತ್ರದ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಶ್ರೀ ಮಣಿಕಂಠ ರಾಠೋಡ ಅವರ ಹೆಸರು ಕೂಡಾ ಅದರಲ್ಲಿರುವದರಿಂದ ಅವರಿಗೂ ಸರ್ಕಾರ ಸೂಕ್ತ ಭದ್ರತೆ ನೀಡಬೇಕೆಂದರು.
ಸಚಿನ್ ಪ್ರಕರಣವನ್ನು ಸರ್ಕಾರ ಸೂಕ್ತ ತನಿಖೆ ಮಾಡಿ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನ್ಯಾಯ ನೀಡಬೇಕು ಜೊತೆಗೆ ಅವರ ಕುಟುಂಬಸ್ಥರಿಗೆ ಒಂದು ಕೋಟಿ ರೂಪಾಯಿ ಪರಿಹಾರವಾಗಿ ನೀಡಬೇಕೆಂದು.ಸಚಿನ ಸಾವಿರ ಪ್ರಕರಣ ಸಿ.ಬಿ.ಐ. ವಹಿಸಬೇಕೆಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದರು .ಆನಂದ ಕಣಸೂರ,ಪ್ರಜ್ವಲ್ ಕೊರಳ್ಳಿ,ಆಕಾಶ ಕುಲಕರ್ಣಿ ಅವರು ಗೋಷ್ಠಿಯಲ್ಲಿ ಇದ್ದರು.