ಹಿಂದಿನ ಬಿಜೆಪಿ ಆಡಳಿತ ಸರಕಾರ ರೈತರಿಗೆ ಪೂರ್ಣ ಪ್ರಮಾಣ ಇನ್ಸುರೇನ್ಸ್ ಹಣ ಪಾವತಿಸಿ ರೈತರ ಹಿತ ಕಾಪಾಡಿತ್ತು.
ಹಿಂದಿನ ಬಿಜೆಪಿ ಆಡಳಿತ ಸರಕಾರ ರೈತರಿಗೆ ಪೂರ್ಣ ಪ್ರಮಾಣ ಇನ್ಸುರೇನ್ಸ್ ಹಣ ಪಾವತಿಸಿ ರೈತರ ಹಿತ ಕಾಪಾಡಿತ್ತು.
ಇಂದಿನ ಕಾಂಗ್ರೆಸ್ ಸರಕಾರ ರೈತರಿಗೆ ಇನ್ಸುರೇನಸ್ ನೀಡುವಲಿ ಮತ್ತು ಪರಿಹಾರ ಘೋಷಿಸಲು ಹಿಂದೆಟ್ಟು ಹಾಕುತ್ತಿದೆ : ಶಾಸಕ ಜಾಧವ ಆರೋಪ
ಚಿಂಚೋಳಿ :ಬಿಜೆಪಿ ಸರಕಾರ ಆಡಳಿತದಲ್ಲಿ ಎಲ್ಲಾ ರೈತರಿಗೆ ಪೂರ್ಣ ಪ್ರಮಾಣದ ಇನ್ಸುರೇನ್ಸ್ ಹಣ ಪಾವತಿಸಲಾಗಿದೆ. ಆದರೆ ಇಂದಿನ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದಂತೆ ಪೂರ್ಣ ಪ್ರಮಾಣದ ಇನ್ಸುರೇನ್ಸ್ ಹಣ ರೈತರಿಗೆ ಪಾವತಿಸುತ್ತಿಲ್ಲ ಎಂದು ಶಾಸಕ ಡಾ. ಅವಿನಾಶ ಜಾಧವ್ ಆರೋಪಿಸಿದರು.
ಅವರು ಇಲ್ಲಿನ ತಾಲೂಕ ಆಡಳಿತ ಪ್ರಜಾಸೌಧದ ಕಾರ್ಯಾಲಯದ ಎದುರುಗಡೆ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ಮತ್ತು ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ, ಚಿಂಚೋಳಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ ತಿಳಿಸಿದರು.
ತಾಲೂಕಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿ ಮುಂಗಾರು ಬೆಳೆಗಳು, ಕೂಡು ರಸ್ತೆಗಳ ಸಂಪರ್ಕಗಳು ಹಾಳಾಗಿವೆ. ತಾಲೂಕಿನ ರೈತರ ಜೀವನ ಕಷ್ಟಕರವಾಗಿದೆ. ಸರಕಾರ ರೈತರ ಪರವಾಗಿದ್ದು, ರೈತರ ಹಿತ ಕಾಯುವ ಕೆಲಸ ಮಾಡಬೇಕು. ಹಿಂದಿನ ಬಿಜೆಪಿ ಸರಕಾರ ಆಡಳಿತದಲ್ಲಿ ಪೂರ್ಣ ಪ್ರಮಾಣದ ಇನ್ಸುರೇನ್ಸ್ ಹಣ ಪಾವತಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡಲಾಗಿದೆ. ವಾಡಿಕೆಗಿಂತ ಮಳೆ ಪ್ರಮಾಣ ಹೆಚ್ಚಳದಿಂದ ರೈತರ ಬೆಳಗಳು ಹಾಳಾಗಿ ರೈತರ ಜೀವನಗಳು ಕಷ್ಟಗಳಲ್ಲಿ ಮುಳುಗಿ ಕೊಂಡಿವೆ. ಹೀಗಾಗಿ ಸರಕಾರ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಲು ಸಾಧ್ಯವಾಗದೇ ಇದ್ದಲಿ ಎಕರೆಗೆ 25 ಸಾವಿರನಾದರೂ ಪರಿಹಾರ ಘೋಷಣೆ ಮಾಡಿ ರೈತರ ಸಂಕಷ್ಟದ ಜೀವನಕ್ಕೆ ಸರಕಾರ ನೆರವಾಗಬೇಕು. ಅಲ್ಲದೆ ಸರಕಾರ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ಕ್ರಮಕೈಗೊಳಬೇಕು. ಆಗದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಪಕ್ಷ ಇಡೀ ರಾಜ್ಯದ್ಯಾಂತ ಉಗ್ರ ಹೋರಾಟ ನಡೆಸಲಿದೆ ಎಂದರು.
ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟೆ, ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಭೀಮಶೆಟ್ಟಿ ಮುರುಡ, ಗೌತಮ್ ವೈಜಿನಾಥ ಪಾಟೀಲ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಗಿರಿರಾಜ ನಾಟಿಕಾರ, ಅಮರ ಲೋಡನೂರ್, ಮಹೇಂದ್ರ ಪೂಜಾರಿ, ಅಭಿಷೇಕ, ಸತೀಶ ರೆಡ್ಡಿ, ನಾರಾಯಣ ನಾಟಿಕಾರ, ಆಕಾಶ ಕೊಳ್ಳೂರ, ಜಗದೀಶಸಿಂಗ್ ಠಾಕೂರ, ರಾಜು ಪವಾರ, ಶ್ರೀಮಂತ ಕಟ್ಟಿಮನಿ, ಕೆ.ಎಂ.ಬಾರಿ, ರಮೇಶ ಪಡಶೆಟ್ಟಿ, ಲಕ್ಷ್ಮೀಕಾಂತ ರೆಡ್ಡಿ ನರನಾಳ, ಪ್ರದೀಪ ಮೇತ್ರಿ, ಶ್ರೀಕಾಂತ ಜಾನಕಿ ಉಪಸ್ಥಿತರಿದರು.