ಅಧಿಕೃತ ವಿದೇಶ ಪ್ರವಾಸಗಳಿಗೆ ಸರ್ಕಾರದಿಂದ ನಿರ್ಭಂಧ

ಅಧಿಕೃತ ವಿದೇಶ ಪ್ರವಾಸಗಳಿಗೆ ಸರ್ಕಾರದಿಂದ ನಿರ್ಭಂಧ

ಅಧಿಕೃತ ವಿದೇಶ ಪ್ರವಾಸಗಳಿಗೆ ಸರ್ಕಾರದಿಂದ ನಿರ್ಭಂಧ

ಬೆಂಗಳೂರು, ಸೆಪ್ಟೆಂಬರ್ 23:ರಾಜ್ಯ ಸರ್ಕಾರದ ಅಧಿಕಾರಿಗಳ ಅಧಿಕೃತ ವಿದೇಶ ಪ್ರವಾಸಗಳಿಗೆ ತಕ್ಷಣದಿಂದಲೇ ನಿರ್ಭಂಧ ಜಾರಿಯಾಗಿದೆ. ಈ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿಗಳು ಅನುಮೋದಿಸಿದ್ದು, 2025ರ ಸಾಲಿನ ಅಂತ್ಯದವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ನಿರ್ಭಂಧ ಮುಂದುವರಿಯಲಿದೆ ಎಂದು ಸರ್ಕಾರ ಪ್ರಕಟಿಸಿದೆ.

2024ರ ಆಗಸ್ಟ್ ತಿಂಗಳಿನಿಂದ 2025ರ ಜುಲೈವರೆಗೆ ಅಧಿಕಾರಿಗಳು ಕೈಗೊಂಡ ವಿದೇಶ ಪ್ರವಾಸಗಳ ಕುರಿತು ಕಲಿಕೆ ಹಾಗೂ ಶಿಫಾರಸುಗಳನ್ನೊಳಗೊಂಡ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಸರ್ಕಾರದ ವತಿಯಿಂದ ಸೂಚನೆ ನೀಡಲಾಗಿತ್ತು. ಆದರೆ, ಹಲವು ಅಧಿಕಾರಿಗಳು ವರದಿ ಸಲ್ಲಿಸದೆ ಇರುವ ಸಂಗತಿ ಸರ್ಕಾರದ ಗಮನಕ್ಕೆ ಬಂದಿದೆ.

ಇದರಿಂದ ಮುಂದಿನ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಲಿರುವ ಪ್ರಸ್ತಾವನೆಗಳನ್ನು ಪರಿಗಣಿಸುವ ಮೊದಲು, ಹಿಂದಿನ ಪ್ರವಾಸದ ಕಲಿಕೆ ಹಾಗೂ ಅನುಷ್ಠಾನ ವರದಿ ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮ ಜಾರಿಯಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)ಯ ಅಧೀನ ಕಾರ್ಯದರ್ಶಿ ಟಿ. ಮಹಂತೇಶ್ ಈ ವರದಿ ಕುರಿತು ಆದೇಶ ನಡೆಸಿದ್ದಾರೆ 

---