ಅತಿ ಶೀಘ್ರದಲ್ಲಿ ಜಯದೇವ ಆಸ್ಪತ್ರೆ ಅಂತಿಮ ಹಂತದ ಕೆಲಸ ಮುಗಿಸಲು ಡಿ.ಸಿ. ಸೂಚನೆ
ಅತಿ ಶೀಘ್ರದಲ್ಲಿ ಜಯದೇವ ಆಸ್ಪತ್ರೆ ಅಂತಿಮ ಹಂತದ ಕೆಲಸ ಮುಗಿಸಲು ಡಿ.ಸಿ. ಸೂಚನೆ
ಕಲಬುರಗಿ: ಕೆ.ಕೆ.ಆರ್.ಡಿ.ಬಿ.ಯ ಸುಮಾರು 222 ಕೋಟಿ ರೂ. ಅನುದಾನದಿಂದ ನಿರ್ಮಿಸಲಾಗುತ್ತಿರುವ ಕಲಬುರಗಿ ನಗರದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಆಸ್ಪತ್ರೆಗೆ 22 ಅ. ರಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿದ್ದರು.
ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರು 371 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ ಮಾಡಲು ನಿರ್ಧರಿಸಿದ್ದು, ಕೂಡಲೆ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಅತಿ ಶೀಘ್ರದಲ್ಲಿ ಮುಗಿಸುವಂತೆ ಸಂಸ್ಥೆಯ ಇಂಜಿನೀಯರ್ ಮತ್ತು ಗುತ್ತಿಗೆದಾರರಿಗೆ ಡಿ.ಸಿ ಅವರು ನಿರ್ದೇಶನ ನೀಡಿದರು.
ಡಿ.ಸಿ ಅವರು ಕಟ್ಟಡದ ನೀಲಿ ನಕ್ಷೆ ವೀಕ್ಷಿಸಿದ ನಂತರ ಆಸ್ಪತ್ರೆ ಒಳಾವರಣ, ಅಡಿಟೋರಿಯಂ ಹಾಗೂ ಇತರೆ ವಿಭಾಗಗಳನ್ನು ವೀಕ್ಷಿಸಿದರು .
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಜಯದೇವ ಆಸ್ಪತ್ರೆಯ ಇಂಜಿನಿಯರ್ ಶ್ರೀಪಾದ ಸೇರಿದಂತೆ ಉಪಸ್ಥಿತರಿದ್ದರು.