ಮಹೇಶ ಎಸ್. ನಾಯಕ ನೇಮಕ

ಮಹೇಶ ಎಸ್. ನಾಯಕ ನೇಮಕ

ಮಹೇಶ ಎಸ್. ನಾಯಕ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಅಧ್ಯಕ್ಷರಾದ ನಂದಕುಮಾರ ಮಾಲಿಪಾಟೀಲ್ ಅವರ ಆದೇಶದ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ ಕಲಬುರಗಿ ಜಿಲ್ಲಾ ಯುವ ಘಟಕ ಅಧ್ಯಕ್ಷರನ್ನಾಗಿ ಮಹೇಶ ಎಸ್. ನಾಯಕ ಅವರನ್ನು ನೇಮಕ ಮಾಡಲಾಗಿದೆ. ಎಂದು ಯುವ ಘಟಕದ ವಿಭಾಗೀಯ ಅಧ್ಯಕ್ಷ ಡಾ. ರಾಮುನಾಯಕ ಅರಳಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರಿಯವರು ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡು ಜಿಲ್ಲೆಯ ಎಲ್ಲಾ ತಾಲೂಕಗಳಿಗೆ ಸಂಚರಿಸಿ ಮುಖ್ಯ ಸಂಘಟನೆಯ ಹಿರಿಯರೊಂದಿಗೆ ಚರ್ಚಿಸಿ ತಾಲೂಕಾ ಯುವ ಘಟಕಗಳನ್ನು ರಚಿಸಿ ಜಿಲ್ಲೆಯಲ್ಲಿ ಸಮಾಜದ ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದು ಮತ್ತು ಸಮುದಾಯದ ನೊಂದವರ ಪರವಾಗಿ ಸದಾ ಧ್ವನಿಯಾಗಬೇಕೆಂದು ಈ ನೇಮಕಾತಿ ಆದೇಶದ ಮೂಲ ತಿಳಸಿದ್ದಾರೆ.