“ಡಿಜಿಟಲ್ ಕಂಟೆಂಟ್ ಕ್ರಿಯೇಷನ್” ಆಡ್-ಆನ್ ಕೋರ್ಸ್ ಉದ್ಘಾಟನೆ

“ಡಿಜಿಟಲ್ ಕಂಟೆಂಟ್ ಕ್ರಿಯೇಷನ್”  ಆಡ್-ಆನ್ ಕೋರ್ಸ್ ಉದ್ಘಾಟನೆ

“ಡಿಜಿಟಲ್ ಕಂಟೆಂಟ್ ಕ್ರಿಯೇಷನ್” ಆಡ್-ಆನ್ ಕೋರ್ಸ್ ಉದ್ಘಾಟನೆ

ಕಲಬುರಗಿ, ಅಕ್ಟೋಬರ್ 14: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ. ವೀರಮ್ಮ ಗಂಗಸಿರಿಪದವಿ ಮಹಾವಿದ್ಯಾಲಯದ ಶಿಕ್ಷಣ ವಿಭಾಗದ ವತಿಯಿಂದ “ಡಿಜಿಟಲ್ ಕಂಟೆಂಟ್ ಕ್ರಿಯೇಷನ್” ಆಡ್-ಆನ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 14-10-2025ರಂದು ಮಹಾವಿದ್ಯಾಲಯದ ಕೊಠಡಿ ಸಂಖ್ಯೆ–09ರಲ್ಲಿ ನೆರವೇರಿತು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಸವಿತಾ, ಸಹಾಯಕ ಪ್ರಾಧ್ಯಾಪಕಿ, ಗಣಕ ವಿಜ್ಞಾನ ವಿಭಾಗ, ವಿ.ಟಿ.ಯು. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕಲಬುರಗಿ ಅವರು ಉಪಸ್ಥಿತರಿದ್ದರು. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಪ್ರಾಮುಖ್ಯತೆ, ವಿಷಯ ನಿರ್ಮಾಣದ ಹೊಸ ಆಯಾಮಗಳು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಾಂತ್ರಿಕ ನೈಪುಣ್ಯ ಗಳಿಸಬೇಕಾದ ಅಗತ್ಯತೆ ಕುರಿತು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಜೇಂದ್ರ ಬಿ ಕೊಂಡಾ ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಡ್-ಆನ್ ಕೋರ್ಸ್ ಮೂಲಕ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ವಿಸ್ತರಿಸಿಕೊಂಡು ತಂತ್ರಜ್ಞಾನ ಆಧಾರಿತ ಕಲಿಕೆಗೆ ಸಿದ್ಧರಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯ ಪರಿಚಯವನ್ನು ಶಿಕ್ಷಣ ವಿಭಾಗದ ಮುಖ್ಯಸ್ಥರು ಡಾ. ನಾಗರತ್ನ ಎಸ್. ಅವರು ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಿ.ಎ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಸ್ವಾತಿ ನೆರವೇರಿಸಿದರು. ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಶಿವಲೀಲಾ ಅವರು ಸುಮಧುರವಾಗಿ ಹಾಡಿದರು.

ಈ ಕಾರ್ಯಕ್ರಮದಲ್ಲಿ ಡಾ.ಪ್ರೇಮಿಳಾ ತೋರನ್, ಹಾಗೂ ಇತರ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಗೂ IQAC ಸದಸ್ಯರು ಉಪಸ್ಥಿತರಿದ್ದು, ಸಮಾರಂಭ ಯಶಸ್ವಿಯಾಗಿ ನೆರವೇರಿತು.ಎಂದು ಮಹಾವಿದ್ಯಾಲಯದ ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿರುತ್ತಾರೆ