ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಿ : ಪ್ರಭು ಚವ್ಹಾಣ
ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಪ್ರಭು ಚವ್ಹಾಣ ಭೇಟಿ
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಿ : ಪ್ರಭು ಚವ್ಹಾಣ
ಕಮಲನಗರ:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ.ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಹೊರಂಡಿ ಗ್ರಾಮದ ಹೊರವಲಯದ ವ್ಯಾಪ್ತಿಯಲ್ಲಿ ಕ್ರೆöÊಸ್ ನಿಂದ ನಿರ್ಮಾಣಗೊಳ್ಳುತ್ತಿರುವ ೧೫ ಕೋಟಿ ರೂ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ನ.೧೬ ರಂದು ದಿಢೀರ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ವಸತಿ ನಿಲಯ ಮೊದಲು ಹೊಳಸಮುದ್ರದ ಗ್ರಾಮದ ಬಾಡಿಗೆಯೊಂದರಲ್ಲಿ ನಡೆಯುತ್ತಿತ್ತು. ಅದನಂತರ ಮೂಲಭೂತ ಸೌಕರ್ಯದಿಂದ ವಂಚಿತಗೊAಡು ಇದು ಬೇರೆಡೆ ವರ್ಗಾವಣೆಗೊಳ್ಳುವ ಸಂಚು ನಡೆದಿತ್ತು. ಸತತ ಪ್ರಯತ್ನದಿಂದ ಪುನ: ವಸತಿ ಶಾಲೆ ಕಮಲನಗರಕ್ಕೆ ತಂದು ಸದ್ಯ ಬಾಡಿಗೆಯಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರ ಇದ್ದಾಗ ಪ್ರತಿಫಲದಿಂದ ಮಂಜೂರು ಗೊಳಿಸಿದ ೮ ಎಕರೆ ಪ್ರದೇಶದಲ್ಲಿ ಬಡವರ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲಿ ಎಂದು ಬೃಹತ ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ಮಂಜೂರುಗೊಳಿಸಲಾಗಿದೆ.
ಸಾರ್ವಜನಿಕರು ವಸತಿ ನಿಲಯ ಕಾಮಗಾರಿ ಸರಿಯಾಗಿ ಕ್ಯೂರಿಂಗ್ ಆಗುತ್ತಿಲ್ಲ ಎಂದು ದೂರಿನ ಮೇರೆಗೆ ಧೀಡೀರ ಭೇಟಿ ನೀಡಿದ್ದೇನೆ. ಬಾಲಕರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ, ಅಡುಗೆ ಕೋಣೆ, ಡೈನಿಂಗ್ ಹಾಲ್, ಕ್ಲಾಸ್ ರೂಮ್ ಮತ್ತು ಶಿಕ್ಷಕರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಇಇ ಮತ್ತು ಜೆಇ ತಮ್ಮಣ್ಣ ಅವರಿಂದ ಎಸ್ಟಿಮೇಟ್ ಪರಿಶೀಲನೆ ನಡೆಸಿದರು.
ಎಸ್ಟಿಮೇಟ್ ಸಿಬ್ಬಂದಿಗೆ ಅನುಕೂಲಕರವಾಗಿಲ್ಲ. ಎಸ್ಟಿಮೇಟ್ ಮಾಡುವಾಗ ಏನಾದರೂ ತೊಂದರೆಗಳು ಇದ್ದರೆ ನಮ್ಮ ಗಮನಕ್ಕೆ ತಂದು ಸರಿಪಡಿಸಬಹುದಾಗಿತ್ತು. ಇಲ್ಲವಾದಲ್ಲಿ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬಹುದಾಗಿತ್ತು. ಕೆಲಸ ಸರಿಯಾಗಿ ಆಗಬೇಕು. ಮಾರ್ಚ ಕೊನೆ ವಾರದಲ್ಲಿ ವಸತಿ ನಿಲಯ ಉದ್ಗಾಟನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ. ಕೆಲಸಕ್ಕೆ ಸಂಪೂರ್ಣ ಬೆಂಬಲವಿದೆ. ಕೆಲಸದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ನೇರವಾಗಿ ನನ್ನನ್ನು ಭೇಟಿಯಾಗಬೇಕು. ಅದನ್ನು ಬಿಟ್ಟು ಇಲ್ಲಿಯೇ ಕೂತುಕೊಂಡು ಅದು ಬೇಕು. ಇದು ಬೇಕು ಎಂದಲ್ಲಿ ಏನು ಅರ್ಥ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅನುದಾನದ ಕೊರತೆ ಇದ್ದರೆ ನನ್ನೊಂದಿಗೆ ಸಮಾಲೋಚನೆ ನಡೆಸಿ ಅಥವಾ ಗಮನಕ್ಕೆ ತರಬಹುದಿತ್ತು. ಇದೀಗ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆ ಹೇಳುವುದು ಎಷ್ಟು ಸರಿ. ಈಗಲೂ ಕಾಲ ಮಿಂಚಿಲ್ಲ. ಎಸ್ಟಿಮೇಟ್‌ನಲ್ಲಿ ಇನ್ನು ಏನಾದರೂ ಬದಲಾವಣೆ ಮಾಡುವುದಾದರೇ ಸಂಪೂರ್ಣ ಮಾಹಿತಿ ನೀಡಿ. ಕೊಡಲೇ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಯೋಜನೆ ಅನುದಾನದಡಿಯಲ್ಲಿ ೨-೩ ಕೋಟಿ ರೂ, ಅನುದಾನ ಮಂಜೂರುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹೊರಂಡಿ ಗ್ರಾಮದ ಶರದ ಕೊಂಡೆ ಅವರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದೆ ಮತ್ತು ಹೊರಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳಪೆ ಮತ್ತು ರೈತರ ಜಾಗದಿಂದ ಮುರುಮ ಪಡೆದುಕೊಂಡು ಅನ್ಯಾಯ ಮಾಡಲಾಗಿದೆ. ಅಲ್ಲದೇ ಸರ್ಕಾರಕ್ಕೆ ರಾಯಲಟಿ ಮುಂಬದೇ ವಂಚನೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕರ ಗಮನಕ್ಕೆ ತಂದು ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಎಇಇ, ಜೆಇ, ಗುತ್ತಿಗೆದಾರ ಸೂರ್ಯಕಾಂತ ಅಲಮಾಜೆ, ರಾಮಶೇಟ್ಟಿ ಪನ್ನಾಳೆ, ಸಚೀನ ರಾಠೋಡ್, ಶಿವಾಜಿರಾವ ಪಾಟೀಲ, ಶಿವರಾಜ ಅಲಮಾಜೆ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಶಾಲಿವಾನ, ಬಂಟಿ ರಾಂಪುರೆ, ಜೈಪಾಲ, ಚಂದ್ರಶೇಖರ್ ನಿರ್ಣೆ ಇದ್ದರು.