ಯುವಕರಿಗೆ ಕೌಶಲ್ಯ ತರಬೇತಿ-ಶರಣಪ್ರಕಾಶ ಪಾಟೀಲ

ಯುವಕರಿಗೆ ಕೌಶಲ್ಯ ತರಬೇತಿ-ಶರಣಪ್ರಕಾಶ ಪಾಟೀಲ

ಯುವಕರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ — ಸರ್ಕಾರದ ಮಹತ್ವದ ನಿರ್ಧಾರ : ಸಚಿವ ಶರಣಪ್ರಕಾಶ ಪಾಟೀಲ

ಬೆಂಗಳೂರು: ನಾಡಿನ ಯುವಕರಿಗೆ ಹೆಚ್ಚಿನ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಭೂಮಿ ಮಂಜೂರು ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ *“ಕೌಶಲ್ಯ ಶೃಂಗಸಭೆ”* ಯಲ್ಲಿ ಅವರು ಮಾತನಾಡಿದರು. ಯುವಕರ ಕೌಶಲ್ಯಾಭಿವೃದ್ಧಿ ರಾಷ್ಟ್ರ ನಿರ್ಮಾಣದ ಪ್ರಮುಖ ಆಧಾರವಾಗಿದ್ದು, ಸರ್ಕಾರವು ಈ ದಿಕ್ಕಿನಲ್ಲಿ ದೃಢ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಯುವಕರಿಗೆ ನೀಡುವ ತರಬೇತಿಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ತಂತ್ರಜ್ಞಾನಾಧಾರಿತ, ಪ್ರಾಯೋಗಿಕ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. “ಹೆಚ್ಚು ಕೌಶಲ್ಯ ಹೊಂದುವುದು ಹಾಗೂ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದು ಇಂದಿನ ಯುಗದಲ್ಲಿ ಉದ್ಯೋಗ ಪಡೆಯಲು ಅತ್ಯಂತ ಮುಖ್ಯ ದಾರಿ,” ಎಂದು ಸಚಿವರು ಹೇಳಿದರು.

ಅವರು ಮುಂದುವರೆದು, ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗದಿಂದ ತರಬೇತಿ ಕೇಂದ್ರಗಳನ್ನು ವಿಸ್ತರಿಸಿ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.