ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಚಾಲನೆ ನೀಡಿದ ಶಾಸಕಿ ಕನೀಜ್ ಫಾತೀಮಾ

ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಚಾಲನೆ ನೀಡಿದ ಶಾಸಕಿ ಕನೀಜ್ ಫಾತೀಮಾ

ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಚಾಲನೆ ನೀಡಿದ ಶಾಸಕಿ ಕನೀಜ್ ಫಾತೀಮಾ

ಕಲಬುರಗಿ: ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಉತ್ತರ ವಲಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿ.ಶಿ. ಸಂಘ, ಗ್ರೇಡ-1 ಕಾರ್ಯದರ್ಶಿ ಬೋಜನಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ರೀಡಾ ಕೂಟದ ಕಲಬುರಗಿ ಉತ್ತರ ವಲಯ ಅಧ್ಯಕ್ಷ ಸೋಮಶೇಖರ ಹಂಚನಾಳ, ದೈಹಿಕ ಶಿ.ಶಿ. ಸಂಘ, ಗ್ರೇಡ-1 ರಾಜ್ಯ ಪರೀಷತ್ತು ಸದಸ್ಯ ಪೀರಪ್ಪಾ ಹೂಗೊಂಡ, ಉತ್ತರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಡಾ. ಶಾಂತಾಬಾಯಿ ಬಿರಾದಾರ, ಉತ್ತರ ವಲಯ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಕ್ರೀಡಾ ಕೂಟದ ಕಾರ್ಯದರ್ಶಿ ಸಂತೋಷ ಎಮ್. ಡಿಗ್ಗಿ, ಕಮಲಾಪೂರ ಕ.ರಾ.ನೌ. ಸಂ. ಅಧ್ಯಕ್ಷ ಮಿಟ್ಟೇಸಾಬ ಮುಲ್ಲಾ, ಉತ್ತರ ಕ.ರಾ.ಪ್ರೌ.ಶಾ.ಸ.ಶಿ. ಸಂಘದ ಅಧ್ಯಕ್ಷ ಸೈಯದ್ ಅಹ್ಮದ್ ಅಲಿ, ಕಮಲಾಪೂರ ಕ.ರಾ.ಪ್ರಾ.ಶಾ.ಶಿ.ಸಂ. ಅಧ್ಯಕ್ಷ ಸೋಮನಗೌಡ, ಉತ್ತರ ಕ.ರಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಶೇಖ್ ಮುಜೀಬ್, ಪರಮೇಶ್ವರ ಓಕಳಿ, ದಶರಥ, ಧರ್ಮರಾಜ ಭೂಸನೂರ, ಅಮರೇಶ ಕೋರಿ, ಪ್ರಭು ಮಾಚನೂರ, ಅಶೋಕ ಸೋನ್ನ ಸೇರಿದಂತೆ ಇತರರು ಇದ್ದರು.