ಸಮೀಕ್ಷೆ ವೇಳೆ ದ್ವಿಚಕ್ರ ವಾಹನ ಡಿಕ್ಕಿ-ಶಿಕ್ಷಕ ಉಸ್ಮಾನ ಕಾಲು ಮೂಳೆ ಮುರಿತ

ಸಮೀಕ್ಷೆ ವೇಳೆ ದ್ವಿಚಕ್ರ ವಾಹನ ಡಿಕ್ಕಿ-ಶಿಕ್ಷಕ ಉಸ್ಮಾನ ಕಾಲು ಮೂಳೆ ಮುರಿತ
ಕಲಬುರಗಿ: ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಭಾಷಾ ಪ್ರಭಾರಿ ಮುಖ್ಯಗುರು ಶ್ರೀ ಉಸ್ಮಾನ ರವರು ಶಿಕ್ಷಣ ಇಲಾಖೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಮಯದಲ್ಲಿ ರಸ್ತೆ ಮಧ್ಯದಲ್ಲಿ ನಿಂತಿದ್ದ ವಾಹನದ ಬಾಗಿಲು ಅಚಾನಕ್ ತೆರೆಯಲ್ಪಟ್ಟ ಪರಿಣಾಮ ಅವರ ದ್ವಿಚಕ್ರ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಉಸ್ಮಾನ ರವರಿಗೆ ಎಡಗಾಲಿನ ಮೂಳೆ ಮುರಿತ ಉಂಟಾಗಿದ್ದು, ಪ್ರಸ್ತುತ ಕಲಬುರಗಿ ಪಿ.ಜಿ. ಶಾಹಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ (ದಕ್ಷಿಣ ವಲಯ) ಶ್ರೀ ವಿಜಯಕುಮಾರ ಜಮಖಂಡಿ ರವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಶಿಕ್ಷಕರ ಆರೋಗ್ಯ ವಿಚಾರಿಸಿದರು ಮತ್ತು ಶೀಘ್ರ ಚೇತರಿಕೆಗೆ ಶುಭ ಹಾರೈಸಿದರು.
ಕಲ್ಬುರ್ಗಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಶ್ರೀ ಬಸವರಾಜ ಬಳುಂಡಗಿ, ಹಾಗೂ ಪದಾಧಿಕಾರಿಗಳು ಹಾಜರಾಗಿ ಉಸ್ಮಾನ್ ಭಾಷಾ ರವರ ಆರೋಗ್ಯ ವಿಚಾರಿಸಿದರು.