ಬಂದ ಕರೆ ಯಶಸ್ವಿ: ನಗರದಲ್ಲಿ ಶಾಂತಿಪೂರ್ಣ ಪ್ರತಿಭಟನೆ ನಡೆಸಿದರ ರೈತರು

-ಕಲಬುರಗಿ ನಗರದಲ್ಲಿ ರೈತ-ದಲಿತ ಸಂಘಟನೆಗಳ ಹೋರಾಟ: ಹಸಿ ಬರಗಾಲ ಘೋಷಣೆ ಮತ್ತು ಪರಿಹಾರಕ್ಕೆ ಒತ್ತಾಯ
ಕಲಬುರಗಿ, 13 ಅಕ್ಟೋಬರ್ 2025: ಅತಿವೃಷ್ಟಿ ಮತ್ತು ಪ್ರವಾಹದಿಂದ ತೀವ್ರ ಬೆಳೆ ಹಾನಿ ಅನುಭವಿಸಿರುವ ಕಲಬುರಗಿ ಜಿಲ್ಲೆಗೆ ತಕ್ಷಣವೇ 'ಹಸಿ ಬರಗಾಲ' ಘೋಷಣೆ ಮತ್ತು ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಕನ್ನಡಪರ, ಮಹಿಳಾ ಪರ, ಕಾರ್ಮಿಕ ಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ಇಂದು ನಗರದ ವಿವಿಧ ಸ್ಥಳಗಳಲ್ಲಿ ಶಾಂತಿಪೂರ್ಣ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್ ಕೆ ಕಾಂತ ಭಾಗವಹಿಸಿದರು.
ಪ್ರಮುಖ ಬೇಡಿಕೆಗಳು:
* ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು.
* ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.
* ಹಸಿ ಬರಗಾಲ ಪ್ರದೇಶವಾಗಿ ಘೋಷಣೆ ಮಾಡಬೇಕು.
* ಬೀಜ ಮತ್ತು ರಸಗೊಬ್ಬರ ಉಚಿತವಾಗಿ ಒದಗಿಸಬೇಕು.
* ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕು.
ಪ್ರತಿಭಟನೆ ಸ್ಥಳಗಳು:
* ಕೇಂದ್ರ ಬಸ್ ನಿಲ್ದಾಣ
* ಆಳಂದ ಚೆಕ್ ಪೋಸ್ಟ್
* ರಾಮಮಂದಿರ ಸರ್ಕಲ್ (ಜೇವರ್ಗಿ ರಸ್ತೆ)
* ಹುಮನಾಬಾದ್ ರಿಂಗ್ ರೋಡ್
* ಹೀರಾಪುರ ಕ್ರಾಸ್
* ಹೈಕೋರ್ಟ್ ರಸ್ತೆ ಸಮೀಪದ ಅಫಜಲಪುರ ರಿಂಗ್ ರೋಡ್
* ಶಹಾಬಾದ್ ರಿಂಗ್ ರೋಡ್ ಸಮೀಪ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದಯಾನಂದ ಪಾಟೀಲ್, ಶರಣಬಸಪ್ಪ ಮಮಶೆಟ್ಟಿ, ಮೌಲಮುಲ್ಲಾ, ಉಮಾಪತಿ ಪಾಟೀಲ ನಂದೂರ,ಜಗದೇವಿ ಹೆಗಡೆ, ಮಂಜುಳ ಭಜಂತ್ರಿ, ನಾಗೇಂದ್ರಪ್ಪ ಥಂಬೆ, ಕರೆಪ್ಪಾ ಕರಗೊಂಡ, ಸಿದ್ದು ಎಸ್. ಎಲ್ ಮಹಾಂತಗೌಡ ನಂದಿಹಳ್ಳಿ, ಎಲ್ ಮಲ್ಲನಗೌಡ ಪಾಟೀಲ್, ದೀಲಿಪ್ ಪಾಟೀಲ್, ಶರಣು ಸೇರಿ ಅನೇಕರು ಭಾಗವಹಿಸಿದ್ದರು.
ಬೆಂಬಲ ವ್ಯಕ್ತಪಡಿಸಿದ ಸಂಘಟನೆಗಳು:
* ಕೆಕೆಸಿಸಿಐ
* ವೈನ್ ಶಾಪ್ ಮಾಲೀಕರು
* ಹಮಾಲಾರ ಸಂಘ
* ಪೆಟ್ರೋಲ್ ಬಂಕ್ ಮಾಲೀಕರು
* ಕಿರಾಣಿ ವ್ಯಾಪಾರಸ್ಥರು
* ಅಡತ ಮಾಲೀಕರ ಸಂಘ
* ಕಪಾಡ ಬಜಾರ್ ಮಾಲೀಕರ ಸಂಘ
* ಬೀದಿ ವ್ಯಾಪಾರಿಗಳು
* ಲಾರಿ ಮಾಲೀಕರ ಸಂಘ
* ದಾಲ್‌ಮಿಲ್ ಸಂಘ
* ಆಟೋ ಚಾಲಕರ ಸಂಘ
* ಹೋಟೆಲ್ ಮಾಲೀಕರ ಸಂಘ
* ಖಾಸಗಿ ಶಾಲೆಗಳು
* ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ
* ರೈತ, ದಲಿತ, ಕನ್ನಡಪರ, ಮಹಿಳಾ ಪರ, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಪರ ಸಂಘಟನೆಗಳು ಹಾಗೂ ವಿವಿಧ ಕಲ್ಯಾಣ ಕರ್ನಾಟಕ ಹೋರಾಟ ಸಂಘಟನೆಗಳು
ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆಲವ ರೈತರು ಕಣ್ಣೀರು ಹಾಕಿ ತಮ್ಮ ಅಳಲನ್ನು ತೋಡಿಕೊಂಡರು