ಕಮಲನಗರ: ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಬಿಳ್ಕೊಡುಗೆ ಸಮಾರಂಭ

ಕಮಲನಗರ: ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಬಿಳ್ಕೊಡುಗೆ ಸಮಾರಂಭ

ಕಮಲನಗರ: ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಬಿಳ್ಕೊಡುಗೆ ಸಮಾರಂಭ

ಕಮಲನಗರದ ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ, ಮತ್ತು ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ಗ್ರಾಜ್ಯುಯೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯ ಪ್ರಾಂಶುಪಾಲರಾದ ಶ್ರೀಧರ ರೆಡ್ಡಿಯವರು ಸಮಾರಂಭವನ್ನು ನೇರವೇರಿಸಿದರು. ಈ ವೇಳೆ ಸಮಾರಂಭವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ನಾಡೋಜ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, "ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳು ಏನನ್ನು ಬೇಕಾದರೂ ಸಾಧಿಸಬಹುದು. 10ನೇ ತರಗತಿಯ ನಂತರ ಪಿ.ಯು.ಸಿ ವರೆಗೆ ಮೂರು ವರ್ಷಗಳ ಪರಿಶ್ರಮ ಇಡೀ ಜೀವನವನ್ನು ರೂಪಿಸಬಹುದು. ವಿದ್ಯಾರ್ಥಿಗಳು ಸದಾ ತಮ್ಮ ಶಾಲೆಯ ಮೌಲ್ಯಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು," ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ನಿರಂಜನ ಸ್ವಾಮೀಜಿ ಮತ್ತು ಮಹಾಲಿಂಗ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಘಾಳೆ, "ಈ ಭಾಗದ ಶಾಲೆಗಳಲ್ಲಿ ಸಂಸ್ಕಾರಯುತ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ," ಎಂದು ಶ್ಲಾಘಿಸಿದರು.

ಮುಖ್ಯ ಅಥಿತಿಗಳಾದ ಡಾ. ಸುವರ್ಣಾ ಬಿರಾಜದಾರ ಅವರು ಮಕ್ಕಳೊಂದಿಗೆ ಬೆರೆಯುತ್ತಾ ಜೀವನದ ಪ್ರಾಮುಖ್ಯತೆ ಕುರಿತು ಪ್ರೇರಣಾದಾಯಕ ಕಥೆಗಳನ್ನು ಹಂಚಿಕೊಂಡರು. ಅತಿಥಿಗಳಾದ ಡಾ. ಪದ್ಮಾಸಿಂಹ ಅವರು "ಯಶಸ್ವಿ ಜೀವನಕ್ಕಾಗಿ ಪ್ರಯತ್ನ ಮತ್ತು ಸಮತೋಲಿತ ಆಹಾರ ಅವಶ್ಯಕ," ಎಂದು ಮಕ್ಕಳಿಗೆ ಸಲಹೆ ನೀಡಿದರು.

ಸಮಾರಂಭದಲ್ಲಿ ಬೀದರಿನ ಉದ್ಯಮಿಗಳಾದ ತರದ ಬಿರಾದರ ಮತ್ತು ಉದಗೀರಿನ ಉದ್ಯಮಿಗಳಾದ ವಿಶಾಲ ಪಾಟೀಲ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿಯರಾದ ಮಹೇಶ್ವರಿ ಅವಿನಾಶ ಮತ್ತು ತನುಶ್ರೀ ಮಹೇಶ್ ಸಂಯೋಜಿಸಿ ಯಶಸ್ವಿಯಾಗಿ ನಿರೂಪಿಸಿದರು.