ಬಹುಜನ ದಲಿತ ಸಂಘರ್ಷ ಸಮಿತಿಯ ವಿವಿಧ ತಾಲೂಕು ಪದಾಧಿಕಾರಿಗಳ ನೇಮಕ

ಬಹುಜನ ದಲಿತ ಸಂಘರ್ಷ ಸಮಿತಿಯ ವಿವಿಧ ತಾಲೂಕು ಪದಾಧಿಕಾರಿಗಳ ನೇಮಕ
ಕಲಬುರಗಿ: ಬಹುಜನ ದಲಿತ ಸಂಘರ್ಷ ಸಮಿತಿಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಲೆಂಗಟಿ ಹಾಗೂ ಕೆ ಕೆ ಭಾಗದ ಅಧ್ಯಕ್ಷ ಭೀಮಶಂಕರ ಕದಮ್ ಅವರ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ವಿವಿಧ ತಾಲೂಕಿನ ಪದಾಧಿಕಾರಿಗಳ ನೇಮಕ ಮಾಡಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಘಟನೆಯ ಶಾಲು ಹೊದಿಸಿ ಆದೇಶ ಪತ್ರ ನೀಡಿದರು.
ಬಹುಜನ ದಲಿತ ಸಂಘರ್ಷ ಸಮಿತಿ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್ ಎಲ್ ಸ್ರಿಂಗೇರಿ ಇನ್ನು ಸಭೆಗೂ ಮುನ್ನ ಬುದ್ದ, ಬಸವ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ ನಮಿಸಿದರು. ತದನಂತರ ನಡೆದ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಈ ವೇಳೆ ಮಾತನಾಡಿದ ಬಹುಜನ ದಲಿತ ಸಂಘರ್ಷ ಸಮಿತಿಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಲೇಂಗಟಿ ಅವರು, ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ತಾಲೂಕುವಾರು ನೂತನ ಪಧಾದಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ತಿಳಿಸಿದರು..
ಬಹುಜನ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕುಮಾರ್ ದೊಡ್ಡಮನಿ ತಾಲೂಕ ಪದಾಧಿಕಾರಿಗಳು
ನಿಂಗಪ್ಪ ಹನುಮಂತ ಮಾಲಗತ್ತಿ ಸಾಕಿನ್ : ಹಿರೇ ಯಡ್ರಾಮಿ ತಾಲೂಕ ಅಧ್ಯಕ್ಷರು ರವಿಕಾಂತ್ ಮಲ್ಲಪ್ಪ ಹೊಸಮನಿ ಯಡ್ರಾಮಿ ತಾಲೂಕ ಉಪಾಧ್ಯಕ್ಷರುಅಶೋಕ್ ಮಾಲಗತ್ತಿ
ಕಲಾತಂಡದ ಯಡ್ರಾಮಿ ತಾಲೂಕ ಅಧ್ಯಕ್ಷರು ಬಾಬು ಮಾಲಗತ್ತಿ ಯಡ್ರಾಮಿ ತಾಲೂಕ ಹಿರಿಯ ಸಲಹೆಗಾರರು. ನಾಗಪ್ಪ ಹೊಸಮನಿ. ಸೇರಿದಂತೆ ಅನೇಕ ಜನರು ಸಂಘಟನೆಗೆ ಬೆಂಬಲ ನೀಡಿದರು.