ನರೇಗಲ್ಲ: ಗದಗ ಜಿಲ್ಲೆಯ ಯೋಜನಾ ಸಮಿತಿ ಸದಸ್ಯರಾಗಿ ರಾಚಯ್ಯ ಮಾಲಗಿತ್ತಿಮಠ ಆಯ್ಕೆ

ನರೇಗಲ್ಲ: ಗದಗ ಜಿಲ್ಲೆಯ ಯೋಜನಾ ಸಮಿತಿ ಸದಸ್ಯರಾಗಿ ರಾಚಯ್ಯ ಮಾಲಗಿತ್ತಿಮಠ ಆಯ್ಕೆ

ನರೇಗಲ್ಲ: ಗದಗ ಜಿಲ್ಲೆಯ ಯೋಜನಾ ಸಮಿತಿ ಸದಸ್ಯರಾಗಿ ರಾಚಯ್ಯ ಮಾಲಗಿತ್ತಿಮಠ ಆಯ್ಕೆ

ನರೇಗಲ್ಲ ಪಟ್ಟಣ ಪಂಚಾಯಿತಿ ವಾರ್ಡ್ ನಂ. 01 ರ ಸದಸ್ಯರಾದ ಶ್ರೀ ರಾಚಯ್ಯ ಮಾಲಗಿತ್ತಿಮಠ ಅವರು ಗದಗ ಜಿಲ್ಲೆಯ ಯೋಜನಾ ಸಮಿತಿ ಸದಸ್ಯರಾಗಿ 2025ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಅವರ ಈ ಆಯ್ಕೆಗೆ ನರೇಗಲ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, “ಶ್ರೀ ರಾಚಯ್ಯ ಮಾಲಗಿತ್ತಿಮಠ ರವರು ಸದಾ ಜನಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದು, ಅವರ ಆಯ್ಕೆ ನರೇಗಲ್ಲ ಪಟ್ಟಣದ ಗೌರವವನ್ನು ಹೆಚ್ಚಿಸಿದೆ,” ಎಂದು ಹೇಳಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕರು ಕೂಡಾ ಅವರ ಮುಂದಿನ ಸೇವಾ ಕಾರ್ಯಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ವರದಿ: ಎಚ್ ವ್ಹಿ.