ರಾಮೇಶ್ವರಂನಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಅಮರ ಬಲಿದಾನ ದಿನಾಚರಣೆ

ರಾಮೇಶ್ವರಂನಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಅಮರ ಬಲಿದಾನ ದಿನಾಚರಣೆ
ಕಲಬುರಗಿ: ತಮಿಳುನಾಡಿನ ರಾಮೇಶ್ವರಂನ ಧನುಷ್ ಕುಂಡದ ಅಶೋಕ ಚಕ್ರ ವೃತ್ತದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಪರಮ ಪೂಜ್ಯ ಹವಾ ಮಲ್ಲಿನಾಥ ಮಾಹಾರಾಜ ಅವರಿಂದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅಮರ ಬಲಿದಾನ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ದೇಶಭಕ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭಾರತದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಮಲ್ಲಿನಾಥ ಮಾಹಾರಾಜರು ರಾಮೇಶ್ವರಂನ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಸ್ಮಾರಕದಲ್ಲಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ನಂತರ, ರಾಮೇಶ್ವರಂನ ಪ್ರಮುಖ ರಸ್ತೆಯಲ್ಲಿ ದೇಶಭಕ್ತಿ ಗೀತೆಗಳೊಂದಿಗೆ ಪಥ ಸಂಚಲನ ನಡೆಸಲಾಯಿತು. ಇದೇ ವೇಳೆ ಶ್ರೀ ಗೊಸ್ವಾಮಿ ಮಾದಮ್ ಸತ್ಸಂಗ ಹಾಲಿನಲ್ಲಿ ನಡೆದ ಸರ್ವಧರ್ಮ ಸಭೆಯಲ್ಲಿ, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಗಣ್ಯರು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಮತ್ತು ಹಿರಿಯ ನಾಗರಿಕರಿಗೆ ಮಲ್ಲಿನಾಥ ಮಾಹಾರಾಜರು ಸನ್ಮಾನಿಸಿ ಗೌರವಿಸಿದರು. ಸಮಾರಂಭದ ಆರಂಭದಲ್ಲಿ ಎಲ್ಲರೂ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಪುನರಾವೃತ್ತಿ ಮಾಡಿದರು. ಸಿಂದಗಿಯ ಬಾಲಕಲಾವಿದರು ದೇಶಭಕ್ತಿ ಗೀತೆಗಳೊಂದಿಗೆ ನೃತ್ಯ ಪ್ರದರ್ಶನ ನೀಡಿದರು.
ಮಲ್ಲಿನಾಥ ಮಾಹಾರಾಜರು ಮಾತನಾಡಿ, “ದೇಶದ ಸಂರಕ್ಷಣೆ ಮತ್ತು ಸಾಮರಸ್ಯಕ್ಕಾಗಿ ಸರ್ವಧರ್ಮ ಸಮಭಾವ, ನಿಸರ್ಗ ನಿಯಮ ಹಾಗೂ ಸಂವಿಧಾನದ ತತ್ವಗಳನ್ನು ಪಾಲನೆ ಮಾಡಬೇಕು,” ಎಂದು ದೇಶಬಾಂಧವರಿಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರು ಡಾ. ಬಾಬು ಬ್ರಹತ್, ದಾಸರಾವ ಅಂಬಾಡೆ, ಡಾ. ಮೃತುಂಜಯ ನಿಲಂಗೆ, ಶಾಹಜಿರಾವ ಪಾಟೀಲ, ಬಾಲಾಜಿ ಪಾಟೀಲ, ಮಲ್ಲಿಕಾರ್ಜುನ ಸಾರವಾಡ, ಭೂಮಿಕಾ ಚಿತ್ತಾಪುರ, ಗುರುಸಿದ್ದಪ್ಪ ಬೆಳಕನಳ್ಳಿ, ನಾಗರಾಜ ಚಿಟಗುಪ್ಪ, ಗಿರಿಶ ತಂಬಾಕೆ, ಶಕ್ತಿ ನಿಲಂಗೆ, ಶ್ಯಾಮ ನಾಂದೇಡ, ಶ್ರೀಶೈಲ ಹರಸುರೆ, ಶರಣು ನವಣಿ, ಬಲವಂತ ಪಾಟೀಲ, ಅಜಯ ಸಿಂಧೆ, ಉಮೇಶ ಕುಮಾರ ಮುಂಬೈ, ಸಂತೋಷ ಬೋನೆ, ಉದಯ ಪಾಟೀಲ, ಅನಿಲ ಆಲ್ಮಾ, ಸುಧಾಕರ ಜಹಿರಾಬಾದ, ಶಿವಶರಣ ಸುತಾರ, ರಾಹುಲ ಪಾಟೀಲ, ಕಮಲಾಕರ ಪಟ್ಟಣ, ದಿಲಿಪಿ ಪಾಟೀಲ ಬಿದರ, ಬಸವರಾಜ ನಿರಗುಡಿ, ಶಿವಕುಮಾರ ಬಿದರ, ಬಸವರಾಜ ಬಿರಾದಾರ ಅಕ್ಕಲಕೋಟ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಮಿತಿ ವತಿಯಿಂದ ಭಾಗವಹಿಸಿದ ಎಲ್ಲರಿಗೂ ಉತ್ತರ ಕರ್ನಾಟಕ ಶೈಲಿಯ ಸಿಹಿ ಹೊಳಿಗೆ, ಹುಗ್ಗಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.