ಮಾಪಣ್ಣ ಹದನೂರ ರವರ ಪುಣ್ಯ ಸ್ಮರಣೆ |

ಮಾಪಣ್ಣ ಹದನೂರ ರವರ ಪುಣ್ಯ ಸ್ಮರಣೆ |

ಮಾಪಣ್ಣ ಹದನೂರ ರವರ ಪುಣ್ಯ ಸ್ಮರಣೆ |

ಪ್ರತ್ಯೇಕ ಮೀಸಲಾತಿಯ ಕಿಚ್ಚನ್ನು ಹೊತ್ತಿಸಿದ ನಾಯಕ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದಿ.ಮಾಪಣ್ಣ ಹದನೂರ ರವರ ಮೊದಲನೇಯ ಪುಣ್ಯ ಸ್ಮರಣೆಯನ್ನು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಆಚರಿಸಲಾಯಿತು.

ಹದನೂರ ರವರ ಭಾವಚಿತ್ರಕ್ಕೆ ಶಿವರಾಜ ಜಿನಕೇರಿ, ಶರಣು ಪಗಲಾಪುರ ಯವರು ಮಾಲಾರ್ಪಣೆ ಮಾಡಿ, ಕ್ಯಾಂಡಲ್ ಹಚ್ಚಿ, ಪುಷ್ಪನಮನ ಸಲ್ಲಿಸದರು.

ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಶಿವರಾಜ ಜಿನಕೇರಿ ಮಾತನಾಡಿ, ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆಯ ಪುಟ್ಟ ದೀಪದ ಕಿಚ್ಚನ್ನು ಮೊದಲು ಹಚ್ಚಿದ್ದೇ ಮಾದಿಗ ದಂಡೋರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರ ಎಂದು ಹೇಳಿದರು.

ದಿ.ಹದನೂರ ರವರು ಈಡೀ ತಮ್ಮ ಜೀವನ ಮಾದಿಗರ ಮೀಸಲಾತಿಗಾಗಿ ಹೋರಾಟ ಮಾಡಿ ನಮ್ಮನ್ನು ಬಿಟ್ಟು ಅಗಲಿದ್ದಾರೆ, ಮಾದಿಗರ ಮೀಸಲಾತಿಗಾಗಿ ಅನೇಕ ತೀವ್ರತರವಾದ ಅನೇಕ ಹೋರಾಟ ಗಳನ್ನ ಮಾಡಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಶಿವರಾಜ ಜಿನಕೇರಿ, ಶರಣು ಪಗಲಾಪುರ, ಮಲ್ಲೇಶಿ ಸೈದಾಪುರ, ಶಿವರಾಜ ಕೋರೆ, ಶರಣರಾಜ ಗೊಬ್ಬುರ, ಲಕ್ಷ್ಮೀಕಾಂತ ಬಳಿಚಕ್ರ, ಶ್ರೀಧರ ಕೊಲ್ಲೂರ, ಆನಂದ ನಿಂಗದಳ್ಳಿ, ಶಾಮ ದಂಡಗುಳಕರ ಇದ್ದರು.