ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು  ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಲಬುರಗಿ: ನಗರದ ಬಸವೇಶ್ವರ ಕಾಲೋನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ ರಿಜಿಸ್ಟರ್ ಬೆಂಗಳೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೋಳ್ಳಲಾಯಿತು. ಈ ಕಾರ್ಯಕಮನ್ನು ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಕಲ್ಲು ಬಾಲಕೃಷ್ಣ ಜೋಷಿ ಹುಬ್ಬಳ್ಳಿ ಇವರು ಉದ್ಘಾಟಿಸಿದರು. 

ನೂತನ ಅಧ್ಯಕ್ಷರಾಗಿ ಕಿಶನರಾವ್ ಆರ್. ಕುಲಕರ್ಣಿ ಕಾಡಮಗೇರಾ (ಬಿ), ಪ್ರಧಾನ ಕಾರ್ಯದರ್ಶಿ ಎಚ್ ಕೆ. ವೆಂಕಟೇಶ ರಾಯಚೂರ, ಸಹ ಕಾರ್ಯದರ್ಶಿ ಪ್ರವೀಣ ಕುಲಕರ್ಣಿ ದಾವಣಗೆರೆ, ಖಜಾಂಚಿ ವಿಠಲರಾವ್ ದೇಸಾಯಿ ಗಂಗಾವತಿ, ಉಪಾಧ್ಯಕ್ಷರಾಗಿ ಅನಿಲ ಅಷ್ಠಗಿ ಕಲಬುರಗಿ, ಶ್ರೀನಿವಾಸ್ ಪಾಟೀಲ್ ಹುಬ್ಬಳ್ಳಿ, ಸುನಿಲ ಮಂಗಳೂರು ಗದಗ್, ಉದಯಕುಮಾರ ಬಳ್ಳಾರಿ, ನಾಗರಾಜ ಸಿದ್ದಾಂತಿ ಕೋಪಳ, ಸಂಘಟನಾ ಕಾರ್ಯದರ್ಶಿಗಳಾದ ವಾದಿರಾಜ್ ಬಿ.ಕುಲಕರ್ಣಿ, ಶ್ರೀಮತಿ ರಾಜೇಶ್ವರಿ ಎಸ್.ಕೆ ದಾವಣಗೇರೆ ಇವರನ್ನು ಆಯ್ಕೆ ಮಾಡಲಾಯಿತು.     

ಈ ಸಂದರ್ಭದಲ್ಲಿ ಸಂಸ್ಥಾಪಕರು, ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಗುರುರಾಜ ಎನ್. ಕುಲಕರ್ಣಿ ಗಂಗಾವತಿ, 

ಎ.ಬಿ.ಎಂ.ಎಂ. ಜಯತೀರ್ಥ ವಿದ್ಯಾರ್ಥಿ ನಿಲಯ ಕೃಷ್ಣ ಮಂದಿರದ ಅಧ್ಯಕ್ಷ ರಂಗನಾಥ ದೇಸಾಯಿ ಕಲಬುರಗಿ, ಎ.ಬಿ.ಎಂ.ಎಂ. ಜಯತೀರ್ಥ ವಿದ್ಯಾರ್ಥಿ ನಿಲಯ ಕೃಷ್ಣ ಮಂದಿರದ ಕಾರ್ಯದರ್ಶಿಗಳು ಹಾಗೂ ನ್ಯಾಯವಾದಿ ಕಿಶೋರ ದೇಶಪಾಂಡೆ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ಅವಿನಾಶ ಕುಲಕರ್ಣಿ ರೇವೂರ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಾಂಡುರಂಗ ದೇಶಮುಖ, ಶ್ರೀ ಅನ್ನಪೂರ್ಣೇಶ್ವರಿ ಸಂಘದ ಅಧ್ಯಕ್ಷ ಬಲಭೀಮ ಎಸ್. ಬಂಗರಗಿಕರ್, ಶ್ರೀ ಅನ್ನಪೂರ್ಣೇಶ್ವರಿ ಸಂಘದ ಕಾರ್ಯದರ್ಶಿ ಮಲ್ಹಾರಾವ ಕುಲಕರ್ಣಿ ಭಾಸಗಿ ಸೇರಿದಂತೆ ಇತರರು ಇದ್ದರು. ಮಂಜು ಆರ್.ಜೆ.ನಿರೂಪಿಸಿದರು.