ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ-ಆಳಂದದಲ್ಲಿ ಬೃಹತ್ ಪ್ರತಿಭಟನೆಗೆ ಹಿರೇಮಠ ಕರೆ

ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ-ಆಳಂದದಲ್ಲಿ ಬೃಹತ್ ಪ್ರತಿಭಟನೆಗೆ ಹಿರೇಮಠ ಕರೆ

ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ-ಆಳಂದದಲ್ಲಿ ಬೃಹತ್ ಪ್ರತಿಭಟನೆಗೆ ಹಿರೇಮಠ ಕರೆ

ಕಲಬುರಗಿ: ರಾಜ್ಯದ ಕಬ್ಬು ಬೆಳೆಗಾರರಿಗೆ ಸರ್ಕಾರ ಘೋಷಿಸಿರುವ ₹3300 ಬೆಲೆ ನೀಡದಿರುವುದನ್ನು ಖಂಡಿಸಿ ಹಾಗೂ ಕಾರ್ಖಾನೆಗಳ ರಿಕವರಿ ಗೊಂದಲದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಶ್ರಮ ಜೀವಿಗಳ ವೇದಿಕೆ ಮತ್ತು ಆಳಂದ ತಾಲೂಕಾ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಜರುಗಲಿದೆ.

ಈ ಪ್ರತಿಭಟನೆ ನವೆಂಬರ್ 17, ಸೋಮವಾರ ಬೆಳಿಗ್ಗೆ 10 ಗಂಟೆಗೆ ಆಳಂದ ತಾಲೂಕಿನ ಭೂಸನೂರದಲ್ಲಿರುವ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ಎದುರು ನಡೆಯಲಿದೆ ಎಂದು ಶ್ರಮ ಜೀವಿಗಳ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರು ಮಾತನಾಡಿ — “ಆಳಂದ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ರೈತರು ಕಾರ್ಖಾನೆಯ ಶೋಷಣೆಯಿಂದ ನರಳುತ್ತಿದ್ದಾರೆ. ಕಾರ್ಖಾನೆಗಳು ‘ರಿಕವರಿ’ ಹೆಸರಿನಲ್ಲಿ ಆಟವಾಡುತ್ತಿದ್ದು, ಸರ್ಕಾರವೂ ಅವರ ನಂಬಿಕೆಯಲ್ಲಿ ದರ ನಿಗದಿ ಮಾಡುತ್ತಿರುವುದು ದುರಂತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಾರ್ಖಾನೆಗಳು ಮನಬಂದಂತೆ ರಿಕವರಿ ಶೇಕಡಾವಾರು ನೀಡುತ್ತಿವೆ, ಇದು ರೈತರ ಪಾಲಿಗೆ ಶೂಲವಾಗಿದೆ. ಕಬ್ಬು ಕಟಾವು ಮತ್ತು ಸಾಗಣೆಯಲ್ಲಿಯೂ ಅನ್ಯಾಯ ನಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಅವರು ಒತ್ತಾಯಿಸಿದರು.

ಈ ಹೋರಾಟವು ಪಕ್ಷಾತೀತ ಮತ್ತು ಜಾತ್ಯಾತೀತ ಸ್ವರೂಪದ್ದಾಗಿದ್ದು, ಕೇವಲ ರೈತರ ಹಿತಾಸಕ್ತಿಗಾಗಿ ನಡೆಯಲಿದೆ. ಈಗಾಗಲೇ ವಿವಿಧ ಹಳ್ಳಿಗಳಲ್ಲಿ ಪೂರ್ವಭಾವಿ ಸಭೆಗಳು ನಡೆದಿದ್ದು, ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹಿರೇಮಠ ಹೇಳಿದರು.

ಈ ವೇಳೆ ರೇಣುಕಾಚಾರ್ಯ ಮತ್ತು ರಾಜು ಜೈನ್ ,ಅಣವೀರ ಪಾಟೀಲ, ಗಿರೀಶ್ ಗೌಡ ಇನಾಮದಾರ ಉಪಸ್ಥಿತರಿದ್ದರು.

ಚಂದ್ರಶೇಖರ ಎಸ್. ಹಿರೇಮಠರಾಜ್ಯಾಧ್ಯಕ್ಷರು, ಶ್ರಮ ಜೀವಿಗಳ ವೇದಿಕೆ