ಕಲಬುರಗಿ ಬಂದ್‌ಗೆ ನೇಕಾರ ಮಹಾಸಭೆಯ ಬೆಂಬಲ

ಕಲಬುರಗಿ ಬಂದ್‌ಗೆ ನೇಕಾರ ಮಹಾಸಭೆಯ ಬೆಂಬಲ
ಕಲಬುರಗಿ, ಅ.13 : ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಡಿಯಲ್ಲಿ ಇಂದು ನಡೆದ ಕಲಬುರಗಿ ಬಂದ್ ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ನೇಕಾರ ಮಹಾಸಭೆಯ ಸಂಚಾಲಕರು ಹಾಗೂ ನ್ಯಾಯವಾದಿ ಜೆನವೇರಿ ವಿನೋದಕುಮಾರ ಅವರು ಪಾಲ್ಗೊಂಡು ರೈತ ಮತ್ತು ನೇಕಾರರ ಪರ ಬೆಂಬಲ ಸೂಚಿಸಿದರು.
ಮಾತನಾಡಿದ ಅವರು, “ಈ ಭಾಗದ ರೈತರು ಹತ್ತಿ ಬೆಳೆ ಬೆಳೆಸಲು ಮಾಡಿದ ಶ್ರಮ ಅತಿವೃಷ್ಟಿಯಿಂದ ವ್ಯರ್ಥವಾಗಿದೆ. ರೈತರ ಪಾಡು ಪರಿಗಣಿಸದೆ ಇರುವ ಸಂಸದರು, ಮಂತ್ರಿಗಳು ಹಾಗೂ ಶಾಸಕರು ನೈತಿಕತೆ ಆಧಾರದ ಮೇಲೆ ರಾಜೀನಾಮೆ ನೀಡಿ ರೈತರ ಧ್ವನಿಯಾಗಿ ನಿಲ್ಲಬೇಕು,” ಎಂದು ಆಗ್ರಹಿಸಿದರು.
ಇದಲ್ಲದೆ, “ಭಾರತದಲ್ಲಿ ಏಳು ಕಡೆ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಹಿಂದಿನಲ್ಲೇ ಘೋಷಣೆ ಮಾಡಿದ ಕಲಬುರಗಿಯ PM MITRA ಯೋಜನೆಗೆ ತಕ್ಷಣ ಚಾಲನೆ ನೀಡಬೇಕು. ನೇಕಾರರ ಮತ್ತು ರೈತರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ,” ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ನಾಯಕರು, ನೇಕಾರ ಸಮುದಾಯದ ಪ್ರತಿನಿಧಿಗಳು ಮತ್ತು ಹಲವಾರು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.