ರೈತಪರ ಕೇಂದ್ರ ಬಜೆಟ್: ಸಿರಗಾಪೂರ
ರೈತಪರ ಕೇಂದ್ರ ಬಜೆಟ್: ಸಿರಗಾಪೂರ
ಕಲಬುರಗಿ: ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ, ಎಂಎಸ್ಎಂಇ ಉದ್ಯಮಿದಾರರ ಉತ್ತೇಜನ,ರೈತರಿಗೆ ಬಡ್ಡಿ ರಹಿತ ಸಾಲ,ಆರೋಗ್ಯ ಕಾರ್ಡ ಸೇರಿ ಹಲವು ಮಹತ್ವದ ಜನ ಸಾಮಾನ್ಯರ ಬಜೆಟ್ ಮಂಡನೆಯಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಿಂಗರಾಜ ಸಿರಗಾಪೂರ ಅಭಿಪ್ರಾಯಪಟ್ಟರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸರಕಾರಿ ನೌಕರರಿಗೂ ಹಾಗೂ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಶುಲ್ಕ ಕಡಿಮೆ ಮಾಡಿರುವುದರಿಂದ ನಿರಾಳರಾಗಿದ್ದಾರೆ.ರೈತರಿಗೆ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಿರುವುದರಿಂದ ಖುಷಿ ತಂದಿದೆ.ಮಹಿಳೆಯರಿಗೆ ಅನೇಕ ಯೋಜನೆ ರೂಪಿಸಿದೆ.ಅಂಗನವಾಡಿ ಮಹಿಳೆಯರ ಆಯುಷ್ಮಾನ ವ್ಯಾಪ್ತಿಗೆ ಸೇರ್ಪಡೆ,ರೈತರಿಗೆ ಕಿಸಾನ ಕಾರ್ಡ ಯೋಜನೆಯಡಿ 3 ಲಕ್ಷದಿಂದ 5 ಲಕ್ಷ ರೂ.ಸಾಲಮಿತಿ ಹೆಚ್ಚಳ ಇದು ಮಾನವ ಅಭಿವೃದ್ದಿ ಜತೆಗೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ.ಈ ಬಜೆಟ್ ಎಲ್ಲರಿಗೂ ಖುಷಿ ತಂದಿದೆ ಎಂದಅವರು ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳ ಉತ್ತೆಜನಕ್ಕೆ ಹಾಗೂ ಯೋಜನೆಗಳನ್ನು ಘೋಷಿಸದೆ ಇರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ
.