ರಾಜ್ಯ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಕೂಡಲೇ ಜಾರಿಯಾಗಲಿ- ಶ್ರೀ ಶಶೀಲ್ ಜಿ ನಮೋಶಿ

ರಾಜ್ಯ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಕೂಡಲೇ ಜಾರಿಯಾಗಲಿ- ಶ್ರೀ ಶಶೀಲ್ ಜಿ ನಮೋಶಿ

ರಾಜ್ಯ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಕೂಡಲೇ ಜಾರಿಯಾಗಲಿ- ಶ್ರೀ ಶಶೀಲ್ ಜಿ ನಮೋಶಿ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರ್ಗಿ, ಪ್ರೌಢ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನ ಸ್ಯಾಕ್ ಆಡಿಟೋರಿಯಂ ಹಾಲಿನಲ್ಲಿ ಜರುಗಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ವಿಧಾನ ಪರಿಷತ್ ಸದಸ್ಯರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆದ ಶ್ರೀ ಶಶೀಲ್ ಜಿ ನಮೋಶಿಯವರು ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯು ಪಿ ಎಸ್ ಪಿಂಚಣಿ ಯೋಜನೆ ಇದು ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಇದ್ದು ನಮ್ಮ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ರಾಜ್ಯ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಈ ಹಿಂದಿನಂತೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೆ ತರುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಿ ಇಲ್ಲಿಯವರೆಗೂ ಹಳೆಯ ಪಿಂಚಣಿ ಜಾರಿಗೆ ತರದೆ ಇರುವುದು ಸರಿಯಾದ ಕ್ರಮವಲ್ಲ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲೇಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಡಾ ಚಂದ್ರಶೇಖರ ಪಾಟೀಲವರಿಗೆ ನಿಮ್ಮ ಸರ್ಕಾರ ರಾಜ್ಯದಲ್ಲಿ ಇದ್ದು ನೀವು ನೌಕರರಿಗೆ ಮಾತು ಕೊಟ್ಟಂತೆ ನಡೆದು ಕೂಡಲೆ ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೆ ಮಾಡಿದರೆ ನಿಮಗೆ ಕಲಬುರ್ಗಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಾನು ವೈಯಕ್ತಿಕವಾಗಿ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಶಿಕ್ಷಕರ ಕೂಡಲೆ ಬಡ್ತಿ ನೀಡಿ ಪದವಿ ಪೂರ್ವ ಉಪನ್ಯಾಸಕರಾಗಿ ನೇಮಿಸಬೇಕು ಎಂದು ಹೇಳಿದರು, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳ ಮಾನ್ಯತೆ ಮತ್ತು ನವೀಕರಣ ಸರಳೀಕರಣಗೊಳಿಸಿ ಗೊಂದಲವಾಗದಂತೆ ನೋಡಿಕೊಳ್ಳಬೇಕು. ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ವಿಷಯಕ್ಕೆ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು ಈಗೀನ 40 ರಿಂದ 20 ಕ್ಕೆ ಇಳಿಸಬೇಕೆಂದು ಹೇಳಿದರು 

ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ನೇರವೆರಿಸಿದರು. ಇದೆ ಸಂದರ್ಭದಲ್ಲಿ ಕಲಬುರ್ಗಿಯ ನೂತನ ಲೋಕಸಭಾ ಸದಸ್ಯರಾದ ಶ್ರೀ ರಾಧಾಕೃಷ್ಣ ದೊಡಮನಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ ಚಂದ್ರಶೇಖರ ಪಾಟೀಲ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶಶೀಲ್ ಜಿ ನಮೋಶಿ ಯವರನ್ನು ವಿಶೇಷ ಸನ್ಮಾನ ಮಾಡಿದರು, ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಿ ಹೆಚ್ ಡಿ ಪಡೆದ ಪ್ರೌಢಶಾಲಾ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವೇದಿಕೆಯಲ್ಲಿ ಕಲಬುರ್ಗಿ ಗ್ರಾಮೀಣ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀ ರಾಮೂ ಗೂಗವಾಡ, ಕೇಂದ್ರೀಯ ವಿಶ್ವವಿದ್ಯಾಲಯ ಡಾ ಅಪ್ಪುಗೇರೆ ಸೋಮಶೇಖರ್, ಶಿಕ್ಷಣಾಧಿಕಾರಿ ಶ್ರೀಮತಿ ಶಂಕ್ರೆಮ್ಮ ಢವಳಗಿ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಮಲ್ಲಿಕಾರ್ಜುನ ಶಿರಸಗಿ, ಸಂಘದ ರಾಜ್ಯ ಖಜಾಂಚಿ ಶ್ರೀ ಧರಂಸಿಂಗ್ ರಾಠೋಡ, ರಾಜ್ಯ ಉಪಾಧ್ಯಕ್ಷ ಶ್ರೀ ಪ್ರಕಾಶ್ ನರೋಣ, ವಿಜ್ಞಾನ ಪರೀಷತ್ ನ ಶ್ರೀ ಗಿರೀಶ್ ಕಡ್ಲೆವಾಡ, ಶ್ರೀ ಮರೆಪ್ಪ ಬಸವಾಪಟ್ಟಣ, ಶ್ರೀ ರಾಜು ದೊಡಮನಿ, ಶ್ರೀ ಸತೀಶ್ ಜಾರಿಗೊಂಡ, ಶ್ರೀ ರಾಜೇಶ್ ನಿಲಹಳ್ಳಿ ಉಪಸ್ಥಿತರಿದ್ದರು 

ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಮಹೇಶ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಮಲ್ಲಿಕಾರ್ಜುನ ಸಲಗರ ಸ್ವಾಗತಿಸಿದರು, ಶ್ರೀ ವೀರೆಶ ಹೂಗಾರ ಶ್ರೀ ಶಂಕರ್ ಹೂಗಾರ ಪ್ರಾರ್ಥನೆ ಮಾಡಿದರು ಶ್ರೀಮತಿ ಪರ್ವೀನ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು