ಕೃಷ್ಣನ ಸೇವೆಗಾಗಿ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳಿ: ಶ್ರೀ ವೇದವರ್ಧನ ಸ್ವಾಮೀಜಿ

ಶಿರೂರು ಶ್ರೀ ವೇದವರ್ಧನ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ
ಕೃಷ್ಣನ ಸೇವೆಗಾಗಿ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳಿ: ಶ್ರೀ ವೇದವರ್ಧನ ಸ್ವಾಮೀಜಿ
ಕಲಬುರಗಿ :ಮನುಷ್ಯ ಜೀವನ ಕೃಷ್ಣಾರ್ಪಣೆಯೊಂದಿಗೆ ಪಾವನಗೊಳ್ಳಲು ಕೃಷ್ಣನಿಗೆ ಸಲ್ಲುವ ಪರ್ಯಾಯೋತ್ಸವದಲ್ಲಿ ಭಕ್ತರೆಲ್ಲರೂ ಪಾಲ್ಗೊಂಡು ಧನ್ಯರಾಗಬೇಕೆಂದು ಮುಂದಿನ ವರ್ಷ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ಸ್ವಾಮೀಜಿ ಹೇಳಿದರು.
ಪರ್ಯಾಯ ಪೂರ್ವ ಸಂಚಾರದಂಗವಾಗಿ ಅ.15ರಂದು ಕಲಬುರಗಿ ನಗರಕ್ಕಾಗಮಿಸಿದ ಪೂಜ್ಯ ಶ್ರೀ ವೇದವರ್ಧನ ಸ್ವಾಮೀಜಿ ಅವರಿಗೆ ಅದು ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ರಾಮಮಂದಿರದಲ್ಲಿ ಪೂರ್ಣಕಂಭದ ಸ್ವಾಗತ ನೀಡಿದ ನಂತರ ಭಕ್ತರನ್ನುದೇಶಿಸಿ ಅನುಗ್ರಹ ಭಾಷಣ ಮಾಡಿ ಮುಂದಿನ ವರ್ಷ ಜನವರಿ 18ರಂದು ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ನಡೆಯಲಿದ್ದು ಭಕ್ತರರೆಲ್ಲರೂ ಕೃಷ್ಣನ ಸೇವೆಗಾಗಿ ಉಡುಪಿಗೆ ಆಗಮಿಸಬೇಕು ಎಂದು ಕರೆ ನೀಡಿದರು ಕರೆ ನೀಡಿದರು. ಜೀವನದಲ್ಲಿ ಪರಮಾತ್ಮನ ಆರಾಧನೆಗೆ ಸಮಯದ ಮಿತಿ ಇಲ್ಲ ಪ್ರೀತಿಯಿಂದ ಮಾಡುವ ಎಲ್ಲ ಕೆಲಸಗಳು ದೇವರಿಗೆ ಮುಟ್ಟುತ್ತದೆ ಅದಕ್ಕಾಗಿ ಜೀವನದಲ್ಲಿ ಅಷ್ಟ ಪುಷ್ಪ ಆಚರಣೆಯನ್ನು ಪಾಲಿಸಿ ಬದುಕನ್ನು ಪಾವನಗೊಳಿಸಬೇಕಾಗಿದೆ ಅಹಿಂಸೆ ಇಂದ್ರಿಯ ನಿಗ್ರಹ ಪ್ರಾಣಿ ದಯೆ ಸತ್ಯ ನುಡಿಯುವುದು ಜ್ಞಾನ ಸಂಪಾದನೆ ತಪಸ್ಸು ಧ್ಯಾನ ಧರ್ಮರಕ್ಷಣೆಯ ಕಾರ್ಯಗಳ ಮೂಲಕ ದೇವರಿಗೆ ಅಷ್ಟ ಪುಷ್ಪ ಸಮರ್ಪಣೆಯಾದರೆ ಜೀವನ ಆರ್ಥಿಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಡಿತ ಗೋಪಾಲಾಚಾರ್ಯ ಅಕಮಂಚಿಯವರು ರಾಮನ ನಡೆ ಕೃಷ್ಣನ ನುಡಿ ಪಾಲನೆಗೊಂಡಾಗ ಬದುಕು ಧನ್ಯತೆ ಹೊಂದುತ್ತದೆ ಅದಕ್ಕಾಗಿ ರಾಮನ ಸನ್ನಿಧಿಯಲ್ಲಿ ಉಡುಪಿಯ ಕೃಷ್ಣನೇ ಆಗಮಿಸಿದಂತೆ ಶ್ರೀ ವೇದವರ್ಧನ ಸ್ವಾಮೀಜಿಯವರು ಪರ್ಯಾಯಕ್ಕೆ ಕರೆ ನೀಡಲು ಆಗಮಿಸಿದ್ದಾರೆ ಎಂದು ತನ್ನ ಪ್ರಾರ್ಥಮಿಕ ಭಾಷಣದಲ್ಲಿ ಹೇಳಿದರು. 32ನೇ ಆವರ್ತನದ ಪರ್ಯಾಯ ಮಹೋತ್ಸವದಲ್ಲಿ ಸರ್ವಜ್ಞ ಪೀಠ ರಹಣ ಮಾಡುತ್ತಿರುವ ಶ್ರೀ ವೇದ ವರ್ಧನ ಸ್ವಾಮೀಜಿಯವರ ಈ ಪರ್ಯಾಯೋತ್ಸವದಲ್ಲಿ ಕಲಬುರ್ಗಿಯ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿಸತೆಯಿಂದ ಪಾಲ್ಗೊಳ್ಳುವಂತೆ ಶ್ರೀ ವ್ಯಾಸರಾಜ ಸಂತೆಕೆಲ್ಲೂರು ಮನವಿ ಮಾಡಿದರು.
ಪಂಡಿತ ಮೋಹನಾಚಾರ್ಯ ಅವರು ವೇದಘೋಷ ನಡೆಸಿದರು ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸ್ವಾಮೀಜಿಯವರನ್ನು ಫಲಪುಷ್ಪಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀರಾಮ ಮಂದಿರದ ವಕ್ತಾರರಾದ ಕಿಶೋರ್ ದೇಶಪಾಂಡೆ, ಸರ್ವರನ್ನು ಸ್ವಾಗತಿಸಿ ಗೌರವಿಸಿದರು. ಶ್ರೀರಾಮ ಮಂದಿರದ ಅರ್ಚಕರಾದ ನಾಗರಾಜ್, ನಿರಂಜನ ರಾವ್ ಉಪಸ್ಥಿತರಿದ್ದರು.